scooter offer : ಹೊಸ ಸ್ಕೂಟರ್‌ ಖರೀದಿ ಮಾಡೋರಿಗೆ ಬಂಪರ್‌ ಆಫರ್‌, ಡಿಸ್ಕೌಂಟ್‌ ಮೇಲೆ ಡಿಸ್ಕೌಂಟ್‌

ಬಹುತೇಕ ಆಟೋಮೊಬೈಲ್ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಬಂಪರ್ ಆಫರ್’ಗಳನ್ನು ನೀಡುತ್ತಾ ಬಂದಿದೆ. ನೀವೇನಾದ್ರೂ ಹೊಸ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ರೆ, ಇದೇ ಒಳ್ಳೇ ಟೈಮ್. ಯಾಕಂದ್ರೆ ನಿಮಗೆ ಅತ್ಯಾಕರ್ಷಕ ಕೊಡುಗೆ ಜೊತೆಗೆ ಭಾರಿ ರಿಯಾಯಿತಿ ಸಿಗಲಿದ್ದೂ, ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಪ್ರಿಲಿಯಾ (Aprilia) ಸ್ಕೂಟರ್‌ಗಳು ತಮ್ಮ ಪ್ರದರ್ಶನ ಹಾಗೂ ಪವರ್‌ಫುಲ್ ಎಂಜಿನ್‌ಗಳಿಂದಾಗಿ ಹೆಚ್ಚು ಪ್ರಸಿದ್ಧಿಯಾಗುತ್ತಿವೆ. ಈ ಕಾರಣದಿಂದಲೇ ಸಾಕಷ್ಟು ಗ್ರಾಹಕರು ಎಪ್ರಿಲಿಯಾಗೆ ಮಾರು ಹೋಗುತ್ತಿದ್ದಾರೆ. ಇದೀಗ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಯನ್ನು ನೀಡಿದೆ. ಎಪ್ರಿಲಿಯಾ SR 160 ಸ್ಕೂಟರ್ ಮೇಲೆ ಭಾರಿ ರಿಯಾಯಿತಿ ಲಭ್ಯವಿದೆ.

ಏನೆಲ್ಲಾ ಆಫರ್‌ಗಳೂ ಇವೆ ಎಂದು ನೋಡುವುದಾದರೆ ಉಚಿತ ಹೆಲ್ಮೆಟ್, ಶೂನ್ಯ ಡೌನ್ ಪಾವತಿಯೊಂದಿಗೆ ನೀವು ಎಪ್ರಿಲಿಯಾ ಸ್ಕೂಟರ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು.ಅಷ್ಟೇ ಅಲ್ಲ 100 ರಷ್ಟು ಆನ್ ರೋಡ್ ಫಂಡಿಂಗ್ ಸೌಲಭ್ಯವೂ ಲಭ್ಯವಿದೆ. ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಮೇಲೆ 10 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ವಿನಿಮಯ ರಿಯಾಯಿತಿ ಕೂಡ ಇದೆ. ನೀವು 8 ಸಾವಿರದವರೆಗೆ ವಿನಿಮಯ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ, ಇತರ ಕೊಡುಗೆಗಳು ಸಹ ಲಭ್ಯವಿದೆ. ಹಾಗಾಗಿ ಹೊಸ ಸ್ಕೂಟರ್ ಖರೀದಿಸುವವರಿಗೆ ಇದೊಂದು ಸುವರ್ಣವಕಾಶ ಎಂದೇ ಹೇಳಬಹುದು.

ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ಹೊಸ ಆಫರ್‌ಗಳು ಮಾನ್ಯವಾಗಿರುತ್ತದೆ. ಈ ತಿಂಗಳ ಕೊನೆಯವರೆಗೆ ಅಂದರೆ, ಮಾತ್ರ ಮಾನ್ಯವಾಗಿರುತ್ತವೆ. ಅಂದರೆ ಡಿಸೆಂಬರ್ 31 ರವರೆಗೆ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗಾಗಿ ಹೊಸ ಸ್ಕೂಟರ್ ಖರೀದಿಸುವ ಯೋಚನೆಯಲ್ಲಿದ್ದರೆ, ಈ ಆಫರ್ ಗಳು ಸಿಗಬೇಕಾದರೆ ತಕ್ಷಣ ಸ್ಕೂಟರ್ ಖರೀದಿಸುವುದು ಉತ್ತಮ.

ಆಫರ್‌ನ ಸಂಪೂರ್ಣ ವಿವರಗಳನ್ನು ತಿಳಿದುಕೊಂಡ ನಂತರವೇ ನಿಮ್ಮ ಆಯ್ಕೆಯ ಸ್ಕೂಟರ್ ಅನ್ನು ಖರೀದಿಸುವುದು ಒಳ್ಳೆಯದು. ಅಲ್ಲದೆ, ನೀವು ಸಾಲ ಪಡೆದು ದ್ವಿಚಕ್ರ ವಾಹನವನ್ನು ಖರೀದಿಸಲು ಬಯಸಿದರೆ, ನೀವು ಬಡ್ಡಿದರಗಳು ಮತ್ತು ಇತರ ಶುಲ್ಕಗಳನ್ನು ಪರಿಗಣಿಸಬೇಕು. ಮಾಸಿಕ EMI ಎಷ್ಟು ಎಂದು ಪರಿಶೀಲಿಸಿ. ಇದಲ್ಲದೇ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೂ ಆಫರ್‌ಗಳಿದ್ದೂ, ಓಲಾ, ಈಥರ್ ನಂತಹ ಹಲವು ಕಂಪನಿಗಳು ಸೂಪರ್ ಬಂಪರ್ ಆಫರ್ ಗಳನ್ನು ನೀಡುತ್ತಿವೆ.

ಓಲಾ ಸ್ಕೂಟರ್‌ನಲ್ಲಿ ರೂ. 10 ಸಾವಿರ ರಿಯಾಯಿತಿ ಲಭ್ಯವಿದೆ. ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಿದೆ. ನೀವು ಸುಲಭವಾಗಿ EMI ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ, ಈಥರ್ ಸ್ಕೂಟರ್‌ಗಳ ಮೇಲೂ ಆಫರ್‌ಗಳು ಲಭ್ಯವಿವೆ. ಇವುಗಳನ್ನು ಈಸಿ ಫೈನಾನ್ಸ್‌ನಲ್ಲಿ ಖರೀದಿಸಬಹುದು. ಈ ಸ್ಕೂಟರ್ ಅನ್ನು ಖರೀದಿಸುವ ಆಯ್ಕೆಯು ತಿಂಗಳಿಗೆ ರೂ.5 ಸಾವಿರ ಇಎಂಐನೊಂದಿಗೆ ಲಭ್ಯವಿದೆ.

Leave A Reply

Your email address will not be published.