ಗೂಗಲ್‌ ಹೊರ ತರುತ್ತಿರುವ ಈ ಹೊಸ ಫೀಚರ್‌ ಬಗ್ಗೆ ನಿಜಕ್ಕೂ ನೀವು ತಿಳಿಯಲೇ ಬೇಕು | ಇದು ನಿಜಕ್ಕೂ ಅಮೇಜಿಂಗ್‌

Share the Article

ಆಧುನಿಕ ಜಗತ್ತಿನಲ್ಲಿ ಪ್ರಸ್ತುತ ನಾವೆಲ್ಲರೂ ಸ್ಮಾರ್ಟ್‌ಫೋನಿನಲ್ಲೇ ಅಗತ್ಯ ದಾಖಲೆಗಳು, ಪಾಸ್‌ವರ್ಡ್‌ ಮತ್ತು ಖಾಸಗಿ ಮಾಹಿತಿ ಎಲ್ಲವನ್ನು, ದಾಖಲೆಗಳ ಫೋಟೋ ಮುಂತಾದವುಗಳನ್ನು ಸ್ಟೋರ್‌ ಮಾಡಿಕೊಂಡಿರುತ್ತೆವೆ. ಹೀಗಾಗಿ ಅನಿವಾರ್ಯವಾಗಿ ಸ್ಮಾರ್ಟ್‌ಫೋನ್‌ ಬಿಟ್ಟಿರಲಾರದ ಪರಿಸ್ಥಿತಿ ಉಂಟಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಅಥವಾ ಸೈಲೆಂಟ್ ಮೂಡ್‌ನಲ್ಲಿ ಇರುವ ನಿಮ್ಮ ಸ್ಮಾರ್ಟ್‌ಫೋನನ್ನು ನೀವು ಎಲ್ಲಿಯಾದರೂ ಮರೆತು ಇಟ್ಟರೆ ಗೂಗಲ್‌ನ ಜನಪ್ರಿಯ ‘Find My Device’ ವೈಶಿಷ್ಟ್ಯವು ನಿಮಗೆ ಸಹಾಯ ಮಾಡಲಿದೆ.

ಗೂಗಲ್‌ನ ಈ Find My Device ವೈಶಿಷ್ಟ್ಯದ ಸಹಾಯದಿಂದ, ನೀವು ಲ್ಯಾಪ್ ಅಥವಾ ಸ್ಮಾರ್ಟ್‌ಫೋನ್ ಬಳಸಿಕೊಂಡು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ನಿಮ್ಮ ಸ್ಮಾರ್ಟ್‌ಫೋನನ್ನು ಹುಡುಕಬಹುದು ಅಥವಾ ನಿಮ್ಮ ಸ್ಮಾರ್ಟ್‌ಫೋನಿನಲ್ಲಿನ ಎಲ್ಲಾ ಮಾಹಿತಿಯನ್ನು ದೂರದಿಂದಲೇ ಕುಳಿತು ಅಳಿಸಬಹುದು.

ಇದೀಗ ಈ ಜನಪ್ರಿಯ ವೈಶಿಷ್ಟ್ಯವು ಆಫ್‌ಲೈನಿನಲ್ಲೂ ಅಂದರೆ ಇಂಟರ್‌ನೆಟ್ ಸಹಾಯ ಇಲ್ಲದೆಯೂ ಸಹ ಕಾರ್ಯನಿರ್ವಹಿಸುವಂತೆ ಮಾಡಲು ಗೂಗಲ್ ಸಂಸ್ಥೆ ಮುಂದಾಗಿದೆ.

ಹೌದು, ಇಲ್ಲಿಯವರೆಗೂ ಇಂಟರ್‌ನೆಟ್ ಇದ್ದಾಗ ಮಾತ್ರ ಕೆಲಸಕ್ಕೆ ಬರುತ್ತಿದ್ದ Find My Device ವೈಶಿಷ್ಟ್ಯವು ಕಾರ್ಯನಿರ್ವಹಿಸುವಂತೆ ಮಾಡಲು ಗೂಗಲ್ ಮುಂದಾಗಿದೆ ಎಂದು ವರದಿಯಾಗಿದೆ.

