ಸೆಕ್ಸ್ ಮಾಡುವ ವೇಳೆಯೇ ನಿದ್ದೆ ಮಾಡೋ ಜನ ಕೂಡಾ ಇದ್ದಾರೆ ! ಈ ಅಪರೂಪದ ಕಾಯಿಲೆ ಬಗ್ಗೆ ತಿಳ್ಕೊಳ್ಳಿ !!
Sexsomnia : ಸಂಭೋಗ ಮಾಡುವಾಗ ಯಾರಾದರೂ ಮಲಗಿದರೆ… ಅಂದರೆ ನಿದ್ರೆಗೆ ಜಾರಿದರೆ ಹೇಗಿರುತ್ತೆ ಊಹಿಸಿಕೊಳ್ಳಿ? ” ಸೆಕ್ಸ್ ವೇಳೆ ಮಲಗಿ ನಿದ್ರಿಸೋದ ? ಏನ್ಸಾರ್, ಏನು ಹೇಳ್ತಿದ್ದೀರಾ ? ಹಾಗೂ ಯಾರಾದ್ರು ಮಾಡ್ತಾರಾ, ಆಟ ಶುರುವಾಗುವ ವೇಳೆ ಪರದೆ ಎಳೆದು, ಕಂಬಳಿ ಹೊದ್ದು ಯಾರ್ ತಾನೇ ನಿದ್ರೆ ಮಾಡ್ತಾರೆ ?” ಅಂತ ನೀವು ಕೇಳಬಹುದು. ಆದ್ರೆ ಅಮೆರಿಕದಲ್ಲಿ ವ್ಯಕ್ತಿಯೊಬ್ಬರು ಇಂತಹ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಆತನ ಪತ್ನಿ ಬಹಿರಂಗಪಡಿಸಿದ್ದಾಳೆ. ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ಗಂಡನ ಈ ವಿಚಿತ್ರ ಕಾಯಿಲೆಯನ್ನು ಬಹಿರಂಗಪಡಿಸಿದ್ದಾಳೆ.
ಈ ಅಮೆರಿಕನ್ ವ್ಯಕ್ತಿಯ ಹೆಂಡತಿಯ ಪ್ರಕಾರ, ಆಕೆಗೆ ರಾತ್ರಿ ಬೇಗನೆ ಮಲಗುವ ಅಭ್ಯಾಸ. ಆಕೆಯ ಪತಿ ಆಕೆಯ ಜತೆ ಸೆಕ್ಸ್ ಮಾಡಿದ್ದ. ಆದರೆ ಒಂದು ದಿನ ಆಕೆಗೆ ಮನವರಿಕೆ ಆಗಿದೆ: ಅದೇನೆಂದರೆ, ಆಕೆಯ ಪತಿ ನಿದ್ದೆ ಮಾಡುವ ವೇಳೆ ಸೆಕ್ಸ್ ಮಾಡುತ್ತಾನೆ ಎಂದು. ಒಂದು ದಿನ ಸೆಕ್ಸ್ ಮಾಡಿದ ಮರುದಿನ ಬೆಳಿಗ್ಗೆ, ಅದರ ಬಗ್ಗೆ ಕೇಳಿದಾಗ ಆಕೆಯ ಗಂಡನಿಗೆ ನೆನಪೇ ಇರಲಿಲ್ವಂತೆ. ಅಂದರೆ ಆತ ಅರೆ ಬರಿಯ ನಿದ್ದೆಯಲ್ಲಿರುವಾಗ ಸೆಕ್ಸ್ ಮಾಡುತ್ತಿದ್ದ ಮತ್ತು ಮಾಡಿದ್ದನ್ನು ಮರೆತು ಬಿಡುತ್ತಿದ್ದ. ಇದನ್ನಾತ ಬೇಕಂತಲೇ ಮಾಡುತ್ತಿರಲಿಲ್ಲ, ಬದಲಿಗೆ ಅದೊಂದು ತರಹದ ಮರೆಯೋ ಕಾಯಿಲೆ ಆತನಿಗೆ.
