Home latest ಈ ಇಯರ್ ಎಂಡ್ ಆಫರ್ ಮಿಸ್ ಮಾಡ್ಬೇಡಿ | ಮಹೀಂದ್ರಾ ಕಾರುಗಳ ಮೇಲೆ 1 ಲಕ್ಷ...

ಈ ಇಯರ್ ಎಂಡ್ ಆಫರ್ ಮಿಸ್ ಮಾಡ್ಬೇಡಿ | ಮಹೀಂದ್ರಾ ಕಾರುಗಳ ಮೇಲೆ 1 ಲಕ್ಷ ಡಿಸ್ಕೌಂಟ್!!!

Hindu neighbor gifts plot of land

Hindu neighbour gifts land to Muslim journalist

ಭಾರತದ ವಾಹನಗಳ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕಾರುಗಳ ಮಾರಾಟ ಹೆಚ್ಚುತ್ತಲೇ ಇದೆ. ವಾಹನ ಕಂಪನಿಗಳು ಗ್ರಾಹಕರನ್ನು ತನ್ನತ್ತ ಸೆಳೆಯಲು ಒಂದಲ್ಲಾ ಒಂದು ಆಫರ್ ಗಳನ್ನು ನೀಡುತ್ತಲೇ ಬಂದಿದೆ. ಇನ್ನೇನೂ ಕೆಲವೇ ದಿನಗಳಲ್ಲಿ ಹೊಸವರ್ಷ ಪ್ರಾರಂಭವಾಗಲಿದ್ದೂ, ಈ ಪ್ರಯುಕ್ತ ಕಾರು ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ ಮಾಡಿದೆ. ವರ್ಷಾಂತ್ಯದಲ್ಲಿ ಎಸ್ ಯುವಿ ಕಾರು ಖರೀದಿದಾರರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.

ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಪ್ರಮುಖ ಕಾರುಗಳ ಖರೀದಿ ಮೇಲೆ ರೂ. 1 ಲಕ್ಷದ ತನಕ ಆಫರ್ ನೀಡುತ್ತಿದೆ. ಮಹೀಂದ್ರಾ ಹೊಸ ಆಫರ್ ಗಳಲ್ಲಿ ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಗಳು ಲಭ್ಯವಿದ್ದು, ರೂ. 20 ಸಾವಿರದಿಂದ ರೂ. 1 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದೆ. ಹಾಗಾದಾರೆ ಈ ವರ್ಷದ ಕೊನೆಯಲ್ಲಿ ಆಯ್ದ ಕಾರು ಮಾದರಿಗಳ ಮೇಲೆ ಲಭ್ಯವಿರುವ ಕೊಡುಗೆಗಳು ಯಾವುವು ಎಂಬುವುದನ್ನು ತಿಳಿಯೋಣ ಬನ್ನಿ.

ಎಕ್ಸ್ ಯುವಿ300:- ಕಂಪ್ಯಾಕ್ಟ್ ಎಸ್ ಯುವಿಯಾಗಿರುವ ಎಕ್ಸ್ ಯುವಿ300 ಕಾರು ಖರೀದಿಯ ಮೇಲೆ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ, ರೂ. 53 ಸಾವಿರದಿಂದ ರೂ. 1 ಲಕ್ಷದ ತನಕ ಮಹೀಂದ್ರಾ ಕಂಪನಿಯು ಕೊಡುಗೆ ನೀಡುತ್ತಿದೆ. ಎಕ್ಸ್ ಯುವಿ300 ಕಾರಿನ ಡಬ್ಲ್ಯು8(ಒ) ವೆರಿಯೆಂಟ್ ಖರೀದಿಯ ಮೇಲೆ ಹೆಚ್ಚಿನ ಆಫರ್ ಲಭ್ಯವಿದ್ದು, ಟರ್ಬೊ ಸ್ಪೋಟ್ ಆವೃತ್ತಿಯ ಮೇಲೂ ರೂ. 60 ಸಾವಿರ ರಿಯಾಯಿತಿ ಸಿಗಲಿದೆ.

