Home News ಮಗು ಹೆರಲಿಲ್ಲವೆಂದು ಹೆಂಡತಿಯ ಗುಪ್ತಾಂಗವನ್ನೇ ಬ್ಲೇಡ್‌ನಿಂದ ಕೊಯ್ದ ಸೈಕೋ ಗಂಡ

ಮಗು ಹೆರಲಿಲ್ಲವೆಂದು ಹೆಂಡತಿಯ ಗುಪ್ತಾಂಗವನ್ನೇ ಬ್ಲೇಡ್‌ನಿಂದ ಕೊಯ್ದ ಸೈಕೋ ಗಂಡ

Hindu neighbor gifts plot of land

Hindu neighbour gifts land to Muslim journalist

ಕೆಲವೊಮ್ಮೆ ದಬ್ಬಾಳಿಕೆ ಅನ್ನೋದು ಯಾರಿಗೆ ಯಾವ ರೀತಿ ಆದರೂ ಆಗಬಹುದು. ಹೌದು ಕೆಲವೊಂದು ಸಲ ಹೆಣ್ಣಾಗಿ ಹುಟ್ಟಬಾರದು ಅನ್ನಿಸುವಷ್ಟು ಸಮಾಜದಲ್ಲಿ ಹೆಣ್ಣಿಗೆ ಹಿಂಸೆ ನೀಡುವವರು ಇದ್ದಾರೆ ಇಂತಹ ಅನ್ಯಾಯಗಳಿಗೆ ಕೊನೆ ಇಲ್ಲವೇನೋ ಅಥವಾ ಜನರಿಗೆ ಕಾನೂನಿನ ಭಯ ಇಲ್ಲವೋ ಅರ್ಥ ಆಗುತ್ತಿಲ್ಲ.

ಇದೀಗ ಇಲ್ಲೊಬ್ಬ ಮದುವೆಯಾಗಿ 6 ವರ್ಷಗಳೇ ಕಳೆದರೂ ಒಂದು ಮಗುವನ್ನು ಹೆತ್ತುಕೊಡಲಿಲ್ಲ ಎಂದು ಪತ್ನಿಯನ್ನು ಸದಾ ಗೋಳು ಹಾಕುತ್ತ, ಮೂದಲಿಸುತ್ತ, ಜಗಳವಾಡುತ್ತಿದ್ದ. ಅಷ್ಟು ಸಾಲದ್ದಕ್ಕೆ ತನ್ನ ಹೆಂಡತಿಯ ಗುಪ್ತಾಂಗವನ್ನು ಬ್ಲೇಡ್ ನಿಂದ ಕೊಯ್ದು ಗಾಯಗೊಳಿಸಿದ್ದಾನೆ.ಸದ್ಯ ತೀರಾ ರಕ್ತ ಸ್ರಾವ ಆದ್ದರಿಂದ ಆಕೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ಪ್ರಕಾರ ಉತ್ತರ ಪ್ರದೇಶದ ಲಖನೌದ ರವೀಂದ್ರ ಎಂಬಾತ ತನ್ನ ಪತ್ನಿ ಬಸುರಾಗಲಿಲ್ಲ ಎಂಬ ಕಾರಣಕ್ಕೆ ಕೋಪದಿಂದ ಈ ಕೃತ್ಯ ಎಸಗಿದ್ದಾನೆ. ಮದುವೆಯಾಗಿ ಆರು ವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಇತ್ತೀಚೆಗೆ ದಂಪತಿ ಮಧ್ಯೆ ಜಗಳವಾಗುತ್ತಿತ್ತು.

ಗಂಡನ ಕಾಟ ತಡೆಯಲಾಗದ ಆಕೆ ಎಂಟು ತಿಂಗಳ ಹಿಂದೆ ತವರು ಮನೆ ಸೇರಿದ್ದರು. ಡಿಸೆಂಬರ್ 25ರಂದು ಪತ್ನಿಯಿದ್ದಲ್ಲಿಗೆ ಹೋದ ರವೀಂದ್ರ ಆಕೆಯ ಮನವೊಲಿಸಿ ವಾಪಸ್ ಕರೆದುಕೊಂಡು ಬಂದಿದ್ದ. ಹೀಗೆ ಕರೆತಂದು ಅಸಹಜ ಲೈಂಗಿಕ ಕ್ರಿಯೆ ಮುಂದಾದ. ಆದರೆ ಆಕೆ ಒಪ್ಪದ ಕಾರಣ ತನ್ನ ಪತ್ನಿಯ ಗುಪ್ತಾಂಗಕ್ಕೆ ಗಾಯ ಗೊಳಿಸಿದ್ದಾನೆ.

ಸದ್ಯ ಆರೋಪಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದು ಇನ್ನು ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ. ಸದ್ಯ ಇಂತಹ ಕ್ರೂರಿಗಳಿಗೆ ಸರಿಯಾದ ಶಿಕ್ಷೆ ಒದಗಿಸಲು ಮಹಿಳೆಯರು ಎಚ್ಚೆತ್ತು ಕೊಳ್ಳಬೇಕಾಗಿದೆ.