Tulsi Plant Vastu: ನಿಮಗೆ ತಿಳಿದಿರಲಿ, ತುಳಸಿ ಸುತ್ತ ಇಂತಹ ವಸ್ತುಗಳನ್ನು ಇಡುವುದು ದಾರಿದ್ರ್ಯಕ್ಕೆ ಆಹ್ವಾನ ನೀಡಿದಂತೆ !

Tulsi plant Vastu tips remove these things from the basil trea otherwise you will be out of luck

Tulsi plant Vastu: ತುಳಸಿ ಇಲ್ಲದೇ ಹಿಂದೂ ಸಂಪ್ರದಾಯದಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಹೌದು ತುಳಸಿ ಅಂದರೆ ತನ್ನದೇ ಆದ ಸ್ಥಾನ ಮಾನ ಹೊಂದಿದೆ. ಹಿಂದೂ ಸಂಪ್ರದಾಯ ಪ್ರಕಾರ ತುಳಸಿ ಬಗೆಗಿನ ಹಲವಾರು ನಂಬಿಕೆಗಳಿವೆ ಹಾಗೆಯೇ ತುಳಸಿ(Tulsi plant Vastu) ಸುತ್ತ ಕೆಲವೊಂದು ವಸ್ತುಗಳನ್ನು ಇಡುವುದು ಬಡತನಕ್ಕೆ ಆಹ್ವಾನ ಮಾಡುತ್ತದೆ.

ಮುಖ್ಯವಾಗಿ ಧಾರ್ಮಿಕ ಗ್ರಂಥಗಳ ಪ್ರಕಾರ, ಮನೆಯಲ್ಲಿ ತುಳಸಿ ಸಸ್ಯದ ಸುತ್ತ ಮುತ್ತಲೂ ಕೆಲವು ವಸ್ತುಗಳನ್ನು ಇಡದಂತೆ ಸಲಹೆ ನೀಡಲಾಗಿದೆ

  • ಮುಖ್ಯವಾಗಿ ತುಳಸಿ ಗಿಡದ ಪಕ್ಕದಲ್ಲಿ ಚಪ್ಪಲಿ ಇಡುವುದರಿಂದ ದಾರಿದ್ರ್ಯ ಮತ್ತು ಬಡತನ ನಿಮ್ಮನ್ನು ಸುತ್ತಿಕೊಳ್ಳುತ್ತವೆ ಆದ್ದರಿಂದ ಚಪ್ಪಲಿ ಮತ್ತು ಶೂ ಗಳನ್ನು ತುಳಸಿ ಗಿಡದಿಂದ ದೂರದಲ್ಲಿ ಇರಿಸಿ.
  • ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡದ ಸುತ್ತಮುತ್ತ ಮುಳ್ಳಿನ ಗಿಡಗಳನ್ನು ಇಡುವ ತಪ್ಪನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕತೆ ಹರಡುತ್ತದೆ.
  • ಪೊರಕೆಯನ್ನು ಲಕ್ಷ್ಮಿ ಸ್ವರೂಪ ಎಂದು ಭಾವಿಸಲಾಗಿದೆ. ಆದರೆ, ತುಳಸಿ ಗಿಡದ ಆಸುಪಾಸಿನಲ್ಲಿ ಪೊರಕೆ ಇಡುವುದರಿಂದ ಅಂತಹ ಮನೆಯಲ್ಲಿ ದಾರಿದ್ರ್ಯ ವಕ್ಕರಿಸುತ್ತದೆ ಎಂದು ಹೇಳಲಾಗುತ್ತದೆ.
  • ತುಳಸಿ ವಿಷ್ಣು ಪ್ರಿಯೆ. ಹಾಗಾಗಿಯೇ, ಶಿವನ ಆರಾಧನೆಯನ್ನು ಸ=ತುಳಸಿಯನ್ನು ಬಳಸಲಾಗುವುದಿಲ್ಲ. ಹೀಗಿರುವಾಗ ತುಳಸಿ ಸಸ್ಯದ ಬಳಿ ಶಿವಲಿಂಗ ಇಡುವುದರಿಂದ ಶಿವನ ಕೋಪಕ್ಕೆ ತುತ್ತಾಗಬಹುದು ಎನ್ನಲಾಗುತ್ತದೆ.
  • ತುಳಸಿಯನ್ನು ಪವಿತ್ರ ಸಸ್ಯ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ, ಈ ಸಸ್ಯಕ್ಕೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಆದರೆ, ಗೊತ್ತೋ ಅಥವಾ ಗೊತ್ತಿಲ್ಲದೆಯೋ ಈ ಸಸ್ಯದ ಬಳಿ ಕಸ ಹಾಕುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದರಿಂದ ಮನೆಯಲ್ಲಿ ಬಡತನ ಆವರಿಸಿಕೊಳ್ಳುತ್ತದೆ ಎನ್ನಲಾಗಿದೆ.

ಕೆಲವೊಂದು ತಪ್ಪುಗಳು ಮಾಡುವುದರಿಂದ ಅದು ಜೀವನದ ಮೇಲೆ ಕೆಲವೊಂದು ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಧಾರ್ಮಿಕ ಗ್ರಂಥಗಳ ಪ್ರಕಾರ, ಮನೆಯಲ್ಲಿ ತುಳಸಿ ಸಸ್ಯದ ಸುತ್ತ ಮುತ್ತಲೂ ಕೆಲವು ವಸ್ತುಗಳನ್ನು ಇಡದಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ: Tulasi Vastu: ಯಾವತ್ತಿಗೂ ತುಳಸಿ ಗಿಡದ ಪಕ್ಕದಲ್ಲಿ ಇವುಗಳನ್ನು ಇರಿಸಬೇಡಿ! ದಾರಿದ್ರ್ಯ ಕಟ್ಟಿಟ್ಟ ಬುತ್ತಿ

Leave A Reply

Your email address will not be published.