ಸುಳ್ಯ ಜ್ಯೋತಿ ಸರ್ಕಲ್ ಬಳಿ ಚೆಕ್ ಪೋಸ್ಟ್ ಅಳವಡಿಕೆ | ವಾಹನಗಳ ತಪಾಸಣೆ

ಸುಳ್ಯದಲ್ಲಿ ಲಾಕ್ ಡೌನ್ ನಿಯಮ ಇಂದು ಕಟ್ಟುನಿಟ್ಟಾಗಿ ಇದ್ದು ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ. ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಮುಂತಾದ ಅಂಗಡಿ ಮುಂಗಟ್ಟುಗಳು ತೆರೆದಿದೆ.

ಇವತ್ತು ಭಾನುವಾರ ಆದುದರಿಂದ ಮಾಂಸಪ್ರಿಯರಿಗಾಗಿ ಮಾಂಸದಂಗಡಿಗಳು ಬಾಗಿಲು ತೆರೆದು ವ್ಯಾಪಾರ ಪ್ರಾರಂಭಿಸಿವೆ.

ಜ್ಯೋತಿ ಸರ್ಕಲ್ ಬಳಿ ಚೆಕ್ ಪೋಸ್ಟ್ ಅಳವಡಿಸಲಾಗಿದ್ದು, ಠಾಣಾ ಅಧಿಕಾರಿಗಳು ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಇಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಸಂಪೂರ್ಣ ಸಂಡೇ ಲಾಕ್ ಡೌನ್ ನಿನ್ನೆ ಸಂಜೆ 7 ಯಿಂದಲೆ ಜಾರಿಯಲ್ಲಿ ಇರುವುದರಿಂದ ದೂರದ ಊರಿಂದ ಬರುವ ವಾಹನಗಳು ಕಂಡುಬರುತ್ತಿಲ್ಲ. ಆದರೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ವಿರಳ ವಾಹನ ಓಡಾಟ ಸುಳ್ಯ ಪೇಟೆಯಲ್ಲಿ ಕಂಡುಬರುತ್ತಿದೆ.

ಅನಗತ್ಯ ಓಡಾಟ ನಡೆಸುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.