ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು, ವೇಳಾಪಟ್ಟಿ ಇಲ್ಲಿದೆ

ರೈಲ್ವೆ ಪ್ರಯಾಣಿಕರು ಗಮನಿಸಬೇಕಾದ ಮುಖ್ಯ ಮಾಹಿತಿ ನೀಡಲಾಗಿದೆ. ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರೈಲ್ವೆ ಪ್ರಯಾಣಿಕರು ಹಬ್ಬದ ಸಂಭ್ರಮದಲ್ಲಿ ಓಡಾಟ ನಡೆಸಲಿದ್ದು, ಜನದಟ್ಟಣೆ ಕೂಡ ಹೆಚ್ಚಿರಲಿದೆ. ಈ ಸಂದರ್ಭದಲ್ಲಿ ಉಂಟಾಗುವ ಜನರ ದಟ್ಟಣೆ ತಪ್ಪಿಸಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ನೈಋತ್ಯ ರೈಲ್ವೆ ಬೆಂಗಳೂರಿನ ಯಶವಂತಪುರ- ಮಂಗಳೂರು ಜಂಕ್ಷನ್-ಯಶವಂತಪುರ ನಡುವೆ ಸಂಚಾರ ನಡೆಸುವ ವಿಶೇಷ ರೈಲನ್ನು ಘೋಷಣೆ ಮಾಡಿದ್ದು, ಈ ರೈಲು  ಒಂದು ಬಾರಿ ಮಾತ್ರ ಸಂಚಾರ ನಡೆಸಲಿದೆ.

ಯಶವಂತಪುರದಿಂದ ಹೊರಡುವ ರೈಲು ಚಿಕ್ಕಬಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್‌ಗಳಲ್ಲಿ ನಿಲುಗಡೆ ಯಾಗಲಿದೆ.

ರೈಲು ನಂಬರ್ 06565/ 06566 ರೈಲು ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ನಡುವೆ ಸಂಚಾರ ನಡೆಸಲಿದ್ದು, ಈ ವಿಶೇಷ ರೈಲಿಗೆ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಡಿಸೆಂಬರ್ 27ರ ಮಂಗಳವಾರ ಶುರುವಾಗಲಿದೆ.

ರೈಲು ಸಂಖ್ಯೆ 06565 ಯಶವಂಮತಪುರ-ಮಂಗಳೂರು ಜಂಕ್ಷನ್ ರೈಲು ಯಶವಂತಪುರದಿಂದ ಡಿಸೆಂಬರ್ 28ರಂದು ಯಶವಂತಪುರದಿಂದ 23:55ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 9.50ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ರೈಲು ಸಂಖ್ಯೆ 06566 ಮಂಗಳೂರು ಜಂಕ್ಷನ್-ಯಶವಂತಪುರ ರೈಲು ಡಿಸೆಂಬರ್ 29ರಂದು 17 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಯಶವಂತಪುರ ಜಂಕ್ಷನ್ಗೆ ತಲುಪಲಿದೆ.

ಈ ರೈಲು 4 ಎಸಿ 2 ಟೈರ್, 11 ಎಸಿ 3 ಟೈರ್, 1 ಸಾಮಾನ್ಯ ಸೆಕೆಂಡ್ ಕ್ಲಾಸ್, 1 ಲಗ್ಗೇಜ್ ಕಂ ಬ್ರೇಕ್ ವ್ಯಾನ್ ಹೊಂದಿರಲಿದ್ದು, ಹಬ್ಬದ ಸಂಭ್ರಮದಲ್ಲಿ ಓಡಾಟ ನಡೆಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ರಜಾ ದಿನಗಳಲ್ಲಿನ ಜನರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ರೈಲು ಸಂಚಾರ ನಡೆಸಲಿದೆ. ಇದು ಕೇವಲ ಜನದಟ್ಟಣೆಯ ಸಮಸ್ಯೆ ತಡೆಯಲು ಕೇವಲ ಕೆಲ ದಿನಗಳು ಮಾತ್ರ ಓಡಾಟ  ನಡೆಸುತ್ತವೆ ಅಲ್ಲದೆ ಯಾವುದೇ ಕಾರಣಕ್ಕೂ ಈ ಸೇವೆ  ಮುಂದುವರೆಯುವುದಿಲ್ಲ ಎಂಬುದನ್ನು ರೈಲ್ವೆ ಪ್ರಯಾಣಿಕರು ಗಮನಿಸಬೇಕು.

Leave A Reply

Your email address will not be published.