Home Interesting ವಿಧವೆಯ ಬಾಳಲ್ಲಿ ಬೆಳಕಾಗಿ ಬಂದ, ಮದುವೆ ಆಸೆ ತೋರಿಸಿ ಚಿನ್ನಾಭರಣದೊಂದಿಗೆ ಎಸ್ಕೇಪ್| ನಂಬಿದಾಕೆ ಮಾಡಿದ್ದು ಮಾತ್ರ...

ವಿಧವೆಯ ಬಾಳಲ್ಲಿ ಬೆಳಕಾಗಿ ಬಂದ, ಮದುವೆ ಆಸೆ ತೋರಿಸಿ ಚಿನ್ನಾಭರಣದೊಂದಿಗೆ ಎಸ್ಕೇಪ್| ನಂಬಿದಾಕೆ ಮಾಡಿದ್ದು ಮಾತ್ರ ಭೇಷ್ ಎನ್ನೋ ಕೆಲಸ!

Hindu neighbor gifts plot of land

Hindu neighbour gifts land to Muslim journalist

ಉಂಡು ಹೋದ… ಕೊಂಡು ಹೋದ ಮಾತಿಗೆ ತಕ್ಕಂತೆ ಮಹಾಶಯನೊಬ್ಬ ಯುವತಿಯನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಲೀಲಾಜಾಲವಾಗಿ ಬೀಳಿಸಿ ಯಾಮಾರಿಸಿ ಒಡವೆಗಳ ಜೊತೆ ಜೂಟ್ ಹೇಳಿರುವ ಘಟನೆ ಬೆಳಕಿಗೆ ಬಂದಿದೆ.

ಜನರ ಮರುಳು ಮಾತಿಗೆ ತಲೆದೂಗಿ ಹೇಳಿದ್ದನ್ನೆಲ್ಲ ನಂಬಿ ಮೋಸ (Cheating) ಹೋಗಿರುವ ಘಟನೆ ನಡೆದಿದ್ದು, ಜನರಿಗೆ ಮಂಕು ಬೂದಿ ಎರಚಿ ಚಳ್ಳೆ ಹಣ್ಣು ತಿನ್ನಿಸಿ ಯಾಮಾರಿಸಿ ಝಣ ಝಣ ಕಾಂಚಾಣ ಇಲ್ಲವೆ ಬೆಲೆಬಾಳುವ ಸೊತ್ತುಗಳ ಜೊತೆಗೆ ಪರಾರಿಯಾಗುವ ವಿಚಾರ ಹೊಸತಲ್ಲ!!. ಜನ ಮಂಗ ಆಗುತ್ತಾರೆ ಎಂದು ತಿಳಿದು ಬಿಟ್ಟರೆ ಸಾಕು!! ಕುರಿ ಹಳ್ಳಕ್ಕೆ ಬಿತ್ತು ಎಂದು ಸಿಕ್ಕಿದ್ದೇ ಚಾನ್ಸ್ ಎಂದು ಬಿಟ್ಟಿ ಬಿಲ್ಡಪ್ ಕೊಟ್ಟು ತಮ್ಮ ನಾಜೂಕಿನ ಮಾತಿನಲ್ಲೇ ಎದುರಿನವರ ಮನ ಸೆಳೆದು ಹಣ ಲೂಟಿ ಮಾಡುವ ದಂಧೆ ನಡೆಯುತ್ತಿದ್ದು, ಅದೇ ರೀತಿ ಬೆಂಗಳೂರಿನಲ್ಲಿ ( Bengaluru) ಮಹಿಳೆಯೋರ್ವಳು, ಮದುವೆ(marriage) ಆಗುವ ಭರವಸೆ ಕೊಟ್ಟ ಮಹಾಶಯನ ಮಾತು ನಂಬಿ 15 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಹೌದು.. ಮದುವೆ ಆಗುವುದಾಗಿ ವಿಧವೆಯೊಬ್ಬರ ಮನೆಗೆ ಬಂದ ಮಹಾಶಯ 15 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದು, ಈ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದ್ದು, ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

ವಾಸ್ತವವಾಗಿ, ಮದುವೆಯಾಗುತ್ತೇನೆ ಎಂದು ಹೇಳಿದ ಭೂಪ ಪ್ರದೀಪನಿಗೆ ಈಗಾಗಲೆ ಮದುವೆಯಾಗಿದ್ದು, ಆದರೆ, ನನಗೆ ಮದುವೆ ಆಗಿಲ್ಲ ಎಂದು ಮಹಿಳೆಯನ್ನು ಯಾಮಾರಿಸಿ ಆಕೆಯನ್ನೇ ಮದುವೆಯಾಗುವ ಆಶ್ವಾಸನೆ ಕೂಡ ನೀಡಿದ್ದಾನೆ. ಆತನ ನಂಬಿದ ಮಹಿಳೆ ಮನೆಯೊಳಗೆ ಸೇರಿಸಿಕೊಂಡಿದ್ದು, ಈ ಸಂದರ್ಭ ಬಳಸಿಕೊಂಡು, ಪ್ರದೀಪ್ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾನೆ.


ಮದುವೆ ಹೆಸರಿನಲ್ಲಿ ವಿಧವೆಯ ಬಾಳಲ್ಲಿ ಆಶಾಭಾವನೆ ಹುಟ್ಟಿಸಿ, ಮನೆಯ ಒಡವೆ ಕೊಳ್ಳೆ ಹೊಡೆದು ಪರಾರಿಯುವಾಗಿರುವ ವ್ಯಕ್ತಿ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ. ನೊಂದ ಮಹಿಳೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ, ಈ ದೂರಿನ ಮೇರೆಗೆ ಸದ್ಯ ಆರೋಪಿ ಪ್ರದೀಪ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.