ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸುರಕ್ಷತೆಗಾಗಿಯೇ ಇದೆ ಈ ಯೋಜನೆ | 1 ಲಕ್ಷ ಪಡೆಯೋ ಅವಕಾಶ, ಅರ್ಹತೆ ಹೆಚ್ಚಿನ ವಿವರ ಇಲ್ಲಿದೆ!
ಕೇಂದ್ರ ಸರ್ಕಾರವು ದೇಶದ ಜನರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳ ಫಲಾನುಭವವನ್ನು ಪಡೆದುಕೊಳ್ಳಲು ಹಲವಾರು ಮಂದಿಗೆ ತಿಳಿದಿಲ್ಲ. ಇಂತಹ ಒಂದು ಯೋಜನೆಗಳು ಜಾರಿಯಲ್ಲಿದೆ ಎಂಬ ವಿಷಯವೇ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಅಂತಹ ಯೋಜನೆಗಳ ಪೈಕಿ ಒಂದು ‘ಲಾಡ್ಲಿ ಲಕ್ಷ್ಮೀ ಯೋಜನೆ’ಯಾಗಿದೆ. ಹೆಣ್ಣು ಮಕ್ಕಳ ಪೋಷಕರಿಗೆ ಇದೊಂದು ಉತ್ತಮ ಯೋಜನೆಯಾಗಿದ್ದೂ, ಈ ಯೋಜನೆ ಮೂಲಕ ನಾವು ಒಂದು ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ.
ಲಾಡ್ಲಿ ಲಕ್ಮ್ಮೀ ಯೋಜನೆಯನ್ನು ಸರ್ಕಾರವು 2006ರಲ್ಲಿ ಜಾರಿಗೆ ತಂದಿದೆ. ಮೊದಲು ಮಧ್ಯ ಪ್ರದೇಶದಲ್ಲಿ ಜಾರಿಗೆ ತರಲಾಗಿದೆ. ಅದಾದ ಬಳಿಕ ಈ ಯೋಜನೆಯನ್ನು ಹರಿಯಾಣ, ರಾಜಸ್ಥಾನ, ಬಿಹಾರ ಮೊದಲಾದ ರಾಜ್ಯಗಳಿಗೆ ವಿಸ್ತರಿಸಲಾಗಿದೆ. ಪ್ರಸ್ತುತ ಕರ್ನಾಟಕದಲ್ಲೂ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಹೆಣ್ಣು ಮಗುವನ್ನು ಹೊಂದಿರುವ ಕುಟುಂಬವು ಹೆಣ್ಣಿಗೆ 18 ವರ್ಷ ವಯಸ್ಸಾದಾಗ ಸುಮಾರು 100,000 ರೂಪಾಯಿವರೆಗೆ ಹಣವನ್ನು ಪಡೆಯಬಹುದಾಗಿದ್ದೂ, ಇದರ ಜೊತೆಗೆ ಬಡ್ಡಿದರವು ಕೂಡಾ ಈ ಯೋಜನೆಯಡಿಯಲ್ಲಿ ಲಭ್ಯವಾಗುತ್ತದೆ.
ಲಾಡ್ಲಿ ಲಕ್ಷ್ಮೀ ಯೋಜನೆಯನ್ನು ಭಾರತ ಸರ್ಕಾರವು ಜಾರಿ ಮಾಡಿದ್ದೂ, ಇದರ ಮೂಲ ಉದ್ದೇಶ ದೇಶದಲ್ಲಿರುವ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸುರಕ್ಷತೆ. ಈ ಯೋಜನೆಯು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬಕ್ಕಾಗಿ ಸರ್ಕಾರವು ಜಾರಿಗೆ ತಂದಿದ್ದೂ, ಇದು ಫಿಕ್ಸಿಡ್ ಡೆಪಾಸಿಟ್ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣವು ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಇತರೆ ಖರ್ಚಿಗಾಗಿ, ಆಕೆಗೆ 18 ವರ್ಷವಾದಾಗ ಬಳಕೆ ಮಾಡಲು ಅವಕಾಶ ನೀಡುವ ಯೋಜನೆ ಇದಾಗಿದೆ.
