ಕಾಂತಾರ ಎಫೆಕ್ಟ್ : ಸ್ಕೂಲ್ ನಲ್ಲಿ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಕೊಟ್ಟ ಉತ್ತರ ನೋಡಿ ಶಿಕ್ಷಕರು ಬೇಸ್ತು!!!
ಕಾಂತಾರ ಅನ್ನೋ ಸಿನಿಮಾ ರಿಲೀಸ್ ಆದ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ತುಳುನಾಡಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎಂಬುದನ್ನು ವಿವರಿಸಬೇಕಾಗಿಲ್ಲ. ಎಲ್ಲಿ ಹೋದರೂ ಬಂದರೂ..ಎಲ್ಲರ ಬಾಯಲ್ಲೂ ಸಿನಿಮಾದ ಹಾಡೆ ಕೇಳಿ ಬರುತ್ತಿವೆ.
ಕಾಂತಾರ (Kantara) ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಹಿಟ್ ಆಗಿ 400ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಿದ್ದು ತಿಳಿದಿರುವಂತದ್ದೇ!!!ಆದ್ರೆ,ರಿಷಬ್ ಶೆಟ್ರ ಕಾಂತಾರ ಸಿನಿಮಾ ಎಷ್ಟು ಜನತೆಯ ಮೇಲೆ ಪ್ರಭಾವ ಬೀರಿದೆ ಎನ್ನುವುದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ಬೆಳಕಿಗೆ ಬಂದಿದೆ.
3 ನೆ ತರಗತಿ ವಿದ್ಯಾರ್ಥಿಯೊಬ್ಬ ಬರೆದಿರುವ ಉತ್ತರ ಕಂಡು ಶಿಕ್ಷಕರೇ ಅಚ್ಚರಿ ಪಟ್ಟಿದ್ದಾರೆ. ಕಾಂತಾರ ಸಿನಿಮಾ ಬಿಡುಗಡೆಯ ಬಳಿಕ ಎಲ್ಲೆಡೆ ತುಳುನಾಡಿನ ಆಚರಣೆಯ ಪರಿಚಯವಾಗಿ ದೈವ, ಗುಳಿಗ, ಪಂಜುರ್ಲಿ, ಭೂತಾರಾಧನೆ ಮೇಲಿನ ಜನರ ನಂಬಿಕೆ, ಭಕ್ತಿ ಹೆಚ್ಚಾಗುವಂತೆ ಮಾಡಿದ್ದು ಸುಳ್ಳಲ್ಲ.
ದೇಶದ ಯಾವ ಮೂಲೆಯಲ್ಲಿ ಇದ್ದರೂ ಕೂಡ ಹುಟ್ಟೂರಿಗೆ ಬಂದು ದೈವಾರಾಧನೆ, ಭೂತ, ಕೋಲದಲ್ಲಿ ಭಾಗಿಯಾಗುವುದು ವಾಡಿಕೆ. ಕಾಂತಾರ ಸಿನಿಮಾ ಪ್ರತಿಯೊಬ್ಬರ ಮನದಲ್ಲಿ ಕೂಡ ಅಚ್ಚಳಿಯದೆ ಉಳಿದ ಸಿನಿಮಾ ಎಂದರೆ ತಪ್ಪಾಗದು. ಈ ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ ಕೂಡ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದು, ಭಾಷಾ, ಪರಭಾಷಾ ಅನೇಕ ನಟ, ನಟಿಯರು, ನಿರ್ದೇಶಕರು , ಗಣ್ಯಾತಿ ಗಣ್ಯರು ಕೂಡ ಸಿನಿಮಾದ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ರಿಷಬ್ ಶೆಟ್ಟಿ ಸಿನಿಮಾ ಎಷ್ಟರ ಮಟ್ಟಿಗೆ ಎಲ್ಲರ ಮೇಲೆ ತನ್ನ ಪ್ರಭೆಯನ್ನು ಬೀರಿದೆ ಎನ್ನುವುದಕ್ಕೆ ನಿದರ್ಶನ ಎಂಬಂತೆ 3 ನೆಯ ತರಗತಿ ಓದುತ್ತಿರುವ ವಿದ್ಯಾರ್ಥಿಯ ಉತ್ತರ ಎಲ್ಲರನ್ನು ಬೆರಗುಗೊಳಿಸಿದೆ .
