ಕೇಸರಿ ಬಿಕನಿಗೆ ಕಿರಿಕ್‌ ಮಾಡಿದವರಿಗೆ ಕಿಂಗ್‌ ಖಾನ್‌ ಕೊಟ್ರು ನೋಡಿ ತಿರುಗೇಟು

Share the Article

ಕೇಸರಿ ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದರೆ  ಹಸಿರು ಬಟ್ಟೆಯಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡು  ಜತೆಗೆ ಕೇಸರಿ ಬಣ್ಣವನ್ನು “ನಾಚಿಕೆಯಿಲ್ಲದ ಬಣ್ಣ” ಎಂದು ಇತ್ತೀಚೆಗೆ ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದ  ಶಾರುಖ್ ಖಾನ್ ಬಗ್ಗೆ ಎಲ್ಲೆಡೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿತ್ತು. ಈ ಬಗ್ಗೆ  ಸೋಶಿಯಲ್​ ಮೀಡಿಯಾದಲ್ಲಿ ನೆಗೆಟಿವ್​ ವಿಚಾರಗಳನ್ನು ಪಸರಿಸ ಲಾಗುತ್ತಿದೆ ಎಂಬ  ಕುರಿತು ‘ಪಠಾಣ್​’ ಚಿತ್ರದ ಹೀರೋ ಶಾರುಖ್​ ಖಾನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಟ ಶಾರುಖ್​ ಖಾನ್​ (Shah Rukh Khan) ಅವರು ಸದ್ಯ ‘ಪಠಾಣ್​’ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ  ಚಿತ್ರದ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಜೋರಾಗಿ ನಡೆಯುತ್ತಿದೆ. ಕೆಲವರು  ಶಾರುಖ್​ ಖಾನ್​ ಅವರನ್ನು ಟಾರ್ಗೆಟ್​ ಮಾಡುತ್ತಿದ್ದು, ಹಾಗಾಗಿ ‘ಪಠಾಣ್​’ (Pathaan) ಚಿತ್ರವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿವೆ.

ಅಷ್ಟೆ ಅಲ್ಲದೆ, ಅಭಿಯಾನಗಳು ಕೂಡ ನಡೆಯುತ್ತಿವೆ. ಇದೆಲ್ಲದರ ನಡುವೆ, ಈ ಸಿನಿಮಾದ ‘ಬೇಷರಂ ರಂಗ್​.:.(Besharam Rang Song) ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಧರಿಸಿ, ಶಾರೂಖ್ ಹಸಿರು ಬಟ್ಟೆ ತೊಟ್ಟು ಲವ್ ಜಿಹಾದ್ ಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ,  ಶಾರುಖ್​ ಖಾನ್​ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಗುರುವಾರ (ಡಿ.15) ಸಂಜೆ ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆಗೊಂಡಿದ್ದು, ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಾತನಾಡಿದ ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ವಿಚಾರಗಳನ್ನು ಪ್ರಚಾರ ಮಾಡಲಾಗುತ್ತಿದ್ದು, ಈ  ಕುರಿತು ಶಾರುಖ್​ ಖಾನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ . ‘ಸಂಕುಚಿತ ದೃಷ್ಟಿಕೋನದಿಂದ ಈ ರೀತಿ ಆಗುತ್ತಿದ್ದು, ಈ ವೇಳೆ  ಸಿನಿಮಾಗೆ ಮಹತ್ವದ ಪಾತ್ರವಿದೆ’ ಎಂದು  ‘ಪಠಾಣ್​’ ಚಿತ್ರದ ಹೆಸರನ್ನು ಬಳಸದೇ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಭಾಷಣ ಮುಗಿಸುವಾಗ ಅವರು ಹೇಳಿದ ಮಾತು  ವೈರಲ್ ಆಗಿ ಸಂಚಲನ ಮೂಡಿಸಿದೆ.

ಇದೆ ವೇಳೆ, ‘ಜಗತ್ತು ಸಹಜ ಸ್ಥಿತಿಗೆ ಬಂದಿದ್ದು, ನಾವೆಲ್ಲರೂ ಖುಷಿಯಾಗಿದ್ದೇವೆ. ಅಷ್ಟೆ ಅಲ್ಲದೆ, ನಾನು ಹೆಚ್ಚು ಸಂತೋಷದಲ್ಲಿದ್ದೇನೆ. ಈ ಜಗ ಏನು ಬೇಕಾದರೂ ಮಾಡಿಕೊಳ್ಳಲಿ ಎಂದಿದ್ದು, ಅಲ್ಲದೆ, ನಾನು, ನೀವು ಮತ್ತು ಪಾಸಿಟಿವ್​ ಮನಸ್ಥಿತಿ ಇರುವ ಎಲ್ಲ ಜನರು ಜೀವಂತವಾಗಿದ್ದೇವೆ ಎಂದು ಹೇಳಿಕೊಳ್ಳಲು ನನಗೆ ಯಾವುದೇ ಅಡೆತಡೆ ಇಲ್ಲ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ.

ಪಠಾಣ್’ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಬೊಬ್ಬೆ ಹೊಡೆಯುತ್ತಿರುವವರನ್ನು ಉದ್ದೇಶಿಸಿಯೇ ಶಾರುಖ್ ಈ ರೀತಿ ಹೇಳಿದ್ದಾರೆ ಎಂದು ನೆಟ್ಟಿಗರು ಅಂದಾಜಿಸಿದ್ದಾರೆ. ಸದ್ಯ , ಶಾರುಖ್​ ಹೇಳಿದ ಮಾತುಗಳನ್ನು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿದ್ದು, ವೈರಲ್ ಆಗುತ್ತಿದೆ.

2023ರ ಜನವರಿ 25ರಂದು ‘ಪಠಾಣ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಯಶ್​ ರಾಜ್​ ಫಿಲ್ಮ್ಸ್​ ಬ್ಯಾನರ್​ ಮೂಲಕ ನಿರ್ಮಾಣ ಆಗಿದೆ. ಜನರ ವಿರೋಧದ ನಡುವೆಯೂ ಈ ಚಿತ್ರದ ‘ಬೇಷರಂ ರಂಗ್​..’ ಹಾಡು ಯಶಸ್ಸು ಗಳಿಸಿದೆ. 5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕೂಡ ಆಗಿದೆ.

Leave A Reply