ಮಂಗಳೂರು : ಕುಕ್ಕರ್ ಬ್ಲಾಸ್ಟ್ ಪ್ರಕರಣ | ನಾಲ್ವರ ಗುರುತು ಪತ್ತೆ
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆ ನಡೆಸುತ್ತಿರುವ ಖಾಕಿ ಪಡೆಗೆ ಅಚ್ಚರಿಯ ಸಂಗತಿಯೊಂದು ಹೊರ ಬಿದ್ದಿದೆ. ಹೌದು!!..ಮಂಗಳೂರಿನಲ್ಲಿ ಕುಕ್ಕರ್ ಪ್ರಕರಣದ ಆರೋಪಿ ಶಾರೀಕ್ ಕೊಚ್ಚಿಯಲ್ಲಿ ವಿದೇಶಿಗ ಸಹಿತ ನಾಲ್ವರ ಸಂಪರ್ಕದಲ್ಲಿದ್ದನೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಅವರ ಗುರುತನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದ್ದು ಆದರೆ, ಈ ಕುರಿತಾದ ಯುವುದೇ ಮಾಹಿತಿ ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ.
ಮಂಗಳೂರಿನ ಜನತೆಯಲ್ಲಿ ನಡುಕ ಹುಟ್ಟಿಸಿದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲಾಗಿದೆ. ಹಾಗಿದ್ದರೂ ಕೂಡ ಕರ್ನಾಟಕ ವಿಶೇಷ ತನಿಖಾ ತಂಡ ಈ ಕುರಿತಾದ ತನಿಖೆಯನ್ನು ನಡೆಸುತ್ತಿದ್ದು ಕೇರಳದಲ್ಲಿ ನಡೆಸುತ್ತಿರುವ ತನಿಖೆಗೆ ಕೇರಳ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ.
ಈ ಸ್ಫೋಟದ ನಡೆಸುವ ಮುನ್ನ ಆರೋಪಿ ಕೊಚ್ಚಿಗೆ ಹೋಗಿದ್ದಾರೆ ಅಲ್ಲದೆ, ಅಲ್ಲಿ ವ್ಯವಹಾರ ನಡೆಸಿದವರ ಪೈಕಿ ನಾಲ್ವರ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಇವರಲ್ಲಿ ಒಬ್ಬ ವಿದೇಶಿಗ ನಾಗಿದ್ದು, ಇಬ್ಬರು ಕೇರಳೀಯರು ಮತ್ತು ತಮಿಳುನಾಡು ನಿವಾಸಿಯಾಗಿದ್ದಾರೆ ಎನ್ನಲಾಗಿದೆ. ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯ ಬಹಿರಂಗಪಡಿಸಿಲ್ಲ
ಈ ಕಾರ್ಯಾಚರಣೆಯ ಭಾಗವಾಗಿ ತನಿಖಾತಂಡ ಕಳೆದ 2 ವಾರಗಳಿಂದ ಕೊಚ್ಚಿಯಲ್ಲೇ ಠಿಕಾಣಿ ಹೂಡಿದ್ದು, ಪೂರಕ ಮಾಹಿತಿ ಕಲೆ ಹಾಕುವಲ್ಲಿ ಕಾರ್ಯ ಪ್ರವೃತ್ತವಾಗಿದೆ.ತನಿಖಾ ತಂಡಕ್ಕೆ ಕೇರಳ ಪೊಲೀಸ್ ವಿಭಾಗಗಳ ಒಬ್ಬರು ಡಿವೈಎಸ್‌ಪಿ ಮತ್ತು ಇಬ್ಬರು ಎಸ್‌ಐಗಳು ಬೆಂಬಲ ನೀಡಿದ್ದು ತನಿಖೆಗೆ ಬೇಕಾದ ಎಲ್ಲ ಸಹಕಾರ ನೀಡುತ್ತಿದ್ದಾರೆ. ಸದ್ಯ ಶಾರೀಕ್ ಸಂಪರ್ಕದಲ್ಲಿದ್ದವರ ಪೈಕಿ ಇಬ್ಬರು ಕೇರಳ ಮೂಲದವರು ಅನೇಕ ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ತನಿಖಾ ತಂಡದ ಪ್ರಾಥಮಿಕ ತನಿಖೆ ಸಂದರ್ಭ ಕೊಚ್ಚಿಯಲ್ಲಿ ಶಾರೀಕ್ ನಡೆಸಿದ ಡ್ರಗ್ಸ್, ಚಿನ್ನ ಸಾಗಾಟ ಹಾಗು ಕಾಳಧನ ವ್ಯವಹಾರಗಳು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಅಂದಾಜಿಸಿದ್ದಾರೆ. ತನಿಖಾ ತಂಡಕ್ಕೆ ಆರೋಪಿ ಶಾರಿಕ್ ಉಗ್ರಗಾಮಿ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿ ಹಣ ಸಂಪಾದನೆ ಮಾಡಿ ಸಂಗ್ರಹಿಸುವ ಉದ್ದೇಶ ಹಿಂದಿದ್ದ ಎಂಬ ಅನುಮಾನದ ಜೊತೆಗೆ ಕೇರಳದವರ ನೆರವು ಪಡೆದಿರುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಹೀಗಾಗಿ, ಅವರ ಸಂಬಂಧಿಕರನ್ನು ಗುರುತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಖಾಕಿ ಪಡೆ ಮುಂದಾಗಿದ್ದು, ಇಬ್ಬರ ಜತೆ ತಮಿಳುನಾಡು ನಿವಾಸಿ ಕೂಡ ವಿದೇಶದಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎನ್ನಲಾಗಿದೆ. ಆದರೆ ಶಾರೀಕ್‌ಗೆ ಪರಿಚಿತನಾದ ವಿದೇಶಿ ವ್ಯಕ್ತಿಯ ಕುರಿತಾದ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.