ಎಣ್ಣೆ ಪ್ರಿಯರಿಗೆ ಹಬ್ಬವೋ ಹಬ್ಬ! ಇನ್ನು ಮುಂಜಾನೆವರೆಗೂ ಸಿಗುತ್ತೆ ಮದ್ಯ!

ದೇಶದಲ್ಲಿ ಕ್ರೀಡೆಗೆ ವಿಶೇಷ ಸ್ಥಾನಮಾನ ನೀಡುವುದು ತಿಳಿದಿರುವ ವಿಚಾರವೇ!!.. ಅದರಲ್ಲೂ ಯಾವುದಾದರೂ ಕ್ರೀಡೆ ಆರಂಭವಾದರೆ ಸಾಕು ಜನ ನಿದ್ದೆ, ಊಟ ಬಿಟ್ಟು ಆಸಕ್ತಿಯಿಂದ ಕ್ರೀಡೆಯನ್ನು ನೋಡಲು ಉತ್ಸುಕರಾಗಿರುತ್ತಾರೆ.ಭಾರತದಲ್ಲಿ  ಕ್ರಿಕೆಟ್​ ಹೆಚ್ಚು ಇಷ್ಟಪಡುವ  ಅಭಿಮಾನಿಗಳಿರುವಂತೆ  ಫುಟ್ ಬಾಲ್ ಪ್ರಿಯರು ಕೂಡ ಅಷ್ಟೆ ಸಂಖ್ಯೆಯಲ್ಲಿದ್ದಾರೆ ಅಲ್ಲದೆ, ಆಟದ ಕ್ರೇಜ್ ಹೊಂದಿದ್ದಾರೆ ಎಂಬುದು ಸುಳ್ಳಲ್ಲ.

ಇದೀಗ ಫಿಫಾ ವಿಶ್ವಕಪ್​ ನೋಡುಗರಿಗೆ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರಿನ ಜನರಿಗೆ ಭರ್ಜರಿ ಗುಡ್​ನ್ಯೂಸ್​ ದೊರೆತಿದೆ. ಫಿಫಾ ಸೆಮೀಸ್​ ಹಿನ್ನಲೆ ಬೆಂಗಳೂರಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್​ಗಳ (Bar and Restaurant) ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.


ಫಿಫಾ ವಿಶ್ವಕಪ್​ ಸೆಮೀಸ್​ ಹಣಾಹಣಿಯ ರೋಚಕ ಸೆಣಸಾಟ ವನ್ನು  ನೋಡಲು ಪ್ರಪಂಚವೇ ಎದುರು ನೋಡುತ್ತಿದೆ. ಇದೀಗ, ಫಿಫಾ ವಿಶ್ವಕಪ್ 2022 ಸೆಮಿಪೈನಲ್ ಹಂತ ತಲುಪಿದ್ದು, ಈ ಬಾರಿ ಫುಟ್​ಬಾಲ್​ನಲ್ಲಿ ಅನೇಕ ಬಲಿಷ್ಠತಂಡಗಳು  ಟೂರ್ನಿಯಿಂದ ಹೊರಬಿದ್ದಿದ್ದು, ಕೊನೆಯ ಟೈಟ್ ಫೈನಲ್​ ಪಂದ್ಯದ ಕುರಿತು ಅಭಿಮಾನಿಗಳಲ್ಲಿ ಮುಂದೇನಾಗಬಹುದು ಎಂಬ ಕುತೂಹಲ ಮನೆ ಮಾಡಿದೆ.


ಡಿಸೆಂಬರ್​ 14ರ ರಾತ್ರಿ 12.30ಕ್ಕೆ ಅರ್ಜೆಂಟೀನಾ ಹಾಗೂ ಕ್ರೊವೇಷ್ಯಾ ಮಧ್ಯೆ ಮೊದಲ ಸೆಮೀಸ್ ಫೈಟ್​ ನಡೆಯಲಿದ್ದು,  ಬುಧವಾರ ಮದ್ಯರಾತ್ರಿ ಫ್ರಾನ್ಸ್ ಮತ್ತು ಮೊರೊಕ್ಕೋ ನಡುವೆ 2ನೇ ಸಿಮೀಸ್​ ನಡುವೆ ಹಣಾಹಣಿ ನಡೆಯಲಿದೆ.ಉಳಿದಂತೆ ಸೆಮೀಸ್​ನಲ್ಲಿ ಗೆದ್ದ ತಂಡಗಳು ಡಿಸೆಂಬರ್​ 18ರಂದು ರವಿವಾರ, ಫೈನಲ್​ ನಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಫಿಫಾ ವಿಶ್ವಕಪ್​ ನೋಡುಗರಿಗೆ ಅದರಲ್ಲಿಯೂ ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ನೀಡಿದ್ದು,  ಫಿಫಾ ಸೆಮೀಸ್​ ನಿಟ್ಟಿನಲ್ಲಿ  ಬೆಂಗಳೂರಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್​ಗಳ (Bar and Restaurant) ಅವಧಿ ವಿಸ್ತರಣೆ ಮಾಡಿ ಆದೇಶ ನೀಡಲಾಗಿದೆ.


ಫಿಫಾ ವಿಶ್ವಕಪ್​ ಹಿನ್ನಲೆ ಪೆಡರೇಷನ್ ಆಫ್ ಕ್ಲಬ್ಸ್ ಕರ್ನಾಟಕ ಈ ಮೊದಲು ಅವಧಿ ವಿಸ್ತರಣೆ ಮಾಡುವಂತೆ   ಅವಧಿ  ವಿಸ್ತರಣೆ  ಮಾಡುವಂತೆ ಮನವಿ ಸಲ್ಲಿಸಿತ್ತು. ಈ  ಮನವಿಯ ಅನುಸಾರ  2 ದಿನ ಅವಧಿ ವಿಸ್ತರಣೆ ಮಾಡಿರುವುದಾಗಿ ನಗರ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ.

ಈ  ಮೊದಲು ಕೇವಲ  1 ಗಂಟೆ ರಾತ್ರಿಯವರೆಗೆ ಮಾತ್ರ ಬಾರ್​ ಮತ್ತು ಪಬ್​ಗಳನ್ನು ತೆರೆಯಲು ಅವಕಾಶವಿದ್ದಲ್ಲಿ  ಆದರೆ ಫಿಫಾ ವಿಶ್ವಕಪ್ ಸೆಮಿಪೈನಲ್ ಇರುವ ನಿಟ್ಟಿನಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 14 ಹಾಗೂ 15 ರಂದು ಬೆಳಗಿನ ಜಾವ 3.30 ರ ತನಕ ಬೆಂಗಳೂರಿನಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್​ಗಳನ್ನು ತರೆಯಲು ಅನುಮತಿ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.