ಬಾಯಿಯಿಂದ ದುರ್ವಾಸನೆ ಹೋಗಲಾಡಿಸಲು ಈ ಟಿಪ್ಸ್ ಬೆಸ್ಟ್!
ಬಾಯಿಯಿಂದ ದುರ್ವಾಸನೆ ಬರುವುದು ಚಿಕ್ಕ ಮಕ್ಕಳಿಂದ ಮೊದಲುಗೊಂಡು ಎಲ್ಲ ವಯಸ್ಸಿನವರಲ್ಲೂ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ. ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ, ಆತ್ಮೀಯರೊಡನೆ ಕುಳಿತು ಮಾತನಾಡುತ್ತಿರುವಾಗ, ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗುತ್ತದೆ. ಬಾಯಿಯಲ್ಲಿ ದುರ್ವಾಸನೆ ಉಂಟಾಗಲು ಹಲವು ಕಾರಣಗಳಿವೆ.
ಬೆಳಗ್ಗೆ ಎದ್ದ ತಕ್ಷಣ ಕೆಲವರು ತಮ್ಮ ಹಲ್ಲುಗಳನ್ನು ಚೆನ್ನಾಗಿ ಬ್ರಶ್ (Teeth Brush) ಮಾಡಿ ಮತ್ತು ಬಾಯಿಯೊಳಗೆ ಉಪ್ಪು ಮಿಶ್ರಿತ ನೀರನ್ನು ಹಾಕಿಕೊಂಡು ಬಾಯಿ ಮುಕ್ಕಳಿಸಿದರೂ ಒಂದೆರಡು ಗಂಟೆಗಳ ನಂತರ ಮತ್ತೆ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಇದು ಹ್ಯಾಲಿಟೋಸಿಸ್ ಅಂತ ಹೇಳಬಹುದು ಎಂದರೆ (ಲ್ಯಾಟಿನ್ ಫಾರ್ ಬ್ಯಾಡ್ ಬ್ರೀತ್) ಇದು ಬಾಯಿಯ ಆರೋಗ್ಯ ಸಮಸ್ಯೆಯಾಗಿದ್ದು, ಅಲ್ಲಿ ಮುಖ್ಯ ಲಕ್ಷಣವೆಂದರೆ ಕೆಟ್ಟ ವಾಸನೆಯ ಉಸಿರಾಟ. ಸಾಮಾನ್ಯವಾಗಿ, ಮಸಾಲೆಯುಕ್ತ ಊಟವನ್ನು ಸೇವಿಸಿದ ನಂತರ ಮತ್ತು ಬೆಳಗ್ಗೆ ಎದ್ದ ನಂತರ ಹೆಚ್ಚಾಗಿ ಸಂಭವಿಸುತ್ತದೆ.
ಅಲ್ಲದೆ ಕೊಳೆತ ಹಲ್ಲುಗಳು, ಜಿಂಗೈವಿಟಿಸ್, ಬಾಯಿಯಲ್ಲಿನ ಗುಳ್ಳೆಗಳು, ನೆಗಡಿ, ಮ್ಯಾಕ್ಸಿಲರಿ ಸೈನಸೈಟಿಸ್ ಮತ್ತು ಕ್ಸೆರೊಸ್ಟೋಮಿಯಾ (ಒಣಗಿದ ಬಾಯಿ)ದಿಂದ ದುರ್ವಾಸನೆ ಉಂಟಾಗಬಹುದು. ನಾವು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾಗುವಷ್ಟು ನೀರನ್ನು ಕುಡಿಯುವುದಿಲ್ಲ. ನಮ್ಮ ಜೀರ್ಣ ಶಕ್ತಿ ಕಡಿಮೆಯಾಗಿದ್ದರೂ ಸಹ ಬಾಯಿಯ ದುರ್ವಾಸನೆ ಬರುತ್ತದೆ.
