Home Technology Tech Tips: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ಎಷ್ಟೊಂದು ಸುಲಭವಾಗಿ ಲಾಕ್ ಮಾಡಬಹುದು! ಗೊತ್ತೇ?

Tech Tips: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ಎಷ್ಟೊಂದು ಸುಲಭವಾಗಿ ಲಾಕ್ ಮಾಡಬಹುದು! ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ವಾಟ್ಸಪ್ ಬಳಸದವರು ಯಾರೂ ಇಲ್ಲ ಬಿಡಿ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ವಾಟ್ಸಾಪ್ ವೀಡಿಯೋ ಕಾಲ್ ಮಾಡುವುದು,ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು, ಒಟ್ಟಿನಲ್ಲಿ ವಾಟ್ಸಾಪ್ ಒಂದು ಉತ್ತಮ ಸಂಪರ್ಕ ಮಾಧ್ಯಮ ಎಂದರೆ ತಪ್ಪಾಗಲಾರದು. ಪ್ರಸ್ತುತ ವಾಟ್ಸಾಪ್ ನಿಂದ ನಿಮಗೊಂದು ಸಿಹಿ ಸುದ್ದಿ ಇದೆ ಹೌದು ವಾಟ್ಸ್​ಆ್ಯಪ್​​ ನಲ್ಲಿ ಪ್ರತ್ಯೇಕ ನಂಬರ್ ಲಾಕ್, ಪ್ಯಾಟರ್ನ್, ಫಿಂಗರ್ ಟ್ರಿಂಟ್ ಲಾಕ್ ಆಯ್ಕೆಯನ್ನು ನೀಡಿದೆ. ಇದರಿಂದ ವಾಟ್ಸ್​ಆ್ಯಪ್​​ ಬಳಕೆದಾರರು ಚಾಟ್‌ಗಳನ್ನು ಸುರಕ್ಷಿತವಾಗಿಡಬಹುದು.

ಮೆಟಾ ಒಡೆತನದ ವಾಟ್ಸಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್​ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನೂ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿದೆ. ಬಳಕೆದಾರರ ಖಾತೆ ಸುರಕ್ಷತೆಗೆ ಕೆಲವು ಫೀಚರ್ಸ್‌ ಇದ್ದರೂ ಕೆಲವೊಮ್ಮೆ ವಾಟ್ಸ್​ಆ್ಯಪ್​​ ಹ್ಯಾಕ್‌ ಆಗುವ ಸಾಧ್ಯತೆಗಳು ಇರುತ್ತವೆ. ಬಳಕೆದಾರರಿಗೆ ಗೊತ್ತಿಲ್ಲದೇ ಅವರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಬೇರೆಯವರು ಜಾಲಾಡುವ ಸಾಧ್ಯತೆಗಳಿವೆ. ಇದಕ್ಕೆ ಪ್ರೈವಸಿ ಬಹುಮುಖ್ಯ. ಅದಕ್ಕೆಂದೇ ವಾಟ್ಸ್​ಆ್ಯಪ್​​ ಪ್ರತ್ಯೇಕ ನಂಬರ್ ಲಾಕ್, ಪ್ಯಾಟರ್ನ್, ಫಿಂಗರ್ ಟ್ರಿಂಟ್ ಲಾಕ್ ಆಯ್ಕೆಯನ್ನು ನೀಡಿದೆ. ಇದರಿಂದ ವಾಟ್ಸ್​ಆ್ಯಪ್​​ ಬಳಕೆದಾರರು ಚಾಟ್‌ಗಳನ್ನು ಸುರಕ್ಷಿತವಾಗಿಡಬಹುದು.

ಹಾಗಾದರೇ ವಾಟ್ಸ್​ಆ್ಯಪ್​ನ ಈ ಲಾಕ್ ಫೀಚರ್‌ ಹೇಗೆ ಆಕ್ಟಿವ್ ಮಾಡಿಕೊಳ್ಳುವುದು ಎಂಬುದನ್ನು ಇಲ್ಲಿ ತಿಳಿಯಿರಿ.

  • ಮೊದಲು ನೀವು ವಾಟ್ಸ್​ಆ್ಯಪ್​ನ ಇತ್ತೀಚಿನ ಆವೃತ್ತಿಯನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಪ್‌ಡೇಟ್ ಮಾಡಿಕೊಂಡಿದ್ದೀರಿಯೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
  • ನಂತರ ವಾಟ್ಸ್​ಆ್ಯಪ್ ತೆರೆಯಿರಿ.
  • ಬಲತುದಿಯ ಮೆನು ಆಯ್ಕೆ ಮಾಡಿ.
  • ಸೆಟ್ಟಿಂಗ್ಸ್‌ನಲ್ಲಿ ಅಕೌಂಟ್ ತೆರೆಯಿರಿ.
  • ಅದರಲ್ಲಿ ಪ್ರೈವೆಸಿ ಆಯ್ದುಕೊಳ್ಳಿ. ನಂತರ, ಸ್ಕ್ರಾಲ್ ಮಾಡಿ,
  • ಫಿಂಗರ್‌ಪ್ರಿಂಟ್ ಎನೇಬಲ್ ಮಾಡಿಕೊಳ್ಳಿ. ಬೆರಳಚ್ಚನ್ನು ಧೃಡೀಕರಿಸಿಕೊಳ್ಳಿ.
  • ನಂತರ ಸಮಯ ಆಯ್ಕೆ ಮಾಡಿ.
  • ಒಂದು ನಿಮಿಷದ ನಂತರ, 30 ನಿಮಿಷದ ನಂತರ ಎಂದು ಆಯ್ಕೆ ಮಾಡಿ.
  • ಹಾಗೆಯೇ ಐಫೋನ್‌ನಲ್ಲಿ ಟಚ್‌ ಐಡಿ ಮತ್ತು ಫೇಸ್‌ ಐಡಿ ಆಯ್ಕೆಗಳನ್ನು ಬಳಸಬಹುದು.

