Home Interesting ಮನೆಗಳ ಮುಂದೆ ನಿಗೂಢ ಚೀಟಿಗಳ ರಾಶಿ | ಅದರಲ್ಲಿ ಒಂದು ಒಂದು ಭಯಾನಕ ವಾಕ್ಯ

ಮನೆಗಳ ಮುಂದೆ ನಿಗೂಢ ಚೀಟಿಗಳ ರಾಶಿ | ಅದರಲ್ಲಿ ಒಂದು ಒಂದು ಭಯಾನಕ ವಾಕ್ಯ

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಮಾಡೋ ಜೋಡಿಗಳು ತಮ್ಮೆಲ್ಲಾ ಪ್ರೀತಿ-ಪ್ರೇಮದ ನಿವೇದನೆಗಳನ್ನು ಪತ್ರದ ಮೂಲಕ ಬರೆಯುವುದುಂಟು. ಆದರೆ, ಇಲ್ಲೊಬ್ಬ ಕಿಡಿಗೇಡಿ ಅಶ್ಲೀಲವಾದ ಪತ್ರವನ್ನು ಬರೆಯುವುದಲ್ಲದೆ ತನ್ನನ್ನು ಸಂಪರ್ಕಿಸಿ ಎಂದು ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಬರೆದು ಮನೆಯಂಗಳದಲ್ಲಿ ಬಿಸಾಡಿ, ಸಿಕ್ಕಿಹಾಕಿಕೊಂಡ ಘಟನೆ ಬೆಳಕಿಗೆ ಬಂದಿದೆ.

ನವರಾಯಪುರ ಪ್ರದೇಶದಲ್ಲಿ ಕೆಲ ಮನೆಗಳ ಮುಂದೆ ಚೀಟಿಯೊಂದು ಕಂಡಿದೆ. ಅದನ್ನು ತೆಗೆದು ನೋಡಿದಾಗ, ಪ್ಲೇಬಾಯ್ ರಾಕಿ ಎಂದು ಬರೆಯಲಾಗಿದ್ದು, ಸಂಪರ್ಕ ಸಂಖ್ಯೆಯನ್ನೂ ನಮೂದಿಸಲಾಗಿತ್ತು. ಇದನ್ನು ಕಂಡ ಮನೆಯವರು ಅಚ್ಚರಿಯ ಜೊತೆ ಕುಪಿತರಾಗಿದ್ದಾರೆ. ಪ್ಲೇ ಬಾಯ್ ರಾಕಿ ಸೇರಿದಂತೆ ಅಶ್ಲೀಲ ಬರಹವುಳ್ಳ ಚೀಟಿಯನ್ನು ಕಾಲೊನಿಯ 10 ಕ್ಕೂ ಅಧಿಕ ಮನೆಗಳ ಮುಂದೆ ಕಿಡಿಗೇಡಿಗಳು ಬಿಸಾಡಿದ್ದರು. ಈ ಸುದ್ದಿ ನಿಧಾನವಾಗಿ ಕಾಲೊನಿಯಲ್ಲಿ ಹಬ್ಬಿಕೊಂಡು ಮನೆಯ ಮುಂದೆ ಚೀಟಿ ಸಿಕ್ಕವರು, ಕಿಡಿಗೇಡಿ ಯುವಕರನ್ನು ಪ್ರಶ್ನಿಸಿದ್ದಾರೆ.

ಯುವಕ ಏನೂ ಹೇಳದೆ ಸುಮ್ಮನಿದ್ದ. ಇನ್ನೂ ಯಾವುದೇ ಪ್ರಯೋಜನ ಇಲ್ಲ, ಈತನಿಗೆ ಪೋಲೀಸರೇ ಬುದ್ದಿ ಕಲಿಸಲಿ ಎಂದು ಜನರೆಲ್ಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಅದೇ ಕಾಲೋನಿಯ ಯುವಕನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಸಂಚು ರೂಪಿಸಿದ ಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ. ಯಾರದ್ದೋ ಹೆಸರು ಬಳಸಿಕೊಂಡು ಕಿಡಿಗೇಡಿಗಳು ತಮ್ಮ ಸಂಪರ್ಕಸಂಖ್ಯೆಯನ್ನು ನಮೂದಿಸಿ ಚೀಟಿ ಎಸೆದಿರುವ ಸಾಧ್ಯತೆಯು ಇರಬಹುದು ಎಂಬ ಸಣ್ಣ ಅನುಮಾನವು ಹುಟ್ಟಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.