Cooler Offer : ಗ್ರಾಹಕರೇ ಅಮೆಜಾನ್ ನೀಡಿದೆ ಬಂಪರ್ ಕೊಡುಗೆ | 12 ಸಾವಿರದ ಕೂಲರ್ ಈಗ ಕೇವಲ 3,500 ಕ್ಕೆ ಲಭ್ಯ!

Share the Article

ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾದ ಅಮೆಜಾನ್​ ಇದೀಗ ಏರ್​ಕೂಲರ್ ಮೇಲೆ ವಿಶೇಷ ಆಫರ್​ ಅನ್ನು ನೀಡುತ್ತಿದ್ದು, ಹಾಗಾಗಿ, ಅಮೆಜಾನ್​ನಲ್ಲಿ ಕೈಗೆ ಎಟಕುವ ಕಡಿಮೆ ದರದಲ್ಲಿ ಸೂಪರ್ ಕೂಲರ್ ಅನ್ನು ಭರ್ಜರಿ ಆಫರ್ ಜೊತೆಗೆ ಖರೀದಿ ಮಾಡಬಹುದಾಗಿದೆ.

ಹೌದು!!! ಅಮೆಜಾನ್​​ ಗ್ರಾಹಕರಿಗೆ ಭರ್ಜರಿ ಆಫರ್​​! ಬರೋಬ್ಬರಿ 12 ಸಾವಿರದ ಕೂಲರ್​ ಇದೀಗ, ಕೇವಲ 3,500 ರೂಪಾಯಿಯಲ್ಲಿ ಲಭ್ಯವಾಗಲಿದೆ.

ಕೆಲವರಿಗೆ ಚುಮು ಚುಮು ಚಳಿ ಎಂದರೆ ಹಿತವಾದರೆ, ಮತ್ತೆ ಕೆಲವರು ಒಮ್ಮೆ ಬೇಸಿಗೆ ಕಾಲ ಬಂದ್ರೆ ಸಾಕಪ್ಪಾ ಎಂದು ಕೊಳ್ಳುತ್ತಾರೆ. ಅದೇ ಬೇಸಿಗೆ ಕಾಲ ಬಂದಾಗ ಅಯ್ಯೋ ಎಷ್ಟು ಸೆಕೆ..ಎಂದು ಗೊಣಗುವುದು ಸಾಮಾನ್ಯ. ಇನ್ನೇನು ಕೆಲವೇ ತಿಂಗಳಿನಲ್ಲಿ ಬೇಸಿಗೆಕಾಲ ಶುರುವಾಗಲಿದ್ದು. ಈ ಸಂದರ್ಭಗಳಲ್ಲಿ ಫ್ಯಾನ್​ , ಏರ್​ಕೂಲರ್​, ಎಸಿ ಯಂತಹ ಎಲೆಕ್ಟ್ರಾನಿಕ್ಸ್​ ಸಾಧನಗಳನ್ನು ಸೆಕೆಯಿಂದ ಮುಕ್ತಿ ಪಡೆಯಲು ಬಳಸುವುದು ವಾಡಿಕೆ. ಇದೀಗ ಅಮೆಜಾನ್​ನಲ್ಲಿ ಏರ್​ಕೂಲರ್​ ಅನ್ನು ವಿಶೇಷ ಆಫರ್ ಬೆಲೆಗೆ ಅದು ಕೂಡ ಭರ್ಜರಿ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಈ ಹಿಂದೆ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಫ್ಯಾನ್ಗಳದ್ದೆ ರಾಜ್ಯಭಾರ.ಆದ್ರೆ ಈಗ ಕಾಲ ಬದಲಾಗಿದೆ. ಜನರ ದೈಹಿಕ ಚಟುವಟಿಕೆಗಳಿಗೆ ವಿರಾಮ ನೀಡಲು ಇಂದು ಅನೇಕ ಅನ್ವೇಷಣೆಗಳ ಪ್ರತಿಯಾಗಿ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳಾಗಿವೆ. ಇತ್ತೀಚೆಗೆ ಫ್ಯಾನ್ ಗಳ ಜೊತೆಗೆ ಎಸಿ ಅಥವಾ ಏರ್​ಕೂಲರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಎಸಿ ಮತ್ತು ಏರ್​ಕೂಲರ್​ಗಳ ಬೆಲೆ ತುಸು ಹೆಚ್ಚು ಎಂಬುದು ತಿಳಿದಿರುವ ವಿಚಾರವೇ!!! ಆದ್ರೆ ಇದೀಗ ಅಮೆಜಾನ್​ನಲ್ಲಿ ಏರ್ ಕೂಲರ್ ಮೇಲೆ ವಿಶೇಷ ಆಫರ್ ನೀಡಲಾಗುತ್ತಿದೆ.

