Home Business ಸರಕಾರದಿಂದ ಬಂತು 500 ರ ನೋಟಿನ ಕುರಿತು ಮಹತ್ವದ ಮಾಹಿತಿ

ಸರಕಾರದಿಂದ ಬಂತು 500 ರ ನೋಟಿನ ಕುರಿತು ಮಹತ್ವದ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

500 ರೂಪಾಯಿ ನೋಟ್  ಕುರಿತಾಗಿ ಸರ್ಕಾರ  ಮಹತ್ವದ ಮಾಹಿತಿ ನೀಡಿದೆ. 500 ರೂಪಾಯಿ ನೋಟು ಕುರಿತಂತೆ ಕೆಲವೊಂದು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ನೋಟು ಯಾಕೆ ನಕಲಿ ಎನ್ನುವ ಮಾಹಿತಿ ವಿಡಿಯೋದಲ್ಲಿ ವಿವರಿಸಲಾಗಿದೆ.

ಕೇಂದ್ರ ಸರ್ಕಾರ ಕಳ್ಳ ನೋಟಿನ ಹರಿವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೋಟು ಅಮಾನ್ಯಗೊಳಿಸಿದ್ದು ಗೊತ್ತಿರುವ ವಿಷಯವೆ.. ಸರ್ಕಾರ ಅದೆಷ್ಟೇ ಕ್ರಮ ಕೈಗೊಂಡರು ಕೂಡ  ಕಳ್ಳ ನೋಟು ದಂಧೆ ಎಗ್ಗಿಲ್ಲದೆ ತೆರೆಮರೆಯಲ್ಲಿ ನಡೆಯುತ್ತಿವೆ.  ವಂಚಕರು ತಮ್ಮ ಬತ್ತಳಿಕೆಯಿಂದ ಹೊಸ ಹೊಸ ಬ್ರಹ್ಮಾಸ್ತ್ರ ಬಳಸಿ ಕಳ್ಳ ಮಾರ್ಗಗಳನ್ನು ಅನುಸರಿಸಿಕೊಂಡು ತಮ್ಮ ಕೈ ಚಳಕ ತೋರಿಸುತ್ತಲೇ ಇರುತ್ತಾರೆ. 

ಈ ನಡುವೆ, 500 ರೂಪಾಯಿ ನೋಟಿನ ಕುರಿತ  ಸಂದೇಶವೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಇಲ್ಲಿ  500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನೋಟು ಯಾಕೆ ನಕಲಿ ಎನ್ನುವುದನ್ನು ಕೂಡಾ ವಿಡಿಯೋದಲ್ಲಿ ನೋಡಬಹುದಾಗಿದೆ.ಈ ಸಂದೇಶ ರವಾನೆಯಾದ ಬಳಿಕ, ಹೆಚ್ಚಿನವರು ಅದರ ನೈಜತೆಯ ಬಗ್ಗೆ ಪರಾಮರ್ಶೆ ಮಾಡಲು ಮುಂದಾಗಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, 500 ರೂ. ನೋಟು ಮಹಾತ್ಮ ಗಾಂಧಿಯವರ ಚಿತ್ರ ಮತ್ತು ಆರ್‌ಬಿಐ ಗವರ್ನರ್ ಸಹಿಯನ್ನು ಒಳಗೊಂಡಿವೆ.ನೋಟಿನ ಹಿಂಬದಿಯಲ್ಲಿ ಕೆಂಪು ಕೋಟೆಯ ಚಿತ್ರವಿದೆ. ನೋಟಿನ ಬಣ್ಣ  ಸ್ಟೋನ್ ಗ್ರೇ ಬಣ್ಣದ್ದಾಗಿದ್ದು, ವಿಭಿನ್ನ ವಿನ್ಯಾಸ ಮತ್ತು  ಜೋಮೆಟ್ರೀ  ಮಾದರಿಯನ್ನು ಒಳಗೊಂಡಿವೆ.