ಇದನ್ನು ವೈದ್ಯಕೀಯ ಭಾಷೆಯಲ್ಲಿ, ಈ ‘ಸೆಕ್ಸ್ಸೋಮ್ನಿಯಾ’ ಎಂದು ಕರೆಯಲಾಗುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ನಿದ್ದೆ ಮಾಡುವಾಗ ಸಂಭೋಗ ಮಾಡಿರುವುದನ್ನು ಮರೆಯುತ್ತಾರೆ. ಲಭ್ಯ ಅಂಕಿ ಅಂಶಗಳ ಪ್ರಕಾರ, 16,000 ರಿಂದ 17,000 ಜನರು ಈ ವಿಚಿತ್ರ ಕಾಯಿಲೆ ಕಂಡು ಬರತ್ತಂತೆ. ಸೆಕ್ಟಾಮ್ನಿಯ ( Sexsomnia) ಕಾಲಿಯೆಯು ಇತರ ಮೊದಲೇ ಅಸ್ತಿತ್ವದಲ್ಲಿರುವ ನಿದ್ರೆ-ಸಂಬಂಧಿತ ರೋಗಗಳೊಂದಿಗೆ ವ್ಯಕ್ತಿಯಲ್ಲಿ ಕಂಡು ಬರಬಹುದು. ಪುರುಷರಲ್ಲಿ ಸೆಕ್ಸ್ಸೋಮ್ನಿಯಾವನ್ನು ಹದಿಹರೆಯದಲ್ಲಿ ಹೆಚ್ಚಾಗಿ ಗುರುತಿಸಲಾಗುತ್ತದೆ. ಅವರು ಸಂಪೂರ್ಣವಾಗಿ ಎಚ್ಚರವಾಗಿರುವಂತೆ ತೋರಿದರೂ, ಲೈಂಗಿಕ ನಿದ್ರಾಹೀನತೆಯನ್ನು ಹೊಂದಿರುವ ವ್ಯಕ್ತಿಗಳು ನಿಜಕ್ಕೂ ನಿದ್ರಿಸುತ್ತಿರುತ್ತಾರೆ. ನಿದ್ರಿಸುವಾಗ ಅವರು ನಡೆಸುವ ಲೈಂಗಿಕ ನಡವಳಿಕೆಗಳನ್ನು ಅವರು ನೆನಪಿಟ್ಟುಕೊಳ್ಳಲು ಅಸಮರ್ಥರಿರುತ್ತಾರೆ. ಕೆಲವು ಸಂದರ್ಭಗಳಲ್ಲಿ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಿಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಗಳಿಗೆ ರಕ್ಷಣೆಯಾಗಿ ಲೈಂಗಿಕ ನಿದ್ರಾಹೀನತೆಯ ಈ ವೈದ್ಯಕೀಯ ರೋಗವನ್ನು ಅಸ್ತ್ರವಾಗಿ ಬಳಸಲಾಗುತ್ತದೆ. ವಕೀಲರುಗಳು ತಮ್ಮ ಕಕ್ಷೀದಾರನ ಪರವಾಗಿ ವಾದಿಸಲು ಈ Sexomnia ರೋಗವನ್ನು ಬಳಸಲಾಗುತ್ತದೆ.
ಸೆಕ್ಸ್ಸೋಮ್ನಿಯಾದ ಲಕ್ಷಣಗಳು ಮತ್ತು ಕಾರಣಗಳು:
ಹಸ್ತಮೈಥುನ, ಅತಿಯಾಗಿ ಮೋಹಿಸುವುದು, ಸಂಭೋಗ, ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ, ನಿದ್ದೆ ಮಾಡುವಾಗ ಕೆಟ್ಟ ಮಾತನಾಡುವುದು ಮುಂತಾದುವುಗಳ ಜತೆ ಈ ರೋಗ ಕಾಣಿಸಿಕೊಳ್ಳಬಹುದು. ಮಾನಸಿಕ ಒತ್ತಡ, ನಿದ್ದೆಯ ತೀರಾ ಅಭಾವ, ಆಲ್ಕೋಹಾಲ್ ಅಥವಾ ಇತರ ಔಷಧಿಗಳ ಸೇವನೆ ಮತ್ತು ಅಭ್ಯಾಸ, ಮೊದಲೇ ಅಸ್ತಿತ್ವದಲ್ಲಿರುವ ಪ್ಯಾರಾಸೋಮ್ನಿಯಾ ನಡವಳಿಕೆಗಳು ಸೆಕ್ಸ್ಸೋಮ್ನಿಯಾಕ್ಕೆ ಕಾರಣ ಎನ್ನಬುಡುದು.