ಅಷ್ಟಕ್ಕೂ ಮೂರನೇ ತರಗತಿ ವಿದ್ಯಾರ್ಥಿ ಮಾಡಿದ್ದಾದೂ ಏನು ಅಂತ ಯೋಚಿಸುತ್ತಿದ್ದೀರಾ??? ಪರೀಕ್ಷೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ತಿಳಿದು ಬರೆ’ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ವಿದ್ಯಾರ್ಥಿ ಬರೆದ ಉತ್ತರ ನೋಡಿ ಶಿಕ್ಷಕರು ಶಾಕ್ ಆಗಿದ್ದಾರೆ. ಅಲ್ಲದೇ ಆ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿ ಸಂಚಲನ ಮೂಡಿಸಿದೆ.
ಅಂದಹಾಗೆ ವಿದ್ಯಾರ್ಥಿ ಉತ್ತರ ಹೇಗಿತ್ತು?? ಗೊತ್ತಾ??
‘ಕ್ಷೇತ್ರಪಾಲ, ಗುಳಿಗಾ ಮತ್ತು ದೈವ’ ಎಂದು ಬರೆದಿದ್ದು, ಪುಟ್ಟ ಬಾಲಕನ ತಲೆಯಲ್ಲಿ ಮೂಡಿದ ಕಲ್ಪನಾ ಲಹರಿಗೆ ಎಲ್ಲರೂ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಪರೀಕ್ಷೆಯಲ್ಲಿ ಬರೆದ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂತಾರ ಸಿನಿಮಾದಲ್ಲಿ ದೈವಾರಾಧನೆ, ಭೂತಕೋಲದ ಬಗ್ಗೆ ಸುಂದರವಾಗಿ ತೋರಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಸಂಸ್ಕೃತಿ, ಆಚಾರ ವಿಚಾರಗಳನ್ನು ಕಾಂತಾರ ಸಿನಿಮಾ ಮೂಲಕ ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಪ್ರಭಾವದ ಜೊತೆಗೆ ಸಿನಿಮಾದಲ್ಲಿ ಪ್ರಕೃತಿ ಮತ್ತು ಮನುಷ್ಯನ ನಡುವೆ ನಡೆಯುವ ಸಂಘರ್ಷ , ಇದರ ಜೊತೆಗೆ ಜಾತಿ ವ್ಯವಸ್ಥೆಯ ಬಗ್ಗೆ ಅನೇಕ ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ಕಥೆ ಹೆಣೆದಿರುವ ವೈಖರಿಯೇ ಅದ್ಭುತ. ಸಿನಿಮಾದ ಕಥೆ, ನಿರ್ದೇಶ, ಹಾಡುಗಳು, ಪಾತ್ರವರ್ಗ ಹೀಗೆ ಪ್ರತಿಯೊಂದು ವಿಚಾರದಲ್ಲೂ ಅಭಿಮಾನಿಗಳ ಹೃದಯ ಗೆದ್ದಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಕಾಂತಾರ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದ್ದು, ಇಂದಿಗೂ ಕೂಡ ಅದರ ಹವಾ ಕಡಿಮೆಯಾಗಿಲ್ಲ. ಏನೇ ಆಗಲಿ..ಸಿನಿಮಾ ಚಿಕ್ಕ ಮಕ್ಕಳ ಮನದಲ್ಲಿ ಕೂಡ ಅಚ್ಚಳಿಯದೆ ಉಳಿದಿದೆ ಎಂದರೆ ರಿಷಬ್ ಶೆಟ್ಟಿ ಹಾಗೂ ಚಿತ್ರ ತಂಡದ ಶ್ರಮ ನಿಜಕ್ಕೂ ಸಾರ್ಥಕ ಎನಿಸುವುದು ಸುಳ್ಳಲ್ಲ.