Home Business ಸಾಕುಪ್ರಾಣಿಗಳಿಗೆ ಸಂಬಂಧಿಸಿದಂತೆ ಖುಷಿಯ ಸುದ್ದಿ | ಇನ್ಮುಂದೆ ಸಿಗಲಿದೆ ಟ್ರೈನ್ ಸೀಟ್ ! ಹೊಸ ಯೋಜನೆ...

ಸಾಕುಪ್ರಾಣಿಗಳಿಗೆ ಸಂಬಂಧಿಸಿದಂತೆ ಖುಷಿಯ ಸುದ್ದಿ | ಇನ್ಮುಂದೆ ಸಿಗಲಿದೆ ಟ್ರೈನ್ ಸೀಟ್ ! ಹೊಸ ಯೋಜನೆ ರೈಲ್ವೇ ಇಲಾಖೆಯಿಂದ

Hindu neighbor gifts plot of land

Hindu neighbour gifts land to Muslim journalist

ರೈಲಿನಲ್ಲಿ ಇನ್ನುಮುಂದೆ ಸಾಕುಪ್ರಾಣಿಗಳನ್ನು ಸಹ ನಿಮ್ಮ ಜೊತೆ ಕರೆದುಕೊಂಡು ಹೋಗಬಹುದಾಗಿದೆ. ಹೌದು ಸಾಕು ಪ್ರಾಣಿಗಳಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಹೊಸ ಸೌಲಭ್ಯವನ್ನು ಆರಂಭಿಸುತ್ತಿದೆ.

ಇದೀಗ ಈಶಾನ್ಯ ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಸಾಕು ನಾಯಿಗಳಿಗೆ ಪ್ರತ್ಯೇಕ ಜಾಗ ಒದಗಿಸುವ ವಿನ್ಯಾಸಕ್ಕೆ ಅನುಮೋದನೆ ನೀಡಿದ್ದಾರೆ. ಪ್ರಯಾಣಿಕರ ನಾಯಿಗಳ ಗೂಡುಗಳನ್ನು ಇಡಲು ರೈಲುಗಳ ಪವರ್ ಕಾರ್‌ಗಳನ್ನು ತಯಾರಿಸಲಾಗುವುದು ಎಂದು ಎನ್‌ಇಆರ್ ಪರವಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಂಕಜ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ .

ರೈಲಿನಲ್ಲಿ ಸಂಚರಿಸುವ ಪ್ರಯಾಣದ ಸಮಯದಲ್ಲಿ ಸಾಕುಪ್ರಾಣಿಗಳು ಕಾವಲುಗಾರರ ಮೇಲ್ವಿಚಾರಣೆಯಲ್ಲಿರುತ್ತವೆ. ಆದರೆ ಆ ಪ್ರಾಣಿಗಳ ಮಾಲೀಕರು ತಮ್ಮ ಪ್ರಾಣಿಗಳಿಗೆ ಆಹಾರ ಮತ್ತು ಇತರ ವ್ಯವಸ್ಥೆಗಳನ್ನು ಮಾಡಿರಬೇಕು. ಅಧಿಕಾರಿಗಳ ಪ್ರಕಾರ, ಈಶಾನ್ಯ ರೈಲ್ವೆ ವರ್ಕ್ ಶಾಪ್ ನಲ್ಲಿ ಈಗಾಗಲೇ ನಾಯಿಗಳಿಗಾಗಿ ಸ್ಥಳವನ್ನು ಮೀಸಲಿಡುವ ಕೆಲಸವನ್ನು ಪ್ರಾರಂಭಿಸಿದೆ. ಬೇಡಿಕೆ ಮೇರೆಗೆ ಈ ಸೇವೆ ನೀಡಲಾಗುವುದು ಎಂದು ಸಿಪಿಆರ್‌ಒ ಮಾಹಿತಿ ನೀಡಿದ್ದಾರೆ.