ರೋಸ್ಟರ್ ಪ್ರಕಾರ ಗ್ರಾ.ಪಂ.ಗೆ ಸದಸ್ಯರ ನಾಮನಿರ್ದೇಶನ | ಸ್ಥಳೀಯ ಶಾಸಕರ ಉಸ್ತುವಾರಿಯಲ್ಲಿ ಆಯ್ಕೆ | ಡಿ.ಸಿ.ಗೆ ಸಂಪೂರ್ಣ ಜವಾಬ್ದಾರಿ

ಕೊರೊನಾ ಕಾರಣದಿಂದಾಗಿ ಗ್ರಾ.ಪಂ.ಸದಸ್ಯರ ಅವಧಿ ಮುಗಿದರೂ ಚುನಾವಣೆ ನಡೆಯದಿರುವುದರಿಂದ ರೋಸ್ಟರ್ ಪ್ರಕಾರ ಸದಸ್ಯರ ನಾಮ ನಿರ್ದೇಶನ ಮಾಡಲಾಗುತ್ತದೆ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಪ್ರಸ್ತುತ ಗ್ರಾ.ಪಂ.ಗಳಲ್ಲಿ ಎಷ್ಟು ಸದಸ್ಯರಿರುತ್ತಾರೋ,ಅಷ್ಟೇ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಒಂದು ಸ್ಥಾನವನ್ನೂ ಕೂಡ ಹೆಚ್ಚಳ ಅಥವಾ ಕಡಿಮೆ ಮಾಡುವುದೂ ಇಲ್ಲ ಎಂದಿದ್ದಾರೆ.


ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅಭಿಪ್ರಾಯ ಪಡೆಯುತ್ತಿದೆ.ಆಯೋಗ ಯಾವಾಗ ಚುನಾವಣೆ ನಡೆಸುತ್ತದೋ ಅಂದಿಗೆ ನಾಮ‌ ನಿರ್ದೇಶಿತ ಆಡಳಿತ ಮಂಡಳಿ ಅಧಿಕಾರ ಮುಗಿಯಲಿದೆ.ಈ ಕುರಿತ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬೇರೆ ಪಕ್ಷದವರನ್ನು ಕೈ ಬಿಟ್ಟು ಬಿಜೆಪಿಯವರ ಆಯ್ಕೆ?

ಈ ನಡುವೆ ಈ ಕುರಿತಂತೆ ಈಗಿರುವ ಗ್ರಾ.ಪಂ.ಗಳಲ್ಲಿ ಸದಸ್ಯರಾಗಿರುವ ಬೇರೆ ಪಕ್ಷದ ಪ್ರತಿನಿಧಿಗಳನ್ನು ಕೈ ಬಿಟ್ಟು ಬಿಜೆಪಿ ಪಕ್ಷದ ಕಾರ್ಯಕರ್ತರ ಆಯ್ಕೆ ನಡೆಯಲಿದೆ ಎನ್ನಲಾಗಿದೆ.

ಬೇರೆ ಪಕ್ಷದ ಸದಸ್ಯರು ಆಯ್ಕೆಯಾದಲ್ಲಿ ಅವರ ಪ್ರತಿಸ್ಪರ್ಧಿಯಾಗಿ 5ವರ್ಷಗಳ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಮುನಿಸಿಗೆ ಕಾರಣವಾದೀತು


ಈ ಬೆಳವಣಿಗೆಗಳು ಬಿಜೆಪಿಯೇತರ ಸದಸ್ಯರ ಹಾಗೂ ಪಕ್ಷದ ಮುನಿಸಿಗೂ ಕಾರಣವಾಗಲಿದೆ.

ಅಲ್ಲದೆ ಬಿಜೆಪಿಯಲ್ಲೂ ಪಕ್ಷದ ಚಟುವಟಿಕೆಯಲ್ಲಿಯೇ ತೊಡಗಿಸದವರ ಆಯ್ಕೆಯಾದರೆ ಅದೂ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಲಿದೆ ಎನ್ನಲಾಗಿದೆ.

Leave A Reply

Your email address will not be published.