ಚೆಂದದ ತ್ವಚೆಗಾಗಿ ಬಳಸಿ ಕೇಸರಿ!
ತ್ವಚೆ ಉತ್ತಮವಾಗಿ ಇರಬೇಕು ಅಂತ ಏನೆಲ್ಲ ಸಾಹಸ ಮಾಡ್ತಾ ಇದ್ದೀರಾ? ಯಾವ ಕ್ರೀಮ್ ಹಚ್ಚಿದ್ರು ಕೂಡ ಮುಖ ಗ್ಲೋ ಕಾಣ್ತಾ ಇಲ್ವಾ? ಯಾಕೆ ಟೆನ್ಶನ್ ಆಗ್ತೀರಾ ನಿಮಗಾಗಿ ಇಲ್ಲಿದೆ ಈಸಿ ಟಿಪ್ಸ್!
ಹೌದು. ಹೊಳೆಯುವ ತ್ವಚೆಗಾಗಿ ಕೇಸರಿ ಉತ್ತಮ ಸಹಕಾರವನ್ನು ನೀಡುತ್ತೆ. ವಿಟಮಿನ್ ಸಿ ಕೇಸರಿಯಲ್ಲಿ ಹೇರಳವಾಗಿ ಇರುವುದರಿಂದ ನಮ್ಮ ತ್ವಚೆಯ ರಹಸ್ಯವನ್ನು ಕಾಪಾಡುತ್ತದೆ.
ಆಲೀವ್ ಎಣ್ಣೆ:- ಈ ಎಣ್ಣೆಗೆ ಕೇಸರಿ ಎಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ತದನಂತರ ನಿಮ್ಮ ಚರ್ಮಕ್ಕೆ ಹಚ್ಚಿ. ಪ್ರತಿ ನಿತ್ಯ ಈ ರೂಟೀನ್ ಫಾಲೋ ಮಾಡಿ ನೋಡಿ.
ರಾತ್ರಿ ಬಾದಾಮಿ ಮತ್ತು ಕೇಸರಿಯನ್ನು ನೀರಿನಲ್ಲಿ ನೆನೆಸಿ ಮತ್ತು ಬೆಳಗ್ಗೆ ಎದ್ದು ಎರಡನ್ನೂ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ , ಮುಖದಲ್ಲಿ ಕಾಡುವ ಸೋಂಕು ಸಮಸ್ಯೆ ನಿವಾರಣೆ ಆಗುತ್ತದೆ.
ಕೇಸರಿಯನ್ನು ಪೌಡರ್ ಮಾಡಿಕೊಂಡು ಇದಕ್ಕೆ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ. ತದನಂತರ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ವಾರದಲ್ಲಿ ಒಂದು ಬಾರಿ ಆದ್ರೂ ಮಾಡಿದರೆ ಬಹಳ ಉತ್ತಮ. ಕಪ್ಪು ಕಲೆ, ಮೊಡವೆಗಳು ಮಂಗಮಾಯ ಆಗುತ್ತದೆ.
ಪ್ಯೂರ್ ಕೇಸರಿಯನ್ನು ಹಾಲಿಗೆ ಹಾಕಿ ಕುಡಿಯಿರಿ ಅಥವಾ ಹಾಲಿನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ಸೂರ್ಯಕಾಂತಿ ಬೀಜ, ಕೇಸರಿ ಎಲೆಗಳು ಮತ್ತು ಹಾಲು ಇದರಲ್ಲಿ ಸೂರ್ಯಕಾಂತಿ ಬೀಜಗಳು ಮತ್ತು ಕೇಸರಿಗಳು ರಾತ್ರಿಯಿಡೀ ಹಾಲಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ಮಿಶ್ರಣವನ್ನು ಪುಡಿಮಾಡಿ ಮುಖಕ್ಕೆ ಹಚ್ಚಿ.
ಇಷ್ಟು ಟಿಪ್ಸ್ ಫಾಲೋ ಮಾಡೋದ್ರಿಂದ ನಿಮ್ಮ ತ್ವಚೆ ಯಾವ ರೀತಿಯಾಗಿ ಹೊಳೆಯುತ್ತದೆ ಎಂದು ನೀವೇ ನೋಡಿ.