ಇದೀಗ ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕರ್ ಪಿಐಬಿ, ತನ್ನ ಟ್ವಿಟ್ಟರ್ ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ವಿಡಿಯೋ ಬಗ್ಗೆ ಮಾಹಿತಿ ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯಕ್ಕೆ ದೂರವಾಗಿದೆ ಎಂಬ ಮಾಹಿತಿ ನೀಡಿದೆ . ಈ ರೀತಿ  ನಕಲಿ ಸಂದೇಶಗಳ ಬಗ್ಗೆ ಜನರು ಎಚ್ಚರಿಕೆ ವಹಿಸುವಂತೆ ಮಾಹಿತಿ ನೀಡಿದ್ದು,  ತನ್ನ ಟ್ವೀಟ್‌ನಲ್ಲಿ ನೋಟಿನ ಚಿತ್ರವನ್ನು ಸಹ ಪಿಐಬಿ ಹಂಚಿಕೊಂಡಿದೆ.  ಹಸಿರು ಪಟ್ಟಿ ಆರ್‌ಬಿಐ ಗವರ್ನರ್ ಸಹಿ ಬಳಿ  ಹಾದು ಹೋಗಿದ್ದರೆ, ಅಥವಾ ಗಾಂಧೀಜಿ ಚಿತ್ರದ ಬಳಿ ಹಾದು  ಹೋಗಿದ್ದರೆ ಆ ನೋಟುಗಳು ಅಸಲಿ ಎಂದು ಪಿಐಬಿ ಒತ್ತಿ ಹೇಳಿದೆ.

ನಕಲಿ 500 ನೋಟು ಗುರುತಿಸುವುದು ಹೇಗೆ? ಎಂಬ ಪ್ರಶ್ನೆ ಸಹಜವಾಗಿ ಸಾಮಾನ್ಯರಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ:


RBI ಪ್ರಕಾರ, 500 ರೂ. ನೋಟು ಕೆಲವು ಸ್ಥಿರ  ವೈಶಿಷ್ಟ್ಯಗಳನ್ನು  ಒಳಗೊಂಡಿದ್ದು,  ನಿಮ್ಮಲ್ಲಿರುವ  500 ರೂಪಾಯಿ ನೋಟಿನಲ್ಲಿ ಈ ವೈಶಿಷ್ಟ್ಯಗಳ ಪೈಕಿ ಒಂದು ವೈಶಿಷ್ಟ್ಯ ಇಲ್ಲದೆ ಹೋದರೂ ಅದು ನಕಲಿ ನೋಟು ಎನ್ನುವುದನ್ನು ಅರಿತುಕೊಳ್ಳಬೇಕು.

* ನೋಟಿನ ಮೇಲೆ 500ರ್ ನಂಬರ್ ಬರೆದಿರಬೇಕು.


*ಲೆಟೆಂಟ್ ಇಮೇಜ್ ಮೇಲೆ 500 ಸಂಖ್ಯೆಯನ್ನು ಬರೆಯಬೇಕು.


*ನೋಟಿನ ಮೇಲೆ ದೇವನಾಗರಿಯಲ್ಲಿ 500 ಎಂದು ಬರೆಯಬೇಕು.


*ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿ ಚಿತ್ರ ಇರಬೇಕು.


*ಸೂಕ್ಷ್ಮ ಅಕ್ಷರಗಳಲ್ಲಿ ಭಾರತ ಮತ್ತು ‘India’ ಎಂದು ಬರೆದಿರಬೇಕು.

RBI ಲಾಂಛನವು ರಾಜ್ಯಪಾಲರ ಸಹಿ ಮತ್ತು ಮಹಾತ್ಮ ಗಾಂಧಿಯವರ ಭಾವಚಿತ್ರದ ಬಲಭಾಗದಲ್ಲಿರಬೇಕು.

*ಮಹಾತ್ಮ ಗಾಂಧಿ ಚಿತ್ರ ಮತ್ತು 500 ರ ವಾಟರ್‌ಮಾರ್ಕ್ ಇರಬೇಕು.

*ಮೇಲಿನ ಎಡ ಮತ್ತು ಕೆಳಗಿನ ಬಲಭಾಗದಲ್ಲಿರುವ ನಂಬರ್ ಪ್ಯಾನೆಲ್ ಕೂಡಾ ಗಮನಿಸಿ.

* ಕೆಳಗೆ ಬಲಭಾಗದಲ್ಲಿ ಬಣ್ಣ ಬದಲಾಯಿಸುವ ಶಾಯಿಯಲ್ಲಿ ಅಂದರೆ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗಿವ ಶಾಯಿಯಲ್ಲಿ 500 ಎಂದು ಬರೆದಿರಬೇಕು ಜೊತೆಗೆ ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರಬೇಕು.

ಮೇಲೆ ತಿಳಿಸಿದ ಎಲ್ಲ ಮಾಹಿತಿಗಳು ಇದ್ದರೆ ಮಾತ್ರ 500 ರ ನೋಟು ಅಸಲಿ ಎಂದು ಪರಿಗಣಿಸಹುದಾಗಿದೆ.