ಹ್ಯಾಲಿಟೋಸಿಸ್ ಕಳಪೆ ಬಾಯಿಯ ನೈರ್ಮಲ್ಯ, ಸರಿಯಾಗಿ ಹೊಂದಿಕೊಳ್ಳದ ಪ್ರೊಸ್ಥೆಸಿಸ್ ಮತ್ತು ಒಸಡಿನ ಸೋಂಕಾಗಿರುವ ಪೀರಿಯಡಾಂಟೈಟಿಸ್ ಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಚಿಕಿತ್ಸೆಯ ನಂತರವೂ ಬಾಯಿಯಲ್ಲಿ ಕೆಟ್ಟ ವಾಸನೆ ಹಾಗೆಯೇ ಮುಂದುವರಿದರೆ, ಮೂತ್ರಪಿಂಡದ ಕಾಯಿಲೆ, ಪಿತ್ತಜನಕಾಂಗದ ಕಾಯಿಲೆ, ಮಧುಮೇಹ, ಒಣ ಬಾಯಿ ಮುಂತಾದ ಇತರ ಕಾರಣಗಳನ್ನು ಪರೀಕ್ಷಿಸಿಕೊಳ್ಳುವುದು ಒಳಿತು ಎಂದು ದಂತ ವೈದ್ಯರು ತಿಳಿಸುತ್ತಾರೆ.
ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ರೋಗಿಗಳು ಬಾಯಿಯಲ್ಲಿ ಶುಷ್ಕತೆಯನ್ನು ಹೊಂದಿದ್ದರೆ, ಜೆಲ್ ಗಳನ್ನು ಬಳಸಿ ಮತ್ತು ಹೆಚ್ಚು ನೀರನ್ನು ಕುಡಿಯಿರಿ. ವರ್ಷಕ್ಕೆ ಒಮ್ಮೆಯಾದರೂ ಸ್ಕೇಲಿಂಗ್ ಮಾಡಿಸಿ. ಕೊಳೆತ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳಿ ಅಥವಾ ಅದನ್ನು ಪುನಃ ಹಚ್ಚಿಸಿಕೊಳ್ಳಿರಿ.
ಪ್ರತಿ ಊಟದ ನಂತರ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಊಟ ನಂತರ ಹಲ್ಲುಗಳ ನಡುವೆ ಸಿಕ್ಕಿ ಹಾಕಿಕೊಂಡಿರುವ ಆಹಾರವನ್ನು ಸ್ವಚ್ಛಗೊಳಿಸಲು ಡೆಂಟಲ್ ಫ್ಲಾಸ್ ಅಥವಾ ಇಂಟರ್ ಡೆಂಟಲ್ ಬ್ರಷ್ ಬಳಸಿ. ಪ್ರತಿ ರಾತ್ರಿ ಬೆಚ್ಚಗಿನ ನೀರನ್ನು ಬಾಯಿಗೆ ಹಾಕಿಕೊಂಡು ಬಾಯಿಯನ್ನು ಮುಕ್ಕಳಿಸಬೇಕು. ರಕ್ತ ಪರಿಚಲನೆಯನ್ನು ಸುಧಾರಿಸಿಕೊಳ್ಳಲು ಪ್ರತಿದಿನ ನಿಮ್ಮ ಒಸಡುಗಳನ್ನು ಮಸಾಜ್ ಮಾಡಿ. ಮಕ್ಕಳಿಗೆ ಫ್ಲೋರೈಡ್ ಯುಕ್ತ ಟೂತ್ ಪೇಸ್ಟ್ ಬಳಸಿ. ದಿನಕ್ಕೆರಡು ಬಾರಿ ಹಲ್ಲುಜ್ಜಬೇಕು, ನಿಯಮಿತವಾಗಿ ಮೌತ್ ವಾಶ್ ಬಳಸಿ ಇದರಿಂದ ದುರ್ವಾಸನೆ ಬರುವುದಿಲ್ಲ.
ದಂತ ವೈದ್ಯರ ಬಳಿ ಹೋಗಿ ಅವರನ್ನು ಭೇಟಿ ಮಾಡಿ ಮತ್ತು ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ತಿಳಿದುಕೊಳ್ಳಿರಿ ಮತ್ತು ಚಿಕಿತ್ಸೆ ಪಡೆಯಿರಿ.