ವಸಿಷ್ಠ ಹರಿಪ್ರಿಯಾ ಉಡುಪಿಯ ಕೃಷ್ಣಮಠಕ್ಕೆ ಭೇಟಿ | ಚಂದನವನದ ಈ ಕ್ಯೂಟೆಸ್ಟ್‌ ಜೋಡಿಯ ಮದುವೆ ದಿನಾಂಕ ಫಿಕ್ಸ್‌

Share the Article

ಸ್ಯಾಂಡಲ್ವುಡ್ನಲ್ಲಿ ಮದುವೆ ಸದ್ದು ಜೋರಾಗಿದ್ದು,  ನಟಿ ಅದಿತಿ ಪ್ರಭುದೇವ ಅವರ ಬಳಿಕ ಇದೀಗ ಮತ್ತೊಂದು ಜೋಡಿ ಸಪ್ತಪದಿ ತುಳಿಯುವ ಬಗ್ಗೆ ಸುದ್ದಿ ಜೋರಾಗಿ ಹರಿದಾಡುತ್ತಿದೆ.ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ಸಖತ್ ಬೇಡಿಕೆಯಲ್ಲಿರುವ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಅವರು ಹಸೆಮಣೆ ಏರಲಿರುವ ಕುರಿತು ಊಹಾಪೋಹ  ಹರಿದಾಡಿದ ಬೆನ್ನಲ್ಲೆ ಹರಿಪ್ರಿಯಾ  ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋ ವೈರಲ್  ಆಗಿತ್ತು. ಈ ವೇಳೆ ಚಂದನವನದ ಚೆಲುವೆಯ ಕೈ ಹಿಡಿಯುವ ಸುಕುಮಾರ ವಸಿಷ್ಠ ಸಿಂಹ ಎನ್ನಲಾಗಿತ್ತು.

ಸೈಲೆಂಟ್ ಆಗಿ ನಟಿ ಹರಿಪ್ರಿಯಾ ನಿಶ್ಚಿತಾರ್ಥ ಕೂಡ ನಡೆದಿತ್ತು. ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishta Simha)ಹರಿಪ್ರಿಯಾ ಅವರ  ನಿವಾಸದಲ್ಲಿ ಸಿಂಪಲ್​ ಆಗಿ ನಿಶ್ಚಿತಾರ್ಥ ಕಾರ್ಯ ನಡೆದಿತ್ತು.

ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ಸ್ಯಾಂಡಲ್‍ವುಡ್ ಕ್ಯೂಟ್ ಜೋಡಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಬಳಿಕ, ಕೃಷ್ಣ ಮಠದ ಕನಕ ನವಗ್ರಹ ಕಿಂಡಿ ಮೂಲಕ ದೇವರ ದರ್ಶನ ಪಡೆದು  ವಿಶೇಷ ಪೂಜೆ ಸಲ್ಲಿಸಿದ್ದಾರೆ.



ಮುಂದಿನ ವರ್ಷ ಮಾರ್ಚ್‍ನಲ್ಲಿ ಈ ಜೋಡಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಆ ಹಿನ್ನೆಲೆಯಲ್ಲಿ ಉಡುಪಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗುತ್ತಿದೆ. ಪೂಜೆಯ ಬಳಿಕ  ಕೃಷ್ಣ ಮಠದ ರಥಬೀದಿಯಲ್ಲಿ ಇರುವ ಕಾಣಿಯೂರು ಮಠಕ್ಕೆ ಭೇಟಿ ನೀಡಿದ ತಾರಾ ಜೋಡಿ  ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ಶ್ರೀಗಳಿಂದ ಅನುಗ್ರಹ ಪಡೆದು ಮಂತ್ರಾಕ್ಷತೆಯನ್ನು ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಕಾಣಿಯೂರು ಶ್ರೀಗಳು ನವ ಜೋಡಿಗೆ ಮಠದ ವತಿಯಿಂದ ಗೌರವ ಸಲ್ಲಿಸಿದ್ದಾರೆ.

ತಮ್ಮ ನಿಶ್ಚಿತಾರ್ಥ ನಡೆದ ಬಳಿಕ ತೆಲುಗಿನ ಎವರ್ ಚಿತ್ರದ ರಿಮೇಕ್ ಚಿತ್ರಕ್ಕೆ ವಶಿಷ್ಠ ಸಿಂಹ-ಹರಿಪ್ರಿಯಾ ಒಟ್ಟಿಗೆ ಡಬ್ಬಿಂಗ್ ಮಾಡಿದ್ದು, ಬಹುತೇಕ ಚಿತ್ರೀಕರಣ ಆಗಿರುವ ಈ ಚಿತ್ರಕ್ಕೆ ಕನ್ನಡದಲ್ಲಿ ಇನ್ನು ಹೆಸರಿಟ್ಟಿಲ್ಲ ಎನ್ನಲಾಗಿದೆ.


ಇನ್ನೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಟನೆಯ ಸಿನಿಮಾ ಮುಂದಿನ 2023ರಲ್ಲಿ ತೆರೆಗೆ ಬರಲಿದ್ದು, ಈ  ಸಿನಿಮಾ ರಿಲೀಸ್ ಆಗುವ ಜೊತೆಗೆ  ಮದುವೆಯ ಶುಭ ಸಮಾಚಾರವನ್ನು  ಕೂಡ  ಕ್ಯೂಟ್ ಜೋಡಿ ಜೋಡಿ ಸದ್ಯದಲ್ಲೇ ಅಧಿಕೃತವಾಗಿ ಹೇಳಬಹುದು ಎಂದು ಹೇಳಲಾಗುತ್ತಿದೆ.

Leave A Reply