Home Breaking Entertainment News Kannada Rashmika Mandanna: ಪ್ಯಾಂಟ್​ಲೆಸ್ ಲುಕ್‌ನಲ್ಲಿ ನ್ಯಾಷನಲ್‌ ಕ್ರಷ್‌ | ರಶ್ಮಿಕಾ ಮಂದಣ್ಣ ಹೊಸ ಲುಕ್‌

Rashmika Mandanna: ಪ್ಯಾಂಟ್​ಲೆಸ್ ಲುಕ್‌ನಲ್ಲಿ ನ್ಯಾಷನಲ್‌ ಕ್ರಷ್‌ | ರಶ್ಮಿಕಾ ಮಂದಣ್ಣ ಹೊಸ ಲುಕ್‌

Hindu neighbor gifts plot of land

Hindu neighbour gifts land to Muslim journalist

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ಇದೀಗ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿ ಬಿಟ್ಟಿದ್ದಾರೆ.

ಹೌದು!!!..ಕನ್ನಡದ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಲುವೆ ರಶ್ಮಿಕಾ ಮಂದಣ್ಣ ತೆಲುಗು , ತಮಿಳು, ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ತನ್ನ ಛಾಪು ಮೂಡಿಸಲು ಮುಂದಾಗಿದ್ದಾರೆ. ಈ ನಡುವೆ ಪ್ಯಾಂಟ್​ಲೆಸ್ ಆಗಿ ಕಾಣಿಸಿಕೊಂಡಿದ್ದು , ಪಡ್ಡೆ ಹುಡುಗರ ಹೃದಯ ಬಡಿತ ಏರು ಪೇರಾಗಿದೆ.


ರಶ್ಮಿಕಾ ಸದ್ಯ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ತಮಿಳಿನಲ್ಲಿ ಎರಡನೇ ಸಿನಿಮಾ ವಾರಿಸುನಲ್ಲಿ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ಎಂಟ್ರಿ ನಂತರ ರಶ್ಮಿಕಾ ಸ್ವಲ್ಪ ಹೆಚ್ಚೇ ಮಾಡರ್ನ್ ಆಗಿದ್ದು, ಈ ನಡುವೆ ನಟಿ ಮಾಡರ್ನ್ ಡ್ರೆಸ್​​ ಹಾಗೂ ಎಥ್ನಿಕ್ ವೇರ್​ನಲ್ಲಿ ಹೆಚ್ಚು ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ.

ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಅವರು ಗುಡ್ ಬೈ ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಈ ವೇಳೆ ತನ್ನ ಬೋಲ್ಡ್ ಲುಕ್ ಜೊತೆಗೆ ನಿಯಾನ್ ಬಣ್ಣದ ಬ್ಲೇಜರ್ ಧರಿಸಿ ಅಭಿಮಾನಿಗಳ ಹೃದಯ ಕದಿಯುವ ಪ್ರಯತ್ನ ನಡೆಸಿದ್ದಾರೆ . ಸಖತ್ತಾಗಿರುವ ನಿಯಾನ್ ಕಲರ್ ಡ್ರೆಸ್ ಫೋಟೋ ಗಳನ್ನು ಶೇರ್ ಮಾಡಿದ್ದು, ಕಿರಿಕ್ ಚೆಲುವೆಯ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.

ರಶ್ಮಿಕಾ ಮೊದಲಿನಿಂದಲೂ ಮಾಡರ್ನ್ ಲುಕ್​ ಹಾಟ್ ಫೋಟೋ ಶೂಟ್ ಮಾಡಿಸಿ ಕೊಳ್ಳುವುದೇನು ಹೊಸ ವಿಚಾರವೇನಲ್ಲ!!! ಆದರೆ, ಈ ಬಾರಿ ಮಾತ್ರ ಪ್ಯಾಂಟ್​​ಲೆಸ್ ಆಗಿ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ನಿಯಾನ್ ಕಲರ್ ಬ್ಲೇಜರ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದ ನಟಿ ಸಿಂಪಲ್ ಮೇಕಪ್ ಜೊತೆಗೆ ಫ್ರೀ ಹೇರ್ ಬಿಟ್ಟು , ಡ್ರೆಸ್ ಗೆ ಮ್ಯಾಚಿಂಗ್ ಹೀಲ್ಸ್ ಧರಿಸಿ ಗಮನ ಸೆಳೆದಿದ್ದಾರೆ.

ಈ ನಡುವೆ ನಟಿಯ ಸ್ಟೈಲಿಷ್​ ಲುಕ್​ ಕಂಡು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಯಾಕೆ ಪ್ಯಾಂಟ್ ಧರಿಸಿಲ್ಲ ಎಂದು ನಟಿಯನ್ನು ಟ್ರೋಲ್ ಮಾಡಿದ್ದಾರೆ.


ಈ ಹಿಂದೆಯಷ್ಟೇ ತನ್ನನ್ನು ರೇಗಿಸುವ ಮಂದಿಗೆ ಪೋಸ್ಟ್ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಷನಲ್ ಕ್ರಷ್. ಇನ್ನೂ ನೆಗೆಟಿವ್ ಕಾಮೆಂಟ್ ಮಾಡುವವರಿಗೆ..ಏನೇ ಆಗಲಿ ಅದು ನನಿಷ್ಟ..ನನ್ನ ಜೀವನ .. ಕೇಳಲು ನೀವ್ಯಾರು??…ಎಂದು ಕಿರಿಕ್ ಚೆಲುವೆ ಪ್ರಶ್ನೆ ಮಾಡಿ ಖಡಕ್ ಉತ್ತರ ಕೊಟ್ಟರು ಅಚ್ಚರಿಯಿಲ್ಲ.