ಹೆಣ್ಣು ಮಗು ಜನಿಸಿದಾಗಲೇ ಲಾಡ್ಲಿ ಲಕ್ಷ್ಮೀ ಯೋಜನೆಯಲ್ಲಿ ದಾಖಲಾತಿ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಪೋಷಕರು ಈ ಯೋಜನೆಯನ್ನು ಯಾವೆಲ್ಲ ರಾಜ್ಯದಲ್ಲಿ ಜಾರಿಗೆ ತರಲಾಗಿದೆ, ಆ ರಾಜ್ಯದಲ್ಲೇ ವಾಸಿಸುತ್ತಿರುವ ನಿವಾಸಿಗಳು ಆಗಿರಬೇಕು. ಈ ಯೋಜನೆಯ ಫಲಾನುಭವಿಗಳ ವಾರ್ಷಿಕ ಆದಾಯವು 400,000 ರೂಪಾಯಿಗಿಂತ ಕಡಿಮೆ ಇರಬೇಕು. ಹಾಗೆಯೇ ಮಗುವಿಗೆ ಅಗತ್ಯವಾಗಿರುವ ಎಲ್ಲ ಲಸಿಕೆಗಳನ್ನು ಹಾಕಿಸಿಕೊಂಡಿರಬೇಕು. ಮಗುವನ್ನು ಶಾಲೆಗೆ ಸೇರಿಸಿರಬೇಕು. ಈ ಎಲ್ಲಾ ಅರ್ಹತೆಯಿದ್ದರೆ ಮಾತ್ರ ಈ ಯೋಜನೆಗೆ ಸೇರಬಹುದು.
ಲಾಡ್ಲಿ ಲಕ್ಮ್ಮೀ ಯೋಜನೆಯಡಿಯಲ್ಲಿ ಹಲವಾರು ಪ್ರಯೋಜನಗಳು ಇದೆ. ಈ ಯೋಜನೆಯು ಹೆಣ್ಣು ಮಕ್ಕಳಿರುವ ಕುಟುಂಬಕ್ಕೆ ಆರ್ಥಿಕವಾಗಿ ಹಣಕಾಸಿನ ಸೌಲಭ್ಯವನ್ನು ನೀಡುತ್ತದೆ. ಇದನ್ನು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಅವರಿಗೆ ಬೇಕಾದ ಇತರೆ ಖರ್ಚಿಗಾಗಿ ಬಳಕೆ ಮಾಡಿಕೊಳ್ಳಬಹುದು. ಇದು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವುದು ಮಾತ್ರವಲ್ಲದೆ, ಕುಟುಂಬವು ಹೆಣ್ಣು ಮಗುವಿಗಾಗಿ ವೆಚ್ಚ ಮಾಡಲು ಆರ್ಥಿಕ ಸಹಾಯವನ್ನು ನೀಡುತ್ತದೆ. ಹಾಗೆಯೇ ಮಕ್ಕಳಿಗೆ ಲಸಿಕೆಯನ್ನು ನೀಡಬೇಕೆಂಬ ಪ್ರಾಮುಖ್ಯತೆ, ಹಾಗೆಯೇ ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ತರುವಲ್ಲಿ ಈ ಯೋಜನೆ ಸಹಕಾರಿಯಾಗಿದೆ.
ಲಾಡ್ಲಿ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಸಮೀಪದ ಸರ್ಕಾರಿ ಕಚೇರಿಗೆ ಅಥವಾ ಬ್ಯಾಂಕ್‌ನ ಬ್ರಾಂಚ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಕಚೇರಿ ಅಥವಾ ಬ್ಯಾಂಕ್‌ನಲ್ಲಿ ನೀಡಲಾಗುವ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅಲ್ಲಿನ ಸಿಬ್ಬಂದಿಗಳ ಸಹಾಯವನ್ನು ಕೂಡ ಪಡೆಯಬಹುದು. ನಿಮ್ಮ ವಿಳಾಸ ಪುರಾವೆ, ಆದಾಯ ಪುರಾವೆ, ಮಗುವಿನ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್‌ನಂತಹ ಮುಖ್ಯ ದಾಖಲೆಗಳು ಬೇಕಾಗುತ್ತದೆ. ಸಂಬಂಧಪಟ್ಟ ಇಲಾಖೆಯು ಈ ಅರ್ಜಿಯನ್ನು ಪರಿಶೀಲನೆ ಮಾಡಿ, ಹೆಣ್ಣು ಮಗುವಿನ ಹೆಸರಲ್ಲಿ ಫಿಕ್ಸೆಡ್ ಡೆಪಾಸಿಟ್ ಅನ್ನು ಇರಿಸುತ್ತದೆ. ಈ ಮೊತ್ತವನ್ನು ಹೆಣ್ಣು ಮಗುವಿಗೆ 18 ವರ್ಷವಾದಾಗ ವಿತ್‌ಡ್ರಾ ಮಾಡಿಕೊಂಡು ಹೆಣ್ಣು ಮಕ್ಕಳ ಶಿಕ್ಷಣ ಅಥವಾ ಆರೋಗ್ಯಕ್ಕಾಗಿ ಬಳಕೆ ಮಾಡಬಹುದು.