ಹಿಮೋಗ್ಲೋಬಿನ್ ಅಂಶ ಹೆಚ್ಚಾಗಲು ಈ ಆಹಾರ ಪದ್ಧತಿಗಳನ್ನು ಫಾಲೋ ಮಾಡಿ
ಅದೆಷ್ಟೋ ಜನರಿಗೆ ತನಗೆ ರಕ್ತದಾನ ಮಾಡಬೇಕು ಅಂತ ಆಸೆ ಇರುತ್ತೆ. ಆದ್ರೆ ಅಲ್ಲಿ ಚೆಕ್ ಮಾಡಿದಾಗ ಹಿಮೋಗ್ಲೋಬಿನ್ ಕಮ್ಮಿ ಆಗಿದೆ ಅಂತ ಹೇಳ್ತಾರೆ. ಹಾಗೆಯೇ ಯಾವುದಾದ್ರೂ ರೋಗ ರುಜಿನಗಳಿಗೆ ಭಾಗಿಯಾಗಿದ್ರು ಕೂಡ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗಿರುತ್ತದೆ. ಹಾಗಾದ್ರೆ ನಮ್ಮ ದೇಹದಲ್ಲಿ ಅಂದ್ರೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚು ಮಾಡುವುದು ಹೇಗೆ? ಇದಕ್ಕೆ ಸರಿಯಾದ ಆಹಾರಗಳು ಯಾವೆಲ್ಲ ಎಂಬುದು ಗೊತ್ತಾ? ತಿಳಿಯೋಣ ಬನ್ನಿ.
ಹಿಮೋಗ್ಲೋಬಿನ್ ಮಟ್ಟವು ಗಣನೀಯವಾಗಿ ಕಡಿಮೆಯಾದರೆ, ರಕ್ತಹೀನತೆ ಎಂದು ಗುರುತಿಸಬಹುದು.
ಇದರಿಂದ ಎದುರಿಸಬೇಕಾದ ಸಮಸ್ಯೆಗಳು ಯಾವುದೆಲ್ಲ ಅಂದ್ರೆ, ದೌರ್ಬಲ್ಯ,ಆಯಾಸ,ತಲೆನೋವು,ಉಸಿರಾಟದ ತೊಂದರೆ, ತಲೆತಿರುಗುವಿಕೆ, ಹಸಿವಾಗದೇ ಇರುವುದು, ಹೃದಯ ಬಡಿತದಲ್ಲಿ ಏರುಪೇರು , ಹೆಚ್ಚು ಕಬ್ಬಿಣವುಳ್ಳ ಆಹಾರಗಳು ಪದ್ಧತಿಯನ್ನು ನೀವು ಅನುಸರಿಸಬೇಕು.
ಮಾಂಸ, ಮೀನು,ಮೊಟ್ಟೆ,ಸೋಯಾ ಉತ್ಪನ್ನಗಳು,ಡ್ರೈ ಫುಟ್ಸ್
ಹಣ್ಣುಗಳು,ಎಲೆಕೋಸು, ಪಾಲಕ್, ಕೋಸುಗಡ್ಡೆ, ಹಸಿರು ಬೀನ್ಸ್,ಕಡಲೆಕಾಯಿ ಎಣ್ಣೆ.
ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿಗಳು ಮತ್ತು ಹಸಿರು ತರಕಾರಿಗಳಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸಬಹುದು. ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸಲು ವೈದ್ಯರು ಕೆಲವು ಪೂರಕಗಳನ್ನು ಒಂದೆರಡು ತಿಂಗಳುಗಳ ಕಾಲ ಶಿಫಾರಸ್ಸು ಮಾಡುತ್ತಾರೆ.
ಈ ರೀತಿಯಾದ ಆಹಾರ ಪದ್ಧತಿಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವುದರಿಂದ ರಕ್ತದಲ್ಲಿನ ಹಿಮೂಗ್ಲೋಬಿನ್ ಅಂಶ ಜಾಸ್ತಿಯಾಗುತ್ತದೆ ಮತ್ತು ನಿಶಕ್ತದಿಂದ ಹೊರ ಬರಬಹುದು.