Sammobile ಪ್ರಕಟಿಸಿರುವ ಇತ್ತೀಚಿನ ವರದಿಯು, ಡಿಸೆಂಬರ್ 2022 ರ ಗೂಗಲ್‌ನ ಸಿಸ್ಟಮ್ ಅಪ್‌ಡೇಟ್‌ಗಾಗಿ ಚೇಂಜ್‌ಲಾಗ್‌ನಲ್ಲಿ ಈ ಹೊಸ ವೈಶಿಷ್ಟ್ಯವನ್ನು ಗುರುತಿಸಲಾಗಿದೆ ಎಂದು ಉಲ್ಲೇಖಿಸಿದೆ.

ಈ ಮೊದಲು ಇಂಟರ್‌ನೆಟ್ ಸಂಪರ್ಕ ಇದ್ದಾಗ ಮಾತ್ರ Find My Device’ ವೈಶಿಷ್ಟ್ಯವು ಕೆಲಸ ಮಾಡುತ್ತಿತ್ತು. ಇದನ್ನು ಆಫ್‌ಲೈನಿನಲ್ಲೂ ಬಳಸುವಂತೆ ಮಾಡಲು ಗೂಗಲ್ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಕಳೆದ ಸ್ಮಾರ್ಟ್‌ಫೋನನ್ನು ಶೀಘ್ರದಲ್ಲಿ ಹುಡುಕಲು ಸಾಧ್ಯ ಅಥವಾ ವೈಯಕ್ತಿಕ ಮಾಹಿತಿಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ವರದಿ ಮೂಲಕ ತಿಳಿಸಲಾಗಿದೆ.

ನಿಮ್ಮ ಸ್ಮಾರ್ಟ್‌ಫೋನನ್ನು ನೀವು ಎಲ್ಲಿಯಾದರೂ ಮರೆತು ಇಟ್ಟರೆ ಈ ರೀತಿಯಾಗಿ ಕಂಡುಕೊಳ್ಳಬಹುದಾಗಿದೆ.

  • ಬೇರೊಂದು ಸಾಧನದಲ್ಲಿ ಲ್ಯಾಪ್ ಅಥವಾ ಸ್ಮಾರ್ಟ್‌ಫೋನ್ ಕ್ರೋಮ್ ಸರ್ಚ್ ತೆರೆದು Find My Device ಎಂದು ಸರ್ಚ್ ಮಾಡಿ.
  • ನಂತರ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಲಾಗಿನ್ ಆಗಿರುವ ಜಿಮೇಲ್ ಅಕೌಂಟ್ ಮೂಲಕ Find My Device ನಲ್ಲಿ ಲಾಗಿನ್ ಆಗಿ. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಸಂಪರ್ಕ ಸಾಧ್ಯವಾಗುತ್ತದೆ.

ಅದಲ್ಲದೆ ನೀವು ಸೈಲೆಂಟ್ ಮೂಡ್‌ನಲ್ಲಿರುವ ನಿಮ್ಮ ಸ್ಮಾರ್ಟ್‌ಫೋನನ್ನು ಇಲ್ಲಿಂದಲೇ ರಿಂಗ್ ಆಗುವಂತೆ ಮಾಡಬಹುದು. ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಕಳುವಾಗಿದ್ದರೆ, ಇದರ ಸಹಾಯದಿಂದ ಕಳೆದುಹೋದ ಸ್ಮಾರ್ಟ್‌ಫೋನಿನಲ್ಲಿರುವ ಮಾಹಿತಿ ಎಲ್ಲವನ್ನೂ ಅಳಿಸಬಹುದು. ಇದರಿಂದ ನಿಮ್ಮೆಲ್ಲಾ ಖಾಸಾಗಿ ಮಾಹಿತಿಗಳು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅಳಿಸಲ್ಪಡುತ್ತವೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ರಿಕವರಿ ಹೀಗೆ ಮಾಡಬಹುದು :

