ಕೇವಲ ರೂ.750 ಕ್ಕೆ ಪಡೆಯಿರಿ ಹೈಸ್ಪೀಡ್ ಡೇಟಾ!!!

Share the Article

ಬೆಂಗಳೂರು ಜನರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಕೇವಲ 750 ರೂಪಾಯಿಗೆ ಹೈಸ್ಪೀಡ್​ ಡೇಟಾ ಇನ್ನೂ ಲಭ್ಯ.

ಹೌದು!!ಬೆಂಗಳೂರಿನ ಜನರಿಗೆ ಹಾತ್​ವೇ ಎಂಬ ಬ್ರಾಡ್​ಬ್ಯಾಂಡ್​ ಇಂಟರ್ನೆಟ್​ ಸರ್ವೀಸ್​ ಕಂಪನಿ ಹೊಸ ಡೇಟಾ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ 750 ರೂಪಾಯಿ ಬೆಲೆಯನ್ನು ಹೊಂದಿದ್ದು, 100ಎಮ್​​ಬಿಪಿಎಸ್​​ ಇಂಟರ್ನೆಟ್​ ಸ್ಪೀಡ್​ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ತನ್ನ ಗ್ರಾಹಕರಿಗೆ ತಿಳಿಸಿದೆ.

ಹೇಳಿ ಕೇಳಿ.. ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಮಾಯಾವಿಯ ಬಳಕೆ ಮಾಡದೇ ಇರುವವರೇ ವಿರಳ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​​ಫೋನ್​​ ಎಲ್ಲರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. (Smartphone) ಈ ಮೊಬೈಲ್​ಗಳನ್ನು ಬಳಸಲು ನೆಟ್​ವರ್ಕ್ (Network)​ ಅತ್ಯವಶ್ಯಕ. ಹಾಗಾಗಿ, ಈ ನಿಟ್ಟಿನಲ್ಲಿ ಅನೇಕ ಬ್ರಾಡ್​ಬ್ಯಾಂಡ್ ಕಂಪನಿಗಳು(Broadband) ಇಂಟರ್ನೆಟ್ ಸರ್ವೀಸ್​ (Internet Service) ನೀಡುತ್ತಿವೆ.

ಇದೀಗ, ಬೆಂಗಳೂರಿನ ಬ್ರಾಡ್​​ಬ್ಯಾಂಡ್​ ಕಂಪನಿ ಬೆಂಗಳೂರು ಜನರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಇಂಟರ್ನೆಟ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರಸಿದ್ಧ ಇಂಟರ್ನೆಟ್ ಸರ್ವೀಸ್ ಕಂಪನಿಯಾಗಿರುವ ಹಾತ್ವೇ ಹೊಸ 100ಎಮ್ಬಿಪಿಎಸ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಯೋಜನೆಯನ್ನು ಪರಿಚಯಿಸಿದೆ. ಇದು 750 ರೂಪಾಯಿಯ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

ಇದು ಬೆಂಗಳೂರಿನ (Banglore) ಕೆಲವು ನಗರಗಳಲ್ಲಿ ಫಿಕ್ಸಡ್​ ಲೈನ್​ ಇಂಟರ್ನೆಟ್​ ಸೇವೆಯನ್ನು ನೀಡುತ್ತಿವೆ. ಇದೀಗ ಬಹಳಷ್ಟು ಗ್ರಾಹಕರನ್ನು ಪಡೆಯುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

ಹಾತ್​​ವೇ ಎಂಬ ಕಂಪನಿಯು ಬೆಂಗಳೂರಿನ ಜನರಿಗೆ ಕೆಲ ಆಯ್ದ ನಗರಗಳಲ್ಲಿ ಇಂಟರ್ನೆಟ್​ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ತನ್ನ ಕಂಪನಿಯ ಅಡಿಯಲ್ಲಿ ಹಲವಾರು ಡೇಟಾ ಪ್ಲಾನ್​ಗಳನ್ನು ಬಿಡುಗಡೆ ಮಾಡಿದೆ. ಇದು ತಿಂಗಳ ಮತ್ತು ವರ್ಷದ ಯೋಜನೆಯನ್ನು ಬಿಡುಗಡೆ ಮಾಡಿದ್ದು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.

