ಶ್ರದ್ಧಾ ಕೊಲೆ ಕಂಡಿದ್ದ ಮಂದಿಗೆ ಮತ್ತೆ ಶಾಕ್!! ರಸ್ತೆಯುದ್ದಕ್ಕೂ ಯುವತಿಯ ದೇಹವನ್ನು ಎಳೆದ ಕಾರು-ಅಸಲಿಗೆ ಏನು??

ದೆಹಲಿ:ಕಾರು ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ, ಸ್ಕೂಟಿಯಿಂದ ರಸ್ತೆಗೆ ಎಸೆಯಲ್ಪಟ್ಟ ಯುವತಿಯನ್ನು ಕಾರು ರಸ್ತೆಯುದ್ದಕ್ಕೂ ಎಳೆದುಕೊಂಡು ಹೋದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗಾಬರಿಗೊಂಡ ಭೀಭತ್ಸ ಘಟನೆಯು ದೆಹಲಿಯಲ್ಲಿ ನಡೆದಿದೆ.

 

ಮೃತ ಯುವತಿಯನ್ನು ಅಮನ್ ವಿಹಾರ್ ನಿವಾಸಿ ಅಂಜಲಿ(20) ಎಂದು ಗುರುತಿಸಲಾಗಿದ್ದು, ಈಕೆ ದೆಹಲಿಯ ಸುಲ್ತಾನ್ ಪುರಿಯ ರಸ್ತೆಯ ಮೂಲಕ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಕಾರೊಂದು ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎನ್ನಲಾಗಿದೆ.

ಅಪಘಾತವೆಸಗಿದ ಕಾರು ಯುವತಿಯ ದೇಹವನ್ನು ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದು, ಶ್ರದ್ಧಾ ಕೊಲೆ ಕಂಡಿದ್ದ ದೆಹಲಿ ಮಂದಿಗೆ ಈ ಘಟನೆಯೂ ಅದೇ ರೀತಿ ತೋಚಿದ್ದರಿಂದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದಾಗಿ ಕೆಲ ಹೊತ್ತಿನಲ್ಲೇ ರಸ್ತೆಯಲ್ಲಿ ಶವ ಬಿದ್ದಿದೆ ಎನ್ನುವ ಕರೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಅದಾಗಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಅಪಘಾತ ಎನ್ನುವ ಸ್ಪಷ್ಟನೆ ನೀಡಿದ್ದು, ಅಪಘಾತದ ಬಳಿಕ ಪರಾರಿಯಾದ ಕಾರು ಸಹಿತ ಚಾಲಕನ ಪತ್ತೆಗೆ ತನಿಖೆ ಮುಂದುವರಿದಿದೆ.

Leave A Reply

Your email address will not be published.