Home Health Cracked Heels: ಒಡೆದ ಹಿಮ್ಮಡಿ ಸಮಸ್ಯೆಗೆ ಈ ಎರಡು ವಸ್ತುಗಳು ರಾಮಬಾಣ

Cracked Heels: ಒಡೆದ ಹಿಮ್ಮಡಿ ಸಮಸ್ಯೆಗೆ ಈ ಎರಡು ವಸ್ತುಗಳು ರಾಮಬಾಣ

Hindu neighbor gifts plot of land

Hindu neighbour gifts land to Muslim journalist

ಪಾದಗಳ ಹಿಮ್ಮಡಿ ಒಡೆದಾಗ ಕಾಣಿಸಿಕೊಳ್ಳುವ ನೋವು ಅದನ್ನು ಅನುಭವಿಸಿದವರಿಗೆ ಗೊತ್ತು. ಅದರಲ್ಲೂ ಚಳಿಗಾಲದಲ್ಲಿ ಹಿಮ್ಮಡಿ ಹೊಡೆಯುವಂತ ಸಮಸ್ಯೆ ಗಂಭೀರವಾಗಿರುತ್ತದೆ. ಇದರಿಂದ ನೆಲದ ಮೇಲೆ ಕಾಲಿಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ಸೂಪರ್ ಮನೆಮದ್ದು ಇಲ್ಲಿದೆ. ಹೇಗೆ ಅಂತೀರಾ? ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ.

ಚಳಿಗಾಲದಲ್ಲಿ ಎಷ್ಟೇ ಜಾಗರೂಕತೆ ವಹಿಸಿದರೂ ಪಾದಗಳು ಬಿರುಕು ಬಿಡುತ್ತವೆ. ಯಾವುದೇ ಕ್ರೀಮ್ಗಳನ್ನು ಬಳಸಿದರೂ ಸಹ ಯಾವುದೇ ಲಾಭ ಆಗುವುದಿಲ್ಲ. ಹಿಮ್ಮಡಿಗಳಲ್ಲಿ ತೈಲ ಗ್ರಂಥಿಗಳು ಇಲ್ಲದಿರುವ ಕಾರಣ ಬೇಗನೆ ಬಿರುಕು ಬೀಳುತ್ತದೆ. ಅಲ್ಲದೇ ಶೀತ, ತೇವಾಂಶದ ಕೊರತೆ, ಮಧುಮೇಹ, ಥೈರಾಯ್ಡ್, ಪಾದಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಹೀಗೆ ಪಾದಗಳು ಬಿರುಕು ಬಿಡಲು ಹಲವು ಕಾರಣಗಳಿವೆ.

ಪಾದಗಳ ಬಿರುಕು ಕಡಿಮೆ ಮಾಡಲು ಬೇವಿನ ಎಲೆಗಳು ತುಂಬಾ ಸಹಕಾರಿ. ಬೇವಿನ ಎಲೆ ಬಿರುಕಿಗೆ ರಾಮಬಾಣವೆಂದೆ ಹೇಳಬಹುದು. ಅದರ ಶ್ರೀಮಂತ ಬ್ಯಾಕ್ಟೀರಿಯಾ ವಿರೋಧಿ, ಆಂಟಿಪರಾಸಿಟಿಕ್, ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದಾಗಿ, ಬೇವಿನ ಎಲೆಗಳನ್ನು ಸೌಂದರ್ಯ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಸ್ವಚ್ಛವಾಗಿ ತೊಳೆದು ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ಒಂದು ಬಟ್ಟಲಿನಲ್ಲಿ ಒಂದು ಚಮಚ ಬೇವಿನ ಪೇಸ್ಟ್ ತೆಗೆದುಕೊಂಡು ಅದಕ್ಕೆ ಕಾಲು ಚಮಚ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕು ಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು. ಆದರೆ ಪಾದದ ಬಿರುಕುಗಳು ಆರಂಭವಾದಾಗಲೇ ಈ ಟಿಪ್ಸ್ ಫಾಲೋ ಮಾಡಿದರೆ ನೀವು ಈ ಸಮಸ್ಯೆಯಿಂದ ಬೇಗನೆ ಮುಕ್ತರಾಗಬಹುದು.

ಈ ಸಿಂಪಲ್ ಆದ ಸಣ್ಣ ಮನೆಮದ್ದನ್ನೊಮ್ಮೆ ಬಳಸಿದರೆ ಸಾಕು ನಿಮ್ಮ ಪಾದಗಳಲ್ಲಿನ ಬಿರುಕು ವಾಸಿಯಾಗುವುದಲ್ಲದೆ ಸುಂದರವಾಗಿ ಹೊಳೆಯುತ್ತದೆ.