  • ನಿಮ್ಮದೇ ಇನ್ನೊಂದು ಸ್ಮಾರ್ಟ್‌ಫೋನಿನಲ್ಲಿ ಅಥವಾ ನಿಮ್ಮ ಪರಿಚಿತರ ಸ್ಮಾರ್ಟ್‌ಫೋನಿನಲ್ಲಿ ಜಿ-ಮೇಲ್ ಆಪ್ ತೆರೆಯಿರಿ.
  • ಸೆಕ್ಯುರಿಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
  • ಯೂವರ್ ಡಿವೈಸ್‌ ಆಯ್ಕೆಯಲ್ಲಿ ಫೈಂಡ್ ಲಾಸ್ಟ್ ಅಥವಾ ಸ್ಟೋಲನ್ ಫೋನ್ ಆಯ್ಕೆ ಕ್ಲಿಕ್ ಮಾಡಿ.
  • ಹತ್ತಿರದ ಲೊಕೇಶನ್‌ನಲ್ಲಿ ಸ್ಮಾರ್ಟ್‌ಫೋನ್‌ ಇದ್ರೇ ಗ್ರೀನ್‌ ಲೈಟ್ ತೋರಿಸುತ್ತದೆ.
  • ಅನ್‌ನೌನ್ ಲೊಕೇಶನ್ ಆಗಿದ್ದರೇ ಗ್ರೇ ಬಣ್ಣ ತೋರಿಸುತ್ತದೆ.
  • ಸ್ಮಾರ್ಟ್‌ಪೋನ್‌ ಲೊಕೇಶನ್‌ ಹತ್ತಿರವೇ ಇದ್ದಾಗ ‘ಪ್ಲೇ ಸೌಂಡ್‌’ ಆಯ್ಕೆ ಕ್ಲಿಕ್ ಮಾಡಿ
  • ಆಗ ಸ್ಮಾರ್ಟ್‌ಫೋನ್‌ ಸೈಲೆಂಟ್ ಮೋಡ್‌ನಲ್ಲಿದ್ದರೂ ರಿಂಗ್ ಆಗುತ್ತದೆ. ಕಂಪ್ಯೂಟರ್ ಡೆಸ್ಕ್‌ಟಾಪ್‌ನಲ್ಲಿ ರಿಕವರಿ ಹೀಗೆ ಮಾಡಬಹುದು :
  • ಡೆಸ್ಕ್‌ಟಾಪ್‌ನಲ್ಲಿ ನಿಮ್ಮ ಜಿಮೇಲ್ ಅಕೌಂಟ್‌ನಲ್ಲಿ ಹೋಮ್‌ಪೇಜ್‌ ತೆರೆಯಿರಿ.
  • ಗೂಗಲ್ ಅಕೌಂಟ್‌ನಲ್ಲಿ ಎಡಬದಿಯಲ್ಲಿನ ಸೆಕ್ಯುರಿಟಿ ಆಯ್ಕೆ ಸೆಲೆಕ್ಟ್‌ ಮಾಡಿ.
  • ಯೂವರ್ ಡಿವೈಸ್‌ನಲ್ಲಿ ಫೈಂಡ್‌ ಲಾಸ್ಟ್‌ ಅಥವಾ ಸ್ಟೋಲನ್ ಫೋನ್ ಆಯ್ಕೆ ತೆರೆಯಿರಿ.
  • ಸೆಲೆಕ್ಟ್ ದಿ ಡಿವೈಸ್‌ (ನಿಮ್ಮ ಕಳೆದುಹೋದ ಡಿವೈಸ್‌ ಸೆಲೆಕ್ಟ್ ಮಾಡಿರಿ).

ಈ ರೀತಿಯಾಗಿ ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಅಥವಾ ಸೈಲೆಂಟ್ ಮೂಡ್‌ನಲ್ಲಿ ಇರುವ ನಿಮ್ಮ ಸ್ಮಾರ್ಟ್‌ಫೋನನ್ನು ನೀವು ಎಲ್ಲಿಯಾದರೂ ಮರೆತು ಇಟ್ಟರೆ ಗೂಗಲ್‌ನ ಜನಪ್ರಿಯ ‘Find My Device’ ನಿಂದ ಕಂಡು ಹಿಡಿಯಬಹುದಾಗಿದೆ.

Leave A Reply