Home Health 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹೃದಯಾಘಾತ – ಅಧ್ಯಯನ

5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹೃದಯಾಘಾತ – ಅಧ್ಯಯನ

Hindu neighbor gifts plot of land

Hindu neighbour gifts land to Muslim journalist

ಮಹಿಳೆಯರಿಗಿಂತ ಪುರುಷರು ದೇಹ ಬಲಾಡ್ಯದಲ್ಲಿ ವಿಭಿನ್ನರು. ಅದಲ್ಲದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯ ತಾನು ಮೇಲು ತಾನು ಮೇಲು ಎಂಬ ಗೀಲಿನಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಅದಲ್ಲದೆ ಆಧುನಿಕ ಜೀವನಕ್ಜೆ ಒಗ್ಗಿಕೊಂಡ ಜನರು ಮೊಬೈಲ್, ಕಂಪ್ಯೂಟರ್ ದಾಸರಾಗಿರುತ್ತಾರೆ. ಸರಿಯಾಗಿ ಊಟ, ನಿದ್ರೆ ಮರೆತು ತಮ್ಮ ಗೊಂಗಿನಲ್ಲಿ ಇರುವರು.

ಮುಖ್ಯವಾಗಿ ಕಡಿಮೆ ನಿದ್ರೆ ಮಾಡುವ ಜನರಿಗೆ ಆರೋಗ್ಯದ ತೊಂದರೆಗಳು ಅದರಲ್ಲೂ ವಿಶೇಷವಾಗಿ ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳು ಹೆಚ್ಚಾಗಿ ಬರುತ್ತವೆ. ಮಹಿಳೆಯರಿಗಿಂತ ಪುರುಷರಿಗೆ ಈ ತೊಂದರೆಗಳು ಜಾಸ್ತಿ ಎಂದು ತಿಳಿದು ಬಂದಿದೆ.

ಪುರುಷರು ಯಾರು ರಾತ್ರಿ ಹೊತ್ತು 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಅಂತಹವರಿಗೆ ಹೃದಯ ರಕ್ತನಾಳದ ಕಾಯಿಲೆಗಳಿಗೆ ದಾರಿಯಾಗಲಿದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿರುತ್ತದೆ. ಆದರೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವ ಪುರುಷರಿಗೆ ಈ ರೀತಿಯ ಸಮಸ್ಯೆಗಳು ಕಡಿಮೆ ಎಂದು ಅಧ್ಯಯನ ಹೇಳಿದೆ

ಅಧ್ಯಯನದಲ್ಲಿ 50 ವರ್ಷ ದಾಟಿದ ಸುಮಾರು 800 ಪುರುಷರನ್ನು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಲಜಿ ಕಾಂಗ್ರೆಸ್ ಎಂಬ ಸಂಸ್ಥೆ ತನ್ನ ಅಧ್ಯಯನಕ್ಕಾಗಿ ಬಳಸಿಕೊಂಡು ಅವರುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಕೆಲವರಿಗೆ 8:00 ಗಳಿಗಿಂತ ಹೆಚ್ಚು ನಿದ್ರೆ ಮಾಡು ವಂತೆ ಹೇಳಿ ಇನ್ನು ಕೆಲವರು ಯಾರು ಎಂಟು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ ಅವರನ್ನು ಒಂದು ಗುಂಪು ಮಾಡುವ ಹಾಗೆ ಸೂಚನೆ ನೀಡಿ ಅವರ ಆಹಾರ ಪದ್ಧತಿಯ ಮೇಲೆ ಗಮನ ಹರಿಸಿತು.

ಸುಮಾರು 21 ವರ್ಷಗಳ ಕಾಲ ತನಕ ನಡೆದ ಈ ಸಂಶೋಧನೆಯಲ್ಲಿ ಅವರಿಗೆ ಎದುರಾಗುವ ಹೃದಯಘಾತ, ಪಾರ್ಶ್ವವಾಯು ಮತ್ತು ಹೃದಯದ ಕಾಯಿಲೆಗಳಿಂದ ಸಾವನ್ನಪ್ಪುವ ಸಂಖ್ಯೆಗಳನ್ನು ಲೆಕ್ಕಾಚಾರ ಮಾಡಲಾಯಿತು.

ಹೌದು ಈ ಅಧ್ಯಯನದಲ್ಲಿ ಯಾರು 5 ಗಂಟೆಗಳಿಗಿಂತ ಕಡಿಮೆ ನಿದ್ರೆ ರಾತ್ರಿ ಹೊತ್ತು ಮಾಡುತ್ತಿದ್ದರು ಅವರಿಗೆ ರಕ್ತದ ಒತ್ತಡ, ಮಧುಮೇಹ ಮತ್ತು ಬೊಜ್ಜು ವಿಪರೀತ ಕಂಡುಬಂದಿದ್ದು, ಅವರಲ್ಲಿ ಕೆಲವರು ಜಡ ಜೀವನ ಶೈಲಿ ಮತ್ತು ಧೂಮಪಾನ ಮತ್ತು ಮಧ್ಯಪಾನ ಅಭ್ಯಾಸಗಳನ್ನು ಹೊಂದಿದ್ದರು ಅಲ್ಲದೆ ಆರೋಗ್ಯ ಸಮಸ್ಯೆಗಳಿಂದ ಬೇಗ ಮರಣ ಹೊಂದಿದವರು ಇದ್ದಾರೆ ಎಂದು ನಿಖರ ಮಾಹಿತಿ ದೊರೆತಿದೆ.

ಒಟ್ಟಿನಲ್ಲಿ ಅಧ್ಯಯನದ ಪ್ರಕಾರ ಪುರುಷರ ಕೆಲವು ಸಮಸ್ಯೆಗಳಿಗೆ ಈ ಅಧ್ಯಯನದಿಂದ ಉತ್ತರ ಸಿಕ್ಕಂತಾಗಿದೆ.