ಡಿ.31 ರಂದು ಕುಡಿದು ಟೈಟಾಗುವವರಿಗೆ ಪೊಲೀಸರಿಂದ ಗುಡ್‌ನ್ಯೂಸ್
ಹೊಸ ವರ್ಷದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಡಗರದಲ್ಲಿ ಮಿಂದೇಳುವ ಜನರ ರಕ್ಷಣೆಗೆ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಅಣಿಯಾಗಿದೆ. ನ್ಯೂ ಇಯರ್ ಸಮಯದಲ್ಲಿ ಮದ್ಯಪ್ರಿಯರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪೊಲೀಸರು ಬಂಪರ್ ಪ್ಲಾನ್ ಮಾಡಿಕೊಂಡಿದ್ದಾರೆ.
ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲೆಡೆ ಹೊಸ ವರ್ಷಕ್ಕೆ ಭರದ ತಯಾರಿ ನಡೆಯುತ್ತಿದ್ದು, ಹೀಗಾಗಿ ಬೆಂಗಳೂರು ಪೊಲೀಸ್ ಇಲಾಖೆ ರಕ್ಷಣೆಯನ್ನು ಮನಗಂಡು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ವರ್ಷಾಚರಣೆ ವೇಳೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ತಯಾರಿ ನಡೆಸಲಾಗುತ್ತಿದೆ. ಸದ್ಯ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಿ ತೇಲಾಡುವ ಮಂದಿಯ ರಕ್ಷಣೆಗೆ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಸಿದ್ದತೆ ನಡೆಸಿದೆ.
ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್ಎಸ್ಆರ್ ಲೇಔಟ್ ನಲ್ಲಿ ಸಂಪೂರ್ಣ ಭದ್ರತೆಗೆ ತಯಾರಿ ಮಾಡಲಾಗಿದೆ. ಆಗ್ನೇಯ ವಿಭಾಗದಲ್ಲಿ 108 ಪಬ್, ರೆಸ್ಟೋರೆಂಟ್ಗಳಿದ್ದು, ಪ್ರತಿಯೊಂದು ಪಬ್, ರೆಸ್ಟೋರೆಂಟ್ ಮುಂದೆಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಪರಮಾತ್ಮ ಒಳಗೆ ಸೇರಿದಂತೆ ಫುಲ್ ಟೈಟಾಗಿ ಕುಡಿದು ತೂರಾಡುವ ಜೊತೆಗೆ ಪ್ರಜ್ಞೆ ತಪ್ಪಿ ಬೀಳುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಯುವಕ, ಯುವತಿ ಯಾರೇ ಎಣ್ಣೆಯ ಮಹಿಮೆಗೆ ಕುಡಿದು ತೂರಾಡುತ್ತಿದ್ದರು ಕೂಡ ಅವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ಡಿ. 31ರ ರಾತ್ರಿ ಮಾತ್ರ ಈ ಸೇವೆ ಇರಲಿದ್ದು, ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಅವರು ಈ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕುಡಿದ ಅಮಲಿನಲ್ಲಿ ಕುಣಿಯುತ್ತಾ ಗಾಯ ಮಾಡಿಕೊಂಡವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದ್ದು ಇಲ್ಲವೇ ಆಕಸ್ಮಿಕವಾಗಿ ಹಬ್ಬದ ಸಂಭ್ರಮದಲ್ಲಿ ಆರೋಗ್ಯ ಸಮಸ್ಯೆ ಎದುರಾದರೆ ಹೀಗಾಗಿ, ಪೊಲೀಸರಿಂದಲೇ ಆ್ಯಂಬುಲೆನ್ಸ್ ಸೇವೆ ಕಲ್ಪಿಸಲಾಗುತ್ತದೆ. .
ಪಬ್ ಒಳಗೆ ಜೊತೆಗೆ ಎಂಟ್ರಿ ಆಗುವಲ್ಲಿ ಇಬ್ಬರು ಬಾಡಿಗಾರ್ಡ್ಸ್ ಇರಬೇಕು. ಪೊಲೀಸರ ರೀತಿಯಲ್ಲೇ ಎಲ್ಲರ ಮೇಲೆ ಕಣ್ಣಿಡಬೇಕಾಗಿದ್ದು, ಓಲಾ, ಊಬರ್, ಆ್ಯಪ್ ಆಧಾರಿತ ಟ್ರಾನ್ಸ್ ಪೋರ್ಟ್ ಸರ್ವೀಸ್ ಅವರಿಗೆ ಟ್ರಾಫಿಕ್ ಆಗದಂತೆ ಒಂದು ಜಾಗದಲ್ಲಿ ಪಾರ್ಕಿಂಗ್ ಮಾಡಲು ಸೂಚನೆ ನೀಡಲಾಗಿದೆ.
ಈಗಾಗಲೇ ಆಗ್ನೇಯ ವಿಭಾಗದ ಡಿಸಿಪಿ ಖಾಸಗಿ ಆಸ್ಪತ್ರೆ ಜೊತೆ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಆರೋಗ್ಯ ಇಲಾಖೆಗೂ ಆ್ಯಂಬುಲೆನ್ಸ್ಗಳಿಗಾಗಿ ಪತ್ರ ಬರೆದಿದ್ದಾರೆ. ಪಬ್, ರೆಸ್ಟೋರೆಂಟ್ಗಳಿಗೆ ಎಂಟ್ರಿಯಾಗೋ ಪ್ರತಿಯೊಬ್ಬರ ಮುಖನೂ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಲಿದೆ. ಎಂಟ್ರಿ ಬಾಗಿಲಲ್ಲೇ ಪೊಲೀಸರಿಗೆ ಮಾಸ್ಕ್ ತೆಗೆದು ಚಹರೆ ತೋರಿಸಬೇಕಾಗುತ್ತದೆ.
ಸೆಲೆಬ್ರೇಷನ್ ವೇಳೆ ಹಾಗೂ ಸೆಲೆಬ್ರೇಷನ್ ಬಳಿಕ ಕೆಲವರಿಂದ ಅಸಭ್ಯ ವರ್ತನೆ, ಕಳ್ಳತನ ಈ ರೀತಿಯ ಕೃತ್ಯ ನಡೆಯುವ ಸಂಭವವಿದೆ. ಈ ರೀತಿ ಕೃತ್ಯ ನಡೆಸಿ ತಪ್ಪಿಸಿಕೊಳ್ಳುವ ಯೋಜನೆ ಹಾಕುವವರ ಮೇಲೆ ಪೊಲೀಸರು ಕಣ್ಣು ಇದಲಿದ್ದು,ಎಂಟ್ರಿಯಾಗೋ ಪ್ರತಿಯೊಬ್ಬರ ಫೋಟೋ, ಡಿಟೈಲ್ಸ್ ಪೊಲೀಸರು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.