ಲಾಕ್ ಡೌನ್ ಮೇ 31 ವರೆಗೆ ಮತ್ತೆ ವಿಸ್ತರಣೆ | ಕೇಂದ್ರದಿಂದ ಮಾರ್ಗ ಸೂಚಿ 4.0 ಪ್ರಕಟ

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಸದ್ಯ ಇರುವ ಲಾಕ್​ಡೌನ್​ ಅವಧಿಯನ್ನು ಇನ್ನೂ ಎರಡುವಾರಗಳ ಕಾಲ ಅಂದರೆ ಮೇ 31ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಲಾಕ್​ಡೌನ್​ 4.0 ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ. ಹಲವು ಸಡಿಲಿಕೆಗಳಾಗಲಿವೆ, ಸಾರ್ವಜನಿಕ ಸಾರಿಗೆಗಳಿಗೆ ಅವಕಾಶ ಸಿಗಲಿದೆ, ರೆಸ್ಟೋರೆಂಟ್​, ಶಾಪಿಂಗ್​ ಮಾಲ್​ಗಳು ಮತ್ತೆ ತೆರೆಯಲಿವೆ ಎಂಬ ಹತ್ತುಹಲವು ಚರ್ಚೆಗಳಿಗೆ ಕೇಂದ್ರ ಗೃಹ ಸಚಿವಾಲಯ ಇಂದು ತೆರೆ ಎಳೆದಿದೆ.

ದೇಶದಲ್ಲಿ ಕೊವಿಡ್​-19 ತಡೆಗಟ್ಟಲು ಇನ್ನೂ ಹೆಚ್ಚಿನ ನಿಯಂತ್ರಣಾ ಕ್ರಮಗಳು ಅಗತ್ಯ ಇರುವ ಕಾರಣ ಲಾಕ್​ಡೌನ್​ ಅವಧಿ ವಿಸ್ತರಣೆ ಮಾಡಲಾಗಿದ್ದು, ಎಲ್ಲ ರಾಜ್ಯಸರ್ಕಾರಗಳಿಗೂ ಸೂಚನೆ ನೀಡಲಾಗಿದೆ.ಉನ್ನತ ವಿಪತ್ತು ನಿರ್ವಹಣಾ ಸಂಸ್ಥೆಯಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗೃಹ ಸಚಿವಾಲಯಕ್ಕೆ ನೀಡಿದ ಶಿಫಾರಸ್ಸಿನ ಮೇರೆಗೆ ಈ ಆದೇಶ ಪ್ರಕಟಿಸಲಾಗಿದೆ.

*ಉದ್ಯೋಗಿಗಳು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ

  • ಈ ಹಿಂದಿನಂತೆ ಅವಶ್ಯಕ ವಸ್ತುಗಳು ದೊರೆಯಲಿವೆ.
  • ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಜಿಮ್, ಚಿತ್ರಮಂದಿರ ಬಂದ್ ಮುಂದುವರಿಕೆ.
  • ಅಂತರ್ ರಾಜ್ಯ ಬಸ್ ಸಂಚಾರದ ಕುರಿತು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು.
  • ಡೊಮೆಸ್ಟಿಕ್ ಮೆಡಿಕಲ್ ಸರ್ವಿಸ್ ಹೊರತುಪಡಿಸಿ ಯಾವುದೇ ರೀತಿಯ ಡೊಮೆಸ್ಟಿಕ್ ಹಾಗೂ ವಿದೇಶಿ ಪ್ರಯಾಣ ಇರುವುದಿಲ್ಲ.
  • ದೇಶಾದ್ಯಂತ ಮೆಟ್ರೋ ರೈಲು ಸೇವೆ ಇರುವುದಿಲ್ಲ
  • ಶಾಲೆ-ಕಾಲೇಜು, ತರಬೇತಿ ಕೇಂದ್ರ, ಕೋಚಿಂಗ್ ಇನ್ಸ್‌ಟ್ಯೂಟ್ಸ್ ಈ ಹಿಂದಿನಂತೆ ಬಂದ್ ಇರಲಿವೆ. (ಆನ್‌ಲೈನ್ ಟೀಚಿಂಗ್‌ಗೆ ಅನುಮತಿ.)
  • ಹೋಟೆಲ್, ರೆಸ್ಟೋರೆಂಟ್ ಮತ್ತೆ ಲಾಡ್ಜಿಂಗ್ ಎಲ್ಲವೂ ಬಂದ್( ಹೋಮ್ ಡೆಲಿವರಿಗೆ ಅನುಮತಿ ಇದೆ)
  • ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಸ್ಟೇಡಿಯಂ, ಚಿತ್ರಮಂದಿರ, ಮಾಲ್, ಸ್ವಿಮ್ಮಿಂಗ್ ಪೂಲ್ಸ್, ಜಿಮ್ ಬಾರ್ ಮತ್ತು ಅಡಿಟೋರಿಯಂಗಳು, ಅಸೆಂಬ್ಲಿ ಹಾಲ್‌ಗಳು ಬಂದ್,
  • ಎಲ್ಲಾ ರೀತಿಯ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮ ಸೇರಿದಂತೆ ಹೆಚ್ಚು ಜನರು ಸೇರುವ ಫಂಕ್ಷನ್‌ಗಳನ್ನು ಮಾಡುವಂತಿಲ್ಲ.
  • ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರುವುದು ನಿಷೇಧಿಸಲಾಗಿದೆ.
  • ಪ್ರಾರ್ಥನಾ ಮಂದಿರಗಳಲ್ಲಿ ಧಾರ್ಮಿಕ ಸಭೆ ಮಾಡುವಂತಿಲ್ಲ

Leave A Reply

Your email address will not be published.