Canara Bank : ಎಟಿಎಂ ವಿತ್ಡ್ರಾ ಮಿತಿ ಏರಿಸಿದ ಕೆನರಾ ಬ್ಯಾಂಕ್!!
ಕೆನರಾ ಬ್ಯಾಂಕ್ ದೇಶದ ಅತೀ ದೊಡ್ಡ ಬ್ಯಾಂಕ್ಗಳಲ್ಲಿ ಒಂದಾಗಿದ್ದು, ದೈನಂದಿನ ಡೆಬಿಟ್ ಕಾರ್ಡ್ ಮಿತಿಯನ್ನು ಹೆಚ್ಚಳ ಮಾಡಿರುವ ಜೊತೆಗೆ ಪಾಯಿಂಟ್ ಲೆಸ್ ಸೇಲ್ (ಪಿಒಎಸ್), ಇ ಕಾಮರ್ಸ್ ವಹಿವಾಟು ಮಿತಿಯನ್ನು ಸಹ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿದೆ.
ಈ ಡಿಜಿಟಲ್ ಯುಗದಲ್ಲಿ ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿಯ ಬಳಕೆಯ ಮೂಲಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಸಲು ಸಾಧ್ಯವಾಗಿದೆ. ಇದೀಗ, ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದ್ದು, ಯಾವುದೇ ಹಣಕಾಸು, ಬ್ಯಾಂಕಿನ ವ್ಯವಹಾರಗಳನ್ನು ಸುಲಭದಲ್ಲಿ ಮಾಡಬಹುದಾಗಿದೆ. ಆದರೆ ಇದರಲ್ಲಿ ಒಂದು ದಿನದಲ್ಲಿ ಎಷ್ಟು ಬಾರಿ ಮತ್ತು ಎಷ್ಟು ಹಣವನ್ನು ಮತ್ತೊಬ್ಬರಿಗೆ ವರ್ಗಾವಣೆ ಮಾಡಬಹುದೆಂಬ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು.
“ಬ್ಯಾಂಕರ್ಸ್ ಬ್ಯಾಂಕ್ 2022 ಪ್ರಶಸ್ತಿ” ಯು ಕೆನರಾ ಬ್ಯಾಂಕ್ ಗೆ ಒಲಿದು ಬಂದಿದೆ. ಜಾಗತಿಕ ಬ್ಯಾಂಕಿಂಗ್ ಸಮ್ಮಿಟ್ನಲ್ಲಿ ಕೆನರಾ ಬ್ಯಾಂಕ್ಗೆ ಬ್ಯಾಂಕರ್ಸ್ ಬ್ಯಾಂಕ್ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಕೆನರಾ ಬ್ಯಾಂಕ್ ಈಗಾಗಲೇ ಭಾರತದಲ್ಲಿ ಉತ್ತಮ ಬ್ಯಾಂಕ್ ಎಂದನಿಸಿಕೊಂಡಿದ್ದು, ಲಂಡನ್ನಲ್ಲಿ ನವೆಂಬರ್ 29ರಿಂದ ಡಿಸೆಂಬರ್ 1, 2022ರವರೆಗೆ ನಡೆದ ಜಾಗತಿಕ ಬ್ಯಾಂಕಿಂಗ್ ಸಮ್ಮಿಟ್ನಲ್ಲಿ ಕೆನರಾ ಬ್ಯಾಂಕ್ನ ಎಂಡಿ, ಸಿಇಒ ಎಲ್ ವಿ ಪ್ರಭಾಕರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಸದ್ಯ ಕೆನರಾ ಬ್ಯಾಂಕ್ನಲ್ಲಿ ದೈನಂದಿನ ಎಟಿಎಂ ವಹಿವಾಟು ಮಿತಿಯನ್ನು 40 ಸಾವಿರ ರೂಪಾಯಿಯಿಂದ 75 ಸಾವಿರ ರೂಪಾಯಿಗೆ ಏರಿಕೆ ಮಾಡಿದೆ. ಹಾಗೆಯೇ ಪಿಒಎಸ್ ಮಿತಿಯನ್ನು ಕೂಡಾ ಏರಿಸಲಾಗಿದ್ದು, ಪಿಒಎಸ್ ಮಿತಿಯನ್ನು 1 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಈ ನಡುವೆ ಎನ್ಎಫ್ಸಿ ವಹಿವಾಟನ್ನು ಏರಿಕೆ ಮಾಡಲಾಗಿಲ್ಲ. ಈ ಹಿಂದೆ ಇದ್ದಂತೆಯೇ 25 ಸಾವಿರ ರೂಪಾಯಿಯಾಗಿದ್ದು, ಒಂದು ಬಾರಿಗೆ 5 ಸಾವಿರ ರೂಪಾಯಿಯಂತೆ ದೈನಂದಿನ ಐದು ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಂದರೆ 25 ಸಾವಿರ ರೂಪಾಯಿ ವಹಿವಾಟು ನಡೆಸಬಹುದಾಗಿದೆ.
ಹಾಗಾದರೆ , ಪಿಎನ್ಬಿ ಡೆಬಿಟ್ ಕಾರ್ಡ್ ವಹಿವಾಟು ಮಿತಿ ಎಷ್ಟಿದೆ ?? ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಮಿತಿ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ:
ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸಲು ಇಲ್ಲವೇ ಎಚ್ಡಿಎಫ್ಸಿ ಬ್ಯಾಂಕ್ ಬಾಡಿಗೆ ಪಾವತಿ ಮಾಡುವುದಕ್ಕೆ ವಿಧಿಸುವ ವೆಚ್ಚವನ್ನು ಪರಿಷ್ಕರಣೆ ಮಾಡಲಾಗಿದೆ. ಎಚ್ಡಿಎಫ್ಸಿ ಬ್ಯಾಂಕ್ ವೆಬ್ಸೈಟ್ ಅನ್ವಯ ಥರ್ಡ್ ಪಾರ್ಟಿ ಮೆರ್ಚೆಂಟ್ ಪ್ರಕಾರ ಬಾಡಿಗೆ ಪಾವತಿ ಮಾಡುವುದಕ್ಕೆ ಶೇಕಡ 1ರಷ್ಟು ಬಾಡಿಗೆಯ ಮೊತ್ತವನ್ನು ಶುಲ್ಕವಾಗಿ ಪಾವತಿ ಮಾಡಬೇಕಾಗುತ್ತದೆ.
ಈ ನಡುವೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಡೆಬಿಟ್ ಕಾರ್ಡ್ ಮಿತಿಯನ್ನು ಏರಿಸುವ ಕುರಿತಾಗಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದ್ದು, ಪಿಎನ್ಬಿ ವೆಬ್ಸೈಟ್ ಪ್ಲಾಟಿನಂ ಮಾಸ್ಟರ್ಕಾರ್ಡ್, ರುಪೇ, ವೀಸಾ ಗೋಲ್ಡ್ ಡೆಬಿಟ್ ಕಾರ್ಡ್ನ ಮಿತಿಯನ್ನು ಏರಿಕೆ ಮಾಡುವ ಹಾಗೆತೇ ರುಪೇ ಸೆಲೆಕ್ಟ್ ಹಾಗೂ ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್ನ ಮಿತಿಯನ್ನು ಕೂಡಾ ಅಧಿಕ ಮಾಡುವ ಸಾಧ್ಯತೆ ದಟ್ಟವಾಗಿದೆ.