ಬೊಲೆರೊ ನಿಯೋ:- ಹೊಸ ಬೊಲೆರೊ ನಿಯೋ ಎಸ್ ಯುವಿ ಕಾರಿನ ಖರೀದಿಯ ಮೇಲೆ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 68 ಸಾವಿರದಿಂದ ರೂ. 95 ಸಾವಿರ ತನಕ ಕಂಪನಿಯು ಆಫರ್ ನೀಡುತ್ತಿದೆ. ಬೊಲೆರೊ ನಿಯೋ ಎಸ್ ಯುವಿಯ ಎನ್ 10 ವೆರಿಯೆಂಟ್ ಗಳ ಮೇಲೆ ಹೆಚ್ಚಿನ ಆಫರ್ ಲಭ್ಯವಿದೆ. ಎಂಟ್ರಿ ಲೆವಲ್ ಎಸ್ ಯುವಿ ಖರೀದಿದಾರರಿಗೆ ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು.

ಬೊಲೆರೊ:- ಜನಪ್ರಿಯ ಬೊಲೆರೊ ಎಸ್ ಯುವಿ ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 33 ಸಾವಿರದಿಂದ ರೂ. 95 ಸಾವಿರ ತನಕ ಕೊಡುಗೆಯನ್ನು ಘೋಷಣೆ ಮಾಡಿದೆ. ಬೊಲೆರೊ ಎಸ್ ಯುವಿಯ ಬಿ8 (ಒ) ವೆರಿಯೆಂಟ್ ಮೇಲೆ ಹೆಚ್ಚಿನ ಆಫರ್ ನೀಡುತ್ತಿದ್ದು, ಎಸ್ ಯುವಿ ಖರೀದಿದಾರರಿಗೆ ಇದೊಂದು ಅತ್ಯುತ್ತಮ ಆಫರ್ ಎನ್ನಬಹುದು.

ಮರಾಜೊ:- ಮಹೀಂದ್ರಾ ಕಂಪನಿಯು ಎಂಪಿವಿ ಮಾದರಿಯಾದ ಮರಾಜೊ ಖರೀದಿ ಮೇಲೂ ವಿವಿಧ ವೆರಿಯೆಂಟ್ ಆಧರಿಸಿ ರೂ. 60,200 ರಿಂದ ರೂ. 67,200 ತನಕ ಆಫರ್ ಘೋಷಣೆ ಮಾಡಿದೆ. ಎಂ2 ಮತ್ತು ಎಂ4 ಪ್ಲಸ್ ವೆರಿಯೆಂಟ್ ಗಳ ಖರೀದಿಯ ಮೇಲೆ ಹೆಚ್ಚಿನ ಆಫರ್ ಸಿಗಲಿದೆ.

ಥಾರ್:- ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಆಫ್ ರೋಡ್ ಎಸ್ ಯುವಿ ಮಾದರಿಯಾದ ಥಾರ್ ಖರೀದಿಯ ಮೇಲೂ ಆಫರ್ ನೀಡುತ್ತಿದೆ. ವಿವಿಧ ವೆರಿಯೆಂಟ್ ಆಧರಿಸಿ ಕಂಪನಿಯು ರೂ. 20 ಸಾವಿರದವರೆಗೆ ಕೊಡುಗೆ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಮೇಲೆ ತಲಾ ರೂ. 20 ಸಾವಿರದಷ್ಟು ಆಫರ್ ನೀಡುತ್ತಿದೆ.

ಹೊಸ ಆಫರ್ ಗಳಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್ ಯುವಿ300, ಬೊಲೆರೊ ನಿಯೋ, ಬೊಲೆರೊ, ಥಾರ್, ಮರಾಜೊ ಹೊರತುಪಡಿಸಿ ಸ್ಕಾರ್ಪಿಯೋ ಎನ್, ಸ್ಕಾರ್ಪಿಯೊ ಕ್ಲಾಸಿಕ್ ಮತ್ತು ಎಕ್ಸ್ ಯುವಿ700 ಕಾರುಗಳ ಮೇಲೆ ಯಾವುದೇ ಆಫರ್ ಲಭ್ಯವಿಲ್ಲ.