ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು? ಈ ಸುಲಭ ಸೂತ್ರಗಳನ್ನು ಅಳವಡಿಸಿಕೊಳ್ಳಿ : ಇಲ್ಲಿದೆ ಓದಿ

ಹೊಸಕನ್ನಡ :  ಅನಾರೋಗ್ಯದಿಂದ ದೂರವಿರಲು ಹೆಚ್ಚು ನೀರು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ದಿನಕ್ಕೆ 8 ಗ್ಲಾಸ್ ನೀರು ಕುಡಿದರೆ ಸಾಕು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬಾಯಾರಿಕೆ ಇರಲಿ ಇಲ್ಲದಿರಲಿ ಪ್ರತಿ ಗಂಟೆಗೆ ನೀರು ಕುಡಿಯಬೇಕು ಎಂದು ಸಲಹೆ ನೀಡುತ್ತಾರೆ. ನಮ್ಮ ದೇಹಕ್ಕೆ ಎಷ್ಟು ಲೀಟರ್ ನೀರು ಬೇಕು? ಅನ್ನೋದರ ಬಗ್ಗೆ ತಿಳಿಯೋದು ಅತೀ ಅಗತ್ಯವಾಗಿದೆ. ಇಲ್ಲವಾದಲ್ಲಿ ಅನೇಕ ಸಮಸ್ಯೆ ಎದುರಾಗುವು ಎಲ್ಲ ಸಾಧ್ಯತೆಗಳಿವೆ. ಹಾಗಾಗಿ ನೀರು ಕುಡಿಯುವ ವಿಚಾರಕ್ಕೆವಿಶೇಷ ಸೂತ್ರಗಳಿವೆ. ಇದು ನಾವು ಮಾಡುವ ದೈಹಿಕ ಚಟುವಟಿಕೆ, ವಯಸ್ಸು ಮತ್ತು ಲಿಂಗವನ್ನು ಅವಲಂಬಿಸಿ ಬದಲಾಗುತ್ತದೆ.

ಸಾಮಾನ್ಯವಾಗಿ ನಾವು ಉಸಿರಾಟ, ಬೆವರು ಮತ್ತು ಮೂತ್ರದ ರೂಪದಲ್ಲಿ ದೇಹದಲ್ಲಿ ನೀರಿನ ಅಂಶವನ್ನು ಕಳೆದುಕೊಳ್ಳುತ್ತೇವೆ. ಅದಕ್ಕಾಗಿ ಸಾಕಷ್ಟು ನೀರು ಕುಡಿಯಿರಿ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಇಂಜಿನಿಯರಿಂಗ್ ಮತ್ತು ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ, ಪ್ರಸ್ತುತ ಋತುಮಾನದ ಬದಲಾವಣೆಗಳಿಂದ ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಲೀಟರ್ ನೀರನ್ನು ಕುಡಿಯಬೇಕು?
ಪುರುಷರು – 15.5 ಕಪ್ (3.7 ಲೀಟರ್)
ಮಹಿಳೆಯರು – 11.5 ಕಪ್ (2.7 ಲೀಟರ್)

ಇತರ ದ್ರವಗಳು, ಪಾನೀಯಗಳು ಮತ್ತು ಆಹಾರವನ್ನು ಒಳಗೊಂಡಿರುವ ಈ ಪ್ರಮಾಣದ ನೀರನ್ನು ಕುಡಿಯಬೇಕು. ದೈನಂದಿನ ದ್ರವ ಸೇವನೆಯ ಸುಮಾರು 20 ಪ್ರತಿಶತವನ್ನು ಆಹಾರ ಮತ್ತು ಇತರ ಪಾನೀಯಗಳ ಮೂಲಕ ದೇಹಕ್ಕೆ ಪೂರೈಸಲಾಗುತ್ತದೆ. ದಿನಕ್ಕೆ 8 ಲೋಟ ನೀರು ಕುಡಿಯಬೇಕು ಎಂಬ ತತ್ವ ಎಲ್ಲರಿಗೂ ಅನ್ವಯವಾಗುವುದಿಲ್ಲ. ಕೆಲವು ಜನರು ಎಸಿ ಕೋಣೆಗಳಲ್ಲಿ ಸಮಯವನ್ನು ಕಳೆಯುತ್ತಾರೆ ಮತ್ತು ದೈಹಿಕ ಚಟುವಟಿಕೆಯೂ ಸಹ ಹೆಚ್ಚು ಅಲ್ಲ. ಅಂತಹವರಿಗೆ, 8 ಲೋಟ ನೀರು ಸಾಕು. ಆದರೆ ಬಿಸಿಲಿನಲ್ಲಿ ಕೆಲಸ ಮಾಡುವವರು ಮತ್ತು ದೈಹಿಕ ಚಟುವಟಿಕೆಗಳಿಗೆ ಒಡ್ಡಿಕೊಳ್ಳುವವರಿಗೆ, ಅದಕ್ಕಿಂತ ಹೆಚ್ಚು ನೀರು ಕುಡಿಯುವುದು ಉತ್ತಮ. ಇಲ್ಲದಿದ್ದರೆ, ದೇಹವು ನಿರ್ಜಲೀಕರಣಗೊಳ್ಳುತ್ತದೆ.

Leave A Reply

Your email address will not be published.