ನೀವು ಶ್ರೀಮಂತರಾಗಬೇಕಂದ್ರೆ ಮಲಗೋ ಮುಂಚೆ ಮಾಡಬೇಡಿ ಈ ಕೆಲಸ!
ಶ್ರೀಮಂತ ಆಗಬೇಕು ಎಂದು ಕನಸು ಕಾಣೋದು ಕಾಮನ್. ಸಾಮಾನ್ಯವಾಗಿ ಪ್ರತಿಯೊಬ್ಬರ ಕನಸು ಕೂಡ ಅದೇ ಆಗಿರುತ್ತೆ ಅಂದರೂ ತಪ್ಪಾಗಲಾರದು. ಅದರಂತೆ ಹೆಚ್ಚಿನವರು ಕಷ್ಟ ಪಟ್ಟು ದುಡಿಯುತ್ತಾರೆ. ಕೆಲವೊಂದಷ್ಟು ಜನ ಶ್ರದ್ಧೆಯಿಂದ ಎಷ್ಟಾಗುತ್ತೋ ಅಷ್ಟು ದುಡಿಯುತ್ತಾರೆ. ಆದ್ರೆ, ಇನ್ನೂ ಕೆಲವೊಂದಷ್ಟು ಜನ ಸಮಯದ ಅರಿವಿಲ್ಲದೆ ರಾತ್ರಿ ಹಗಲು ಎಂದು ದಿನಪೂರ್ತಿ ಶ್ರೀಮಂತನಾಗಬೇಕು ಎಂದು ದುಡಿಯುತ್ತಾರೆ.
ಎಷ್ಟು ದುಡಿಯುತ್ತೇವೆ ಅದು ಮುಖ್ಯವಲ್ಲ. ಬದಲಾಗಿ ಎಷ್ಟು ಉಳಿತಾಯ ಮಾಡುತ್ತೇವೆ ಅದು ಮುಖ್ಯ. ಕೆಲವೊಂದು ಬಾರಿ ನಾವೂ ಮಾಡುವ ತಪ್ಪಿನಿಂದಾಗಿ ನಮ್ಮಲ್ಲಿರುವ ಸಂಪತ್ತು ಕೂಡ ದೂರ ಹೋಗುತ್ತದೆ. ಅವುಗಳಲ್ಲಿ ರಾತ್ರಿ ಹೊತ್ತು ಮಾಡುವ ಈ ಕೆಲಸಗಳು ಕೂಡ ಸೇರಿದೆ. ಹೌದು. ರಾತ್ರಿ ವೇಳೆ ನೀವು ಈ ಕೆಲಸ ಮಾಡಿದ್ರೆ ನಿಮ್ಮ ಮೈ ಮೇಲೆ ಸಾಲ ಎಳೆದುಕೊಳ್ಳೋದು ಅಂತೂ ಗ್ಯಾರಂಟಿ. ಹಾಗಿದ್ರೆ, ಬನ್ನಿ ಯಾವ ಕೆಲಸ ಮಾಡದಿದ್ದರೆ ಸೂಕ್ತ ಎಂಬುದನ್ನು ತಿಳಿದುಕೊಳ್ಳೋಣ..
ಇಡೀ ಮನೆ ಬೆಳಕು ಆರಿಸಬೇಡಿ :
