Wheat Price In 1987: ಒಂದು ಕೆಜಿ ಗೋಧಿ ಬೆಲೆಯ ಬೆಲೆ 1987 ರಲ್ಲಿ ಎಷ್ಟಿತ್ತು?

ನಾವು ಯಾವುದೇ ವಸ್ತು ಖರೀದಿಸಿದಾಗ ಜೊತೆಗೆ ಬಿಲ್ ದೊರೆಯುತ್ತದೆ. ಕೆಲವೊಂದು ಬಿಲ್ ನಾವು ಜೋಪಾನವಾಗಿ ಇರಿಸಿಕೊಳ್ಳುತ್ತೇವೆ. ನಂತರ ಕೆಲವು ವರ್ಷಗಳ ನಂತರ ಅದೇ ಬಿಲ್ ನೋಡಿದಾಗ ಆಶ್ಚರ್ಯ ಎನಿಸುತ್ತದೆ. ಅದೇ ರೀತಿ ಇತ್ತೀಚೆಗೆ ಹಳೆಯ ಬಿಲ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ. ಇದೀಗ 1987ರಲ್ಲಿ ಖರೀದಿಸಿದ ಗೋಧಿಯ ಬೆಲೆ ಬಿಲ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

ಹೌದು ಇದೀಗ ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಅಜ್ಜನ “ಜೆ ಫಾರ್ಮ್” ನ ಬಿಲ್​ನ್ನು ಟ್ವಿಟರ್​​​ ಮೂಲಕ ಹಂಚಿಕೊಂಡಿದ್ದಾರೆ. ಜೆ ಫಾರ್ಮ್​ ಎಂದರೆ ಧಾನ್ಯ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳ ಮಾರಾಟದ ರಶೀದಿಯಾಗಿದೆ. ಇದರಲ್ಲಿ 1987ರಲ್ಲಿ ಒಂದು ಕೆಜಿ ಗೋಧಿಗೆ 1.6 ರೂಪಾಯಿ ಇತ್ತು ಎಂದು ತೋರಿಸುತ್ತದೆ.

ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು 1987 ರ ಬಿಲ್‌ನ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ. ಗೋಧಿಯ ಬೆಲೆ ಕೆಜಿಗೆ ₹ 1.6 ಆಗಿತ್ತು ಎಂದು ಕೂಡ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.

ಹಿಂದೆ ಗೋಧಿ ಕೆಜಿಗೆ 1.6 ರೂಪಾಯಿ ಇತ್ತು. ನನ್ನ ಅಜ್ಜ 1987 ರಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾರಾಟ ಮಾಡಿದ ಗೋಧಿ ಬೆಳೆ ಬಿಲ್​​ ಇದು. ಅವರಿಗೆ ಎಲ್ಲಾ ದಾಖಲೆಗಳನ್ನು ಹಾಗೆಯೇ ಸಂಗ್ರಹ ಮಾಡಿ ಇಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಇದೀಗ ಈ ಪೋಸ್ಟ್ ನ್ನು ಸಾವಿರಾರು ಜನ ವೀಕ್ಷಿಸಿದ್ದು ಅಲ್ಲದೆ ಸಾವಿರಾರು ಲೈಕು ಮತ್ತು ಸಾಕಷ್ಟು ಕಾಮೆಂಟ್​​ಗಳನ್ನು ಮಾಡಿದ್ದಾರೆ. ಸದ್ಯ ನೀವು ಸಹ ನಿಮ್ಮ ಪೂರ್ವಜರು ಸಂಗ್ರಹಣೆ ಮಾಡಿರುವ ಇಂತಹ ಬಿಲ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳಬಹುದು.

Leave A Reply

Your email address will not be published.