ಅದಲ್ಲದೆ ಪ್ರೈವಸಿಗೆ ಸಂಬಂಧಿಸಿದಂತೆ ವಾಟ್ಸ್​ಆ್ಯಪ್​ ಮಹತ್ವದ ಬದಲಾವಣೆ ತರಲು ಸಜ್ಜಾಗಿದೆ. ಇನ್ನುಂದೆ ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿಲ್ಲ. ಸದ್ಯದಲ್ಲೇ ಈ ಆಯ್ಕೆಯನ್ನು ನಿರ್ಬಂಧಿಸಲಿದೆ. ಈ ವರ್ಷದ ಆರಂಭದಲ್ಲಿ ವಾಟ್ಸ್​ಆ್ಯಪ್ ವೀವ್ ಒನ್ಸ್ ಎಂಬ ಫೀಚರ್ ಪರಿಚಿಸಿತ್ತು. ಇದರ ಮೂಲಕ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ. ಆದರೆ, ಇದನ್ನು ಸ್ಕ್ರೀನ್ ಶಾಟ್ ತೆಗೆಯುವಂತಹ ಆಯ್ಕೆ ಇತ್ತು. ಇದೀಗ ಈ ಫೀಚರ್​ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯನ್ನು ಬ್ಲಾಕ್ ಮಾಡಲು ಮುಂದಾಗಿದೆ.

ಮುಖ್ಯವಾಗಿ ಮುಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್​ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ ಅನ್ನು ರಿಕವರಿ ಮಾಡು ಆಯ್ಕೆ ಬರಲಿದೆ. ಈ ಬಗ್ಗೆ ವಾಟ್ಸ್​ಆ್ಯಪ್ ​ಬೇಟಾಇನ್​ಫೊ ವರದಿ ಮಾಡಿದ್ದು, ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಈಗ ನೀವು ಯಾರಿಗಾದರು ಮೆಸೇಜ್ ಕಳುಹಿಸಿದ್ದನ್ನು ತಪ್ಪಿ ಡಿಲೀಟ್ ಮಾಡಿದ್ದರೆ ಆ ಮೆಸೇಜ್ ಅನ್ನು ಮರಳಿ ಪಡೆಯುವ ಆಯ್ಕೆ ಇದಾಗಿದೆ. ಆದರೆ, ಇದು ಎಷ್ಟು ಸಮಯದ ಒಳಗೆ ರಿಕವರಿ ಮಾಡಬಹುದು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.

ಫಿಂಗರ್‌ಪ್ರಿಂಟ್ ಲಾಕ್‌ ಆಯ್ಕೆಯು, ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ಲಭ್ಯವಿದ್ದು, ಪ್ರೈವೆಸಿಗೆ ಮತ್ತಷ್ಟು ನೆರವಾಗಿದೆ. ಈ ಫೀಚರ್‌ ಬಳಸಿ ವಾಟ್ಸ್​ಆ್ಯಪ್​​ ಚಾಟ್‌ಗೆ ಈ ಫೀಚರ್‌ ಅನ್ನು ಬಳಕೆದಾರರು ಬಳಸಿಕೊಳ್ಳಬಹುದಾಗಿದ್ದು, ಬಳಕೆದಾದರ ಬೆರಳೇ ಅವರ ವಾಟ್ಸ್​ಆ್ಯಪ್​​ ಚಾಟ್‌ನ ಲಾಕ್‌ಗೆ ಕೀಲಿ ಕೈ ಆಗಲಿದೆ. ಹೈ ಎಂಡ್‌ ಮಾದರಿಯ ಆ್ಯಪಲ್‌ ಐಫೋನ್‌ಗಳು ಟಚ್‌ ಐಡಿ, ಫೇಸ್‌ ಐಡಿ ಸೇರಿದಂತೆ ಕೇಲವು ಅಡ್ವಾನ್ಸಡ್ ಲಾಕ್‌ ಫೀಚರ್​​ಗಳನ್ನು ಹೊಂದಿವೆ. ಹಾಗೆಯೇ ಇನ್ನಷ್ಟು ಫೀಚರ್‌ಗಳು ವಾಟ್ಸ್​ಆ್ಯಪ್​​ ಬೇಟಾ ವರ್ಷನ್‌ನಲ್ಲಿ ಲಭ್ಯವಾಗುತ್ತಿವೆ.