Home Interesting ಮಕ್ಕಳನ್ನು ಮಾಡಿ, ಶಿಶುಪಾಲನೆಗೆ ಅಧಿಕ ದುಡ್ಡು ನಾವು ನೀಡುತ್ತೇವೆ | ಸರಕಾರದಿಂದ ಜನತೆಗೆ ಬಿಗ್‌ ಆಫರ್‌

ಮಕ್ಕಳನ್ನು ಮಾಡಿ, ಶಿಶುಪಾಲನೆಗೆ ಅಧಿಕ ದುಡ್ಡು ನಾವು ನೀಡುತ್ತೇವೆ | ಸರಕಾರದಿಂದ ಜನತೆಗೆ ಬಿಗ್‌ ಆಫರ್‌

Hindu neighbor gifts plot of land

Hindu neighbour gifts land to Muslim journalist

ಪ್ರತಿ ದೇಶವು ದೇಶದ ಪ್ರಗತಿಗಾಗಿ ಅವಿರತ ಶ್ರಮ ವಹಿಸುವುದಲ್ಲದೆ ಮಹತ್ವದ ತೀರ್ಮಾನ ಕೈಗೊಳ್ಳುತ್ತದೆ. ಆರ್ಥಿಕ ಮುಗ್ಗಟ್ಟಿನ, ರೋಗ ರುಜಿನಗಳು ಕಂಡು ಬಂದಾಗ ನಮ್ಮ ದೇಶದ ಮಾನ್ಯ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಣಯಗಳು ಎಲ್ಲ ದೇಶದ ಜನತೆಯ ಮೆಚ್ಚುಗೆಗೆ ಪಾತ್ರವಾಗಿತ್ತು.

ಜಪಾನ್‍ನ ಜನತೆಗೆ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಮಹತ್ವದ ಆಫರ್ ನೀಡಿದೆ. ದೇಶದಲ್ಲಿ ಜನನ ಪ್ರಮಾಣ ಗಣನೀಯವಾಗಿ ಇಳಿಮುಖ ಆಗುತ್ತಿರುವ ಕಾರಣದಿಂದ ಈ ಹಿನ್ನೆಲೆಯಲ್ಲಿ ಜನರು ಮಗುವನ್ನ ಮಾಡಿಕೊಂಡರೆ ಈಗಾಗಲೇ ನೀಡುತ್ತಿರುವ ಹಣಕ್ಕಿಂತಲೂ 48 ಸಾವಿರ ರೂ.ಅಧಿಕ ನೀಡುವುದಾಗಿ ಘೋಷಣೆ ಮಾಡಲಾಗಿದೆ.

ಮಗುವಿನ ಜನನದ ನಂತರ ಪೋಷಕರಿಗೆ ಹೆರಿಗೆ ಮತ್ತು ಶಿಶುಪಾಲನೆಗಾಗಿ ಒಟ್ಟು 420,000 ಯೆನ್‍ಗಳ (2,52,338 ರೂ.) ಅನುದಾನವನ್ನು ನೀಡಲಾಗುತ್ತಿದೆ. ಇದೀಗ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವ ಕ್ಯಾಟೊ ಕಟ್ಸುನೋಬು, ಮಗು ಜನನದ ನಂತರ ನೀಡಲಾಗುವ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಆ ಸಂಖ್ಯೆಯನ್ನು 5,00,000 ಯೆನ್‍ಗೆ (3,00,402 ರೂ.) ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ.


2021ರಲ್ಲಿ ಬಿಡುಗಡೆಯಾದ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಜಪಾನ್‍ನಲ್ಲಿ ಜನನದ ದರಕ್ಕಿಂತ ಸಾವಿನ ದರ ಹೆಚ್ಚಿದೆ. ದೇಶದಲ್ಲಿ ಕಳೆದ ವರ್ಷ 8,11,604 ಜನನವಾಗಿದ್ದರೆ, 14,39,809 ಸಾವು ದಾಖಲಿಸಿದೆ ಎನ್ನಲಾಗಿದೆ. ಹೀಗಾಗಿ, ಹೊಸ ಘೋಷಣೆ ಮಾಡಿದ್ದು, ಈ ಬಗ್ಗೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಚರ್ಚೆ ನಡೆಸಿದ್ದು, 2023ರ ಆರ್ಥಿಕ ವರ್ಷಕ್ಕೆ ಈ ನಿರ್ಧಾರ ಅಂಗೀಕರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.