Lava X3 ಫೋನ್ ಬಿಡುಗಡೆ, ಕೇವಲ 6,999 ರೂ.ಗೆ : ಇಷ್ಟು ಮಾತ್ರವಲ್ಲ 2,999 ರೂ. ಮೌಲ್ಯದ ಉಚಿತ ನೆಕ್‌ಬ್ಯಾಂಡ್! ಈ ಆಫರ್‌ ಬಿಡಬೇಡಿ

ಮೊಬೈಲ್ ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಮೊಬೈಲ್​ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹೊಸ ಸ್ಮಾರ್ಟ್​ಫೊನ್​ಗಳು ಬರುತ್ತಲೇ ಇದೆ. ಇದೀಗ ಹೊಸ
Lava X3 ಸ್ಮಾರ್ಟ್‌ಫೋನ್ ನ್ನು ಬಿಡುಗಡೆ ಮಾಡಲಾಗಿದೆ.

ನೀವು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿರುವ ನಿಮಗೆ ಹೊಸ Lava X3 ಸ್ಮಾರ್ಟ್‌ಫೋನನ್ನು ಕೇವಲ 6,999 ರೂ ಬೆಲೆಯಲ್ಲಿ ಪರಿಚಯಿಸಲಾಗಿದೆ. ಅದಲ್ಲದೆ ಈ ಸ್ಮಾರ್ಟ್‌ಫೋನನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರಿಗೆ ಕಂಪೆನಿಯಿಂದ 2,999 ರೂಪಾಯಿ ಮೌಲ್ಯದ ಉಚಿತ ನೆಕ್‌ಬ್ಯಾಂಡ್ ಸಹ ನೀಡಲಾಗುವುದು ಎಂದು Lava ಕಂಪೆನಿ ತಿಳಿಸಿದೆ. ಅದಲ್ಲದೆ ಇದೇ ಡಿಸೆಂಬರ್ 20 ರಿಂದ ದೇಶದಲ್ಲಿ ಮಾರಾಟಕ್ಕೆ ಬರಲಿರುವ ಈ Lava X3 ಸ್ಮಾರ್ಟ್‌ಫೋನನ್ನು ಆರ್ಕ್ಟಿಕ್ ಬ್ಲೂ, ಚಾರ್ಕೋಲ್ ಬ್ಲಾಕ್ ಮತ್ತು ಲುಸ್ಟರ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಖರೀದಿಸಬಹುದು ಎಂದು Lava ಕಂಪೆನಿ ತಿಳಿಸಿದೆ.

Lava X3 ಸ್ಮಾರ್ಟ್‌ಫೋನಿನ ವಿಶೇಷತೆ :

  • Lava X3 ಸ್ಮಾರ್ಟ್‌ಫೋನಿನಲ್ಲಿ ವಾಟರ್ ಡ್ರಾಪ್ ನಾಚ್ ಶೈಲಿಯ 6.5 ಇಂಚಿನ (1600×720 ಪಿಕ್ಸೆಲ್ಸ್) IPS LCD ಡಿಸ್‌ಪ್ಲೇ ನೀಡಲಾಗಿದೆ.
  • ಈ ಡಿಸ್‌ಪ್ಲೇಯು 60 Hz ರಿಫ್ರೆಶ್ ರೇಟ್‌ ಸಾಮರ್ಥ್ಯದಲ್ಲಿದೆ. ಇತ್ತ ಬ್ಯಾಕ್‌ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ.
  • ಹುಡ್ ಅಡಿಯಲ್ಲಿ, ಬೇಸಿಕ್ ಮೀಡಿಯಾ ಟೆಕ್ ಹಿಲಿಯೊ A22 ಚಿಪ್‌ಸೆಟ್‌ ಜೊತೆಗೆ ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ Lava X3 ಸ್ಮಾರ್ಟ್‌ಫೋನಿನಲ್ಲಿ 3GB RAM ಮತ್ತು 32GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯವನ್ನು ನೀಡಲಾಗಿದೆ.
  • ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿಯನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಕೊಳ್ಳಬಹುದಾದ ಆಯ್ಕೆ ಇದೆ.
  • ಕ್ಯಾಮೆರಾ ವಿಭಾಗದಲ್ಲಿ, Lava X3 ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಶ್ ಜೊತೆಗೆ AI ಸಾಮರ್ಥ್ಯದ 8 ಮೆಗಾಪಿಕ್ಸೆಲ್ ಸೆನ್ಸಾರ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.
  • ಸೆಲ್ಫಿಗಳಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
  • ಈ ಸ್ಮಾರ್ಟ್‌ಫೋನ್ AI ಮೋಡ್, ಬ್ಯೂಟಿ ಮೋಡ್ ಮತ್ತು HDR ಮೋಡ್ ವೈಶಿಷ್ಟ್ಯಗಳನ್ನು ಹೊಂದಿದ್ದು, 1080p ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
  • ಸಂಪರ್ಕ ಆಯ್ಕೆಗಳಲ್ಲಿ, 4G, ವೈ-ಫೈ, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಜಿಪಿಎಸ್, ಬ್ಲೂಟೂತ್ ವೈಶಿಷ್ಟ್ಯಗಳಿವೆ.
  • ಬ್ಯಾಟರಿ ವಿಭಾಗದಲ್ಲಿ Lava X3 ಸ್ಮಾರ್ಟ್‌ಫೋನ್‌ 10W ಚಾರ್ಜಿಂಗ್ ಬೆಂಬಲಿಸುವ 4,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ.

ಈ ಮೇಲಿನ ಸಾಮರ್ಥ್ಯ ಹೊಂದಿದ ಅತೀ ಕಡಿಮೆ ಬೆಲೆಯ Lava X3 ಸ್ಮಾರ್ಟ್‌ಫೋನ್‌ ನ್ನು ಖರೀದಿಸುವ ಮೂಲಕ ಉಚಿತವಾಗಿ ನೆಕ್‌ಬ್ಯಾಂಡ್ ಸಹ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.