ವಿಟ್ಲ | ಪೊಲೀಸ್ ಪೇದೆಯನ್ನು ಕೂಡ ಬಿಡಲಿಲ್ಲ ಕಿಲ್ಲರ್ ಕೋರೋನಾ

ವಿಟ್ಲ : ದ.ಕ. ಜಿಲ್ಲೆಯಲ್ಲಿ ಇಂದು ಒಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಮುಂಬೈನಿಂದ ಬಂದ ವ್ಯಕ್ತಿಯ ಸಂಪರ್ಕದಿಂದಾಗಿ ವಿಟ್ಲ ಪೊಲೀಸ್ ಠಾಣೆ ಪೇದೆಗೆ ಕೊರೊನಾ ದೃಢಪಟ್ಟಿದೆ.

ಮೇ 14 ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತ ಕ್ವಾರಂಟೈನ್‌ಗೆ ಒಳಗಾಗುವ ಮುನ್ನ ಪೊಲೀಸ್ ಠಾಣೆಗೆ ಹೋಗಿದ್ದ ಎಂದು ತಿಳಿದು ಬಂದಿದೆ. ಆ ಸಂದರ್ಭದಲ್ಲಿ ಸೋಂಕು ಆತನಿಂದ ಪೇದೆಗೆ ಹರಡಿತ್ತು.

ಪೊಲೀಸರನ್ನು ಕೊರೊನಾ ಪರೀಕ್ಷೆ ನಡೆಸಿದ ವೇಳೆ ಒರ್ವ ಪೊಲೀಸ್ ಪೇದೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಇವತ್ತಿಗೆ ರಾಜ್ಯದಲ್ಲಿ ಒಟ್ಟು 2000 ಗಡಿ ದಾಟಿದ ಕೋರೋನಾ ಸೋಂಕಿತ ಸಂಖ್ಯೆ ನಿನ್ನೆಯವರೆಗೆ ಇದು 1959 ಇತ್ತು. ರಾಜ್ಯದಲ್ಲಿ ಇವತ್ತು ಕೂಡಾ ದಾಖಲಾಗುವ ರೋಗಿಗಳಲ್ಲಿ ಹೆಚ್ಚಿನವರು ಮುಂಬೈ ಮೂಲದಿಂದ ಬಂದವರು.

ದೇಶದಲ್ಲಿ ಇಂದು ಒಂದೇ ದಿನ 6,767 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

Leave A Reply

Your email address will not be published.