ಸೆಕ್ಸ್ಸೋಮ್ನಿಯಾ ಅಪಾಯದ ಅಂಶಗಳು ಮತ್ತು ಪರಿಣಾಮಗಳು:
ಸೆಕ್ಸ್ಸೋಮ್ನಿಯಾವು ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಳಗಿನವುಗಳನ್ನು ಅನುಭವಿಸುವ ವ್ಯಕ್ತಿಗಳಿಗೆ ಹೆಚ್ಚಿನ ಅಪಾಯವನ್ನು ನೀಡುತ್ತದೆ. ನಿದ್ರೆಯ ಅಸ್ವಸ್ಥತೆಗಳು, ನಿದ್ರಾ ಭಂಗ, ನಿದ್ರೆಗೆ ಸಂಬಂಧಿಸಿದ ಅಪಸ್ಮಾರ ಮತ್ತು ಕೆಲವು ಔಷಧಿಗಳು ಅಪಾಯದ ಅಂಶಗಳಾಗಿವೆ. ಲೈಂಗಿಕ ನಿದ್ರಾಹೀನತೆಯನ್ನು ಹೊಂದಿರುವ ವ್ಯಕ್ತಿಯು ತಮ್ಮ ಅಸ್ವಸ್ಥತೆಯ ಸ್ವರೂಪದಿಂದಾಗಿ ವಿವಿಧ ನಕಾರಾತ್ಮಕ ಭಾವನೆಗಳನ್ನು ಅನುಭವಿಸಲು ಸಾಧ್ಯವಿದೆ. ಕೆಳಗಿನವುಗಳು ಸಾಮಾನ್ಯವಾಗಿ ಸೆಕ್ಸ್ಸೋಮ್ನಿಯಾದ ದ್ವಿತೀಯ ಪರಿಣಾಮಗಳನ್ನು ಕಾಣಬಹುದು. ಅದು ವ್ಯಕ್ತಿಗಳಲ್ಲಿ ಕೋಪ, ಗೊಂದಲ, ನಿರಾಕರಣೆ, ಹತಾಶೆ, ಪಾಪಪ್ರಜ್ಞೆ, ವಿಕರ್ಷಣೆ ಮತ್ತು ಅವಮಾನಗಳನ್ನು ಉಂಟುಮಾಡಬಹುದು.
ಈ ರೋಗವನ್ನು ಗುಣಪಡಿಸಲು ಯಾವುದೇ ಖಚಿತ ಔಷಧಿ ಇಲ್ಲ ಎಂದು ಮನೋವೈದ್ಯರು ಹೇಳುತ್ತಾರೆ. ಇದೆಲ್ಲ ಮಾನಸಿಕ ರೋಗ ಭಾಗದ ಒಂದು ವಿಧ. ಇದು ಸಂಭವಿಸಿದಾಗ, ಸಹ ಪಾಲುದಾರರು ತಮ್ಮದೇ ಪರಿಹಾರವನ್ನು ಕಂಡುಹಿಡಿಯಬೇಕು. ಇದು ಸಂಭವಿಸಿದಲ್ಲಿ, ಪಾಲುದಾರನನ್ನು ಬಲವಂತವಾಗಿ ಜಾಗೃತಗೊಳಿಸಬೇಕು. ಅಗತ್ಯವಿದ್ದರೆ, ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳದೆ ಮಾತನಾಡಿ. ಮನಶ್ಶಾಸ್ತ್ರಜ್ಞರು ಸಹ ಹೇಳುತ್ತಾರೆ, ನಿಮ್ಮ ಸಂಗಾತಿಯೊಂದಿಗೆ ಸಂಪೂರ್ಣ ವಿಷಯವನ್ನು ಮುಕ್ತವಾಗಿ ಚರ್ಚಿಸಿ. ಸಮಸ್ಯೆಯು ಕಣ್ಮರೆಯಾಗುತ್ತದೆ. ಇಂತಹ ಸಮಸ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಬಹುದು. ಸೆಕ್ಸ್ಸೋಮ್ನಿಯಾ ತಡೆಗಟ್ಟುವಿಕೆಯ ಮೊದಲ ಕೆಲಸವಾಗಿ ಅಸ್ವಸ್ಥತೆಯನಿಂದ ಪೀಡಿತ ನಿಂದ ಎಲ್ಲರೂ ದೂರ ಇರಬೇಕು. ಪತ್ನಿ ಬಿಟ್ಟು ಇತರ ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ನಿರ್ಮಿಸಬೇಕು. ಮುನ್ನೆಚ್ಚರಿಕೆ ಕ್ರಮಗಳಾಗಿ ಆ ವ್ಯಕ್ತಿಯನ್ನು ಪ್ರತ್ಯೇಕ ಮಲಗುವ ಕೋಣೆಯಲ್ಲಿ ನಿದ್ರಿಸಲು ಬಿಡಬೇಕು. ತಪ್ಪಿದಲ್ಲಿ ಲೈಂಗಿಕ ದೌರ್ಜನ್ಯ ಆಗುವ ಸಂಭವ ಇದೆ.