ಫಾಕ್ಸ್‌ಸ್ಕೈ ಗ್ರ್ಯಾಂಡ್ ಡೆಸರ್ಟ್ ಏರ್ ಕೂಲರ್ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಇದರ ಮೂಲ ಬೆಲೆ 12,750 ರೂಪಾಯಿಯಾಗಿದ್ದು, ಸದ್ಯ ಬರೋಬ್ಬರಿ 70% ರಷ್ಟು ರಿಯಾಯಿತಿಯೊಂದಿಗೆ ಅಮೆಜಾನ್​ನಲ್ಲಿ ಈ ಕೂಲರ್‌ ಅನ್ನು ಕೇವಲ 3772 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.ಇದಷ್ಟೇ ಅಲ್ಲದೇ, ಈ ಕೂಲರ್‌ನಲ್ಲಿ ಇತರ ಕೊಡುಗೆಗಳು ಲಭ್ಯವಿದ್ದು, ಈ ಕೂಲರ್ ಅನ್ನು ಇಎಮ್​ಐ ಮೂಲಕ ಖರೀದಿಸುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ.

ಇದರ ಜೊತೆಗೆ, ಬ್ಯಾಂಕ್​ಗಳ ಆಫರ್ ಕೂಡ ಇದ್ದು, ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 300 ರೂಪಾಯಿ ರಿಯಾಯಿತಿ ಕೂಡ ದೊರೆಯಲಿದೆ.
ಅಷ್ಟೆ ಅಲ್ಲದೆ, ಈ ಕೂಲರ್‌ 16.5 ಕೆ.ಜಿ ತೂಕ ಹೊಂದಿದ್ದು, ಈ ಕೂಲರ್ 100 ಲೀಟರ್ ಸಾಮರ್ಥ್ಯ, 3 ಬದಿಯ ಜೇನುಗೂಡು ಪ್ಯಾಡ್‌ಗಳು, ಸ್ಟ್ರಾಂಗ್ ಮೋಟಾರ್, ಡಸ್ಟ್ ಫಿಲ್ಟರ್, ನೀರಿನ ಮಟ್ಟದ ಸೂಚಕ, ಬಹು ಹಂತದ ಗಾಳಿ ಶುದ್ಧೀಕರಣ, ಕಡಿಮೆ ವಿದ್ಯುತ್ ಬಳಕೆ ಮುಂತಾದ ಫೀಚರ್ಸ್​ ಅನ್ನು ಹೊಂದಿದೆ.

ನೀವು ಈ ಕೂಲರ್ ಅನ್ನು EMI ನಲ್ಲಿಯೂ ಖರೀದಿಸುವುದಾದರೆ, ಮಾಸಿಕ ಇಎಮ್​ಐ ಕೇವಲ 180 ರೂಪಾಯಿಯಿಂದ ಆರಂಭವಾಗುತ್ತದೆ. ಇದು 24 ತಿಂಗಳ ಅವಧಿಯನ್ನು ಹೊಂದಿದ್ದು, ಅದೇ 18 ತಿಂಗಳು ಆದರೆ ತಿಂಗಳಿಗೆ 235 ರೂಪಾಯಿ ಪಾವತಿಸಬೇಕಾಗುತ್ತದೆ.

12 ತಿಂಗಳುಗಳಲ್ಲಿ ಇಎಂಐ ಮೂಲಕ ಖರೀದಿ ಮಾಡಿದರೆ, 340 ರೂಪಾಯಿ ಇಎಮ್​ಐ ಹಣವನ್ನು ಪಾವತಿಸಬೇಕಾಗುತ್ತದೆ. ಇದರ ಜೊತೆಗೆ 9 ತಿಂಗಳಿಗೆ 446 ರೂಪಾಯಿ ಇಎಮ್​ಐ ಪಾವತಿಸಬೇಕಾಗುತ್ತದೆ.

ಏರ್​ಕೂಲರ್​ ಖರೀದಿಸಲು ಗ್ರಾಹಕರಿಗೆ ಬೇಕಾದ ಇಎಮ್​ಐ ಸೌಲಭ್ಯದ ಜೊತೆಗೆ ಬ್ಯಾಂಕ್​​ ಕ್ರೆಡಿಟ್​​ ಕಾರ್ಡ್​​ ಮೂಲಕ ಕೂಡ ಖರೀದಿಸುವ ಅವಕಾಶ ಕಲ್ಪಿಸಲಾಗಿದ್ದು. ಈ ವಿಧಾನಗಳಲ್ಲಿ ಖರೀದಿಸುವುದಾದರೆ ಗ್ರಾಹಕರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ.

Leave A Reply