Home Interesting ಜಸ್ಟ್‌ ನಿದ್ದೆ ಮಾಡಿ 15ಲಕ್ಷ ನಿಮ್ಮದಾಗಿಸಿಕೊಳ್ಳಿ | ಒಳ್ಳೆ ಕೆಲಸ ಅಲ್ವಾ? ನಿಜಾರೀ, ನೀವೂ ಅಪ್ಲೈ...

ಜಸ್ಟ್‌ ನಿದ್ದೆ ಮಾಡಿ 15ಲಕ್ಷ ನಿಮ್ಮದಾಗಿಸಿಕೊಳ್ಳಿ | ಒಳ್ಳೆ ಕೆಲಸ ಅಲ್ವಾ? ನಿಜಾರೀ, ನೀವೂ ಅಪ್ಲೈ ಮಾಡಿ

Hindu neighbor gifts plot of land

Hindu neighbour gifts land to Muslim journalist

ಇಂದಿನ ದಿನಗಳಲ್ಲಿ ವಿದ್ಯಾವಂತರು ಕೆಲಸ ಇಲ್ಲದೆ ಮನೆಯಲ್ಲೇ ಕೂರುವಂತಾಗಿದೆ. ಒಂದು ವೇಳೆ ಕೆಲಸ ಸಿಕ್ಕಿದರೂ ಕಡಿಮೆ ಸಂಬಳ. ಅದರಲ್ಲಿ ಕೊನೆಗೆ ಉಳಿಯೋದು ಅಂಗೈಯಗಲದಷ್ಟು ಮಾತ್ರ. ಅಲ್ಲದೆ, ಕೆಲಸ ಸುಲಭವಾಗಿರಬೇಕು, ಕೈತುಂಬಾ ಸಂಬಳ ಸಿಗಬೇಕು ಅನ್ನೋದು ಜನರ ಅಪೇಕ್ಷೆ. ಸಾಮಾನ್ಯವಾಗಿ ಕೆಲಸ ಅಂದ್ರೆ ಕಷ್ಟಪಟ್ಟು ದುಡಿಯಬೇಕು. ಆದರೆ ಇಲ್ಲಿ ಇರೋ ಕೆಲಸ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ!! ಯಾಕಂದ್ರೆ ಈ ಕೆಲಸ ಅಂತದ್ದು, ಜಸ್ಟ್ ಬೆಡ್ ಮೇಲೆ ನಿದ್ರೆ ಮಾಡೋ ಕೆಲಸ, ಈ ಉದ್ಯೋಗಕ್ಕೆ ಸಂಬಳ ಕೇಳಿದ್ರೆ ಹೌಹಾರ್ತಿರಾ!! ಎಷ್ಟು ಗೊತ್ತಾ? ಬರೋಬ್ಬರಿ 15 ಲಕ್ಷ ರೂ. ಇನ್ನೂ, ಯಾರಪ್ಪಾ ಇಂತಾ ಕೆಲಸ ಜೊತೆಗೆ ಇಷ್ಟು ಸಂಬಳ ಕೊಡ್ತಾರೆ ಅಂತಾ ಯೋಚಿಸ್ತಿದ್ರೆ, ಈ ವಿಚಿತ್ರ ಕೆಲಸಕ್ಕೆ ನಾಸಾ ಸಂಬಳ ಕೊಡಲಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೇವಲ ಎರಡು ತಿಂಗಳುಗಳ ಕಾಲ ನಿದ್ರಿಸಬಲ್ಲ ಜನರ ಹುಡುಕಾಟದಲ್ಲಿದೆ. ನಂಬಲಸಾಧ್ಯವಾದ ವಿಷಯ ಏನಂದ್ರೆ, ಈ ಕೆಲಸಕ್ಕೆ 24 ಮಂದಿಗೆ ನಾಸಾ 15 ಲಕ್ಷ ರೂಪಾಯಿಗಿಂತ ಅಧಿಕ ಹಣ ನೀಡಲಿದೆ. ಇನ್ನೂ, ನಾಸಾ ಯಾವ ಹೊಸ ಸಂಶೋಧನೆ ನಡೆಸಲು ಹೊರಟಿದೆ ಎಂದು ನೋಡೋಣ.

ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಮತ್ತು ನಾಸಾದ ಜರ್ಮನ್ ಏರೋಸ್ಪೇಸ್ ಸೆಂಟರ್ ಜೊತೆಯಾಗಿ ಕೃತಕ ಗುರುತ್ವಾಕರ್ಷಣೆಯ ಆಧಾರದ ಮೇಲೆ ಮಲಗುವ ಬಗ್ಗೆ ಅಧ್ಯಯನವನ್ನು ನಡೆಸುತ್ತಿವೆ. ಅಧ್ಯಯನದಲ್ಲಿ ಭಾಗವಹಿಸುವವರು ಎರಡು ತಿಂಗಳ ಕಾಲ ಕೃತಕ ಗುರುತ್ವಾಕರ್ಷಣೆಯಲ್ಲಿ ಬದುಕಬೇಕಾಗುತ್ತದೆ.

ಈ ವಾತಾವರಣದಲ್ಲಿ ದೀರ್ಘಕಾಲ ಬದುಕಿದ ನಂತರ, ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ನಾಸಾ ಈ ಸಂಶೋಧನೆ ನಡೆಸಲು ಸಜ್ಜಾಗಿದೆ. ಇನ್ನೂ, ಈ ಎರಡು ತಿಂಗಳ ನಿದ್ರೆಗೆ ಸುಮಾರು 15 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಹಾಗೇ ಗಗನಯಾತ್ರಿಗಳು ಮತ್ತು ವಿಜ್ಞಾನಿಗಳು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕೆಲಸ ಮಾಡುತ್ತಾರೆ. ನಾಸಾ ಮೊದಲ ಬಾರಿಗೆ ಈ ಅಧ್ಯಯನವನ್ನು ನಡೆಸುತ್ತಿದ್ದು, 24 ರಿಂದ 55 ವರ್ಷ ವಯಸ್ಸಿನ 12 ಪುರುಷರು ಮತ್ತು 12 ಮಹಿಳೆಯರು ಈ ಅಧ್ಯಯನದಲ್ಲಿ ಭಾಗವಹಿಸಲಿದ್ದಾರೆ.