ಕೋಡಿಮಠ ಶ್ರೀಗಳಿಂದ ಮತ್ತೊಂದು ಭವಿಷ್ಯವಾಣಿ | ಕೊರೊನಾ 4ನೇ ಅಲೆ ಬಂದರೂ…

Share the Article

ಕೊರೊನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಅನೇಕ ಮಂದಿಯನ್ನು ಬಲಿ ಪಡೆದುಕೊಂಡ ಮಹಾಮಾರಿ ಕೋವಿಡ್ ಇದೀಗ, ಜಾಗತಿಕ ಮಟ್ಟದಲ್ಲಿ ಕೊರೊನಾ ಹರಡುತ್ತಿದ್ದು, ಅದರ ವೇಗವನ್ನು ಏರಿಸಿಕೊಳ್ಳುತ್ತಿದೆ. ಹೀಗಾಗಿ, ಜನರಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯವಾಣಿ ನುಡಿದಿದ್ದಾರೆ.

ಒಲೆ ಹೊತ್ತಿ ಉರಿದರೆ ಅಡುಗೆ ಆಗುತ್ತದೆ. ಭೂಮಿ ಹೊತ್ತಿ ಉರಿದರೆ ಏನಾಗಬಹುದು? ಈ ಪ್ರಸಂಗದ ಬಗ್ಗೆ ಮುಂದಿನ ದಿನಗಳಲ್ಲಿ ಭವಿಷ್ಯ ನುಡಿಯುವುದಾಗಿ ಕೋಡಿಮಠದ ಸ್ವಾಮೀಜಿ (Kodi Mutt Swamiji) ಹೇಳಿದ್ದು, ಯಾವ ವಿಚಾರದ ಬಗ್ಗೆ ಶ್ರೀಗಳು ಒಗಟಾಗಿ ಹೇಳಿದ್ದಾರೆ ಎಂಬ ಬಗ್ಗೆ ಜನರಲ್ಲಿ ಚರ್ಚೆ ನಡೆಯುತ್ತಿದೆ.

ಇದರ ಜೊತೆಗೆ ಕರ್ನಾಟಕ ರಾಜಕೀಯ ವಿಚಾರದ ಬಗ್ಗೆ ಕೂಡ ಪ್ರಸ್ತಾಪ ಮಾಡಿರುವ ಕೋಡಿಮಠದ ಸ್ವಾಮೀಜಿ, ಪಕ್ಷಗಳಲ್ಲಿ ಒಡಕು ಮೂಡುವ ಕುರಿತು ಈ ಮೊದಲು ಹೇಳಿದ್ದು, ಅದು ನಿಜವಾಗಿದೆ ಎಂದು ಕೂಡ ಈ ಸಂದರ್ಭದಲ್ಲಿ ಹೇಳಿದ್ದಾರೆ. ಕೊರೊನಾದ ಬಗ್ಗೆ ಯಾರು ಭಯ ಭೀತರಾಗಬೇಕಾಗಿಲ್ಲ. ಕೊರೊನಾ ನಾಲ್ಕನೇ ಅಲೆ ಹೆಚ್ಚಿನ ಪ್ರಭಾವ ಬೀರದು ಎಂದು ಹೇಳಿದ್ದು, ಕೊರೊನಾ ಬರುತ್ತದೆ … ಬಂದು ಹೋಗುತ್ತದೆ ಜೊತೆಗೆ ಸಾವು ನೋವು ಸಂಭವಿಸಲ್ಲ ಹೀಗಾಗಿ, ಆತಂಕ ಪಡುವ ಅಗತ್ಯವಿಲ್ಲ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Leave A Reply