ಬೆಂಗಳೂರು ನಗರದ ಗ್ರಾಹಕರು 1500 ರೂಪಾಯಿ ಪಾವತಿ ಮಾಡುವ ಮೂಲಕ 100ಎಮ್​ಬಿಪಿಎಸ್​ ಸ್ಪೀಡ್​ ಬ್ರಾಡ್​ಬ್ಯಾಂಡ್​ ಇಂಟರ್ನೆಟ್​ ಯೋಜನೆಗೆ ಗ್ರಾಹಕರಾಗಬಹುದಾಗಿದೆ. ಈ ಬಳಿಕ, ಪ್ರತಿ ತಿಂಗಳು ಈ ಯೋಜನೆ 750 ರೂಪಾಯಿಯಲ್ಲಿ ಡೇಟಾ ಸೇವೆಯನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ, ಗ್ರಾಹಕರು ಉಚಿತವಾಗಿ ಡ್ಯುಯಲ್-ಬ್ಯಾಂಡ್ ರೂಟರ್ ಸಾಧನವನ್ನು ಸಹ ಪಡೆದುಕೊಳ್ಳಬಹುದು ಎಂದು ಹಾತ್​ವೇ ಕಂಪನಿ ತಿಳಿಸಿದೆ.

ಹಾತ್​​ವೇ ಕಂಪನಿ ತನ್ನ ಗ್ರಾಹಕರಿಗಾಗಿ ಉತ್ತಮ ಇಂಟರ್ನೆಟ್​ ಸೇವೆಯನ್ನು ಒದಗಿಸುತ್ತಿದ್ದು, 100 Mbps ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಯೋಜನೆಯನ್ನು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಪಡೆಯಬಹುದಾಗಿದೆ.

ಎರಡು ತಿಂಗಳ 100 Mbps ಸ್ಪೀಡ್ ಬ್ರಾಡ್‌ಬ್ಯಾಡ್ ಯೋಜನೆ ಪಡೆಯಲು 1500 ರೂಪಾಯಿ ಆದರೆ, ಮೂರು ತಿಂಗಳಿಗೆ 2250 ರೂಪಾಯಿ, ಆರು ತಿಂಗಳಿಗೆ 4500 ರೂಪಾಯಿ ಮತ್ತು 12 ತಿಂಗಳ ಯೋಜನೆಗೆ 9000 ರೂಪಾಯಿ ರೀಚಾರ್ಜ್​ ಮಾಡಬೇಕಾಗುತ್ತದೆ ಎಂದು ಹಾತ್​ವೇ ಕಂಪನಿ ತಿಳಿಸಿದೆ.

ಈ ಯೋಜನೆಯ ಮೂಲಕ ದೊರೆಯುವ ಡೇಟಾವು ಕಂಪನಿಯ ಕೆಲವೊಂದು ನೀತಿಗಳಿಗ ಒಳಪಟ್ಟಿದ್ದು, ಇನ್ನು ಈ ಯೋಜನೆಯ ಮೂಲಕ ಡೇಟಾ ಎಷ್ಟು ದೊರೆಯಲಿದೆ ಎಂಬ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ತಿಂಗಳಿಗೆ 3600 ಜಿಬಿ ಡೇಟಾದೊಂದಿಗೆ ಗ್ರಾಹಕರು ಈ ಯೋಜನೆಯನ್ನು ಪಡೆಯಲು ಸಾಧ್ಯವಾಗಬಹುದು ಎಂದು ಕೆಲವು ವರದಿಗಳು ಹೇಳಿದೆ. ಇನ್ನು ಈ ವಿಷಯದ ಬಗ್ಗೆ ಹಾತ್​​ವೇ ಕಂಪನಿಯ ಪ್ರತಿಕ್ರಿಯೆ ನೀಡಬೇಕಾಗಿದೆ.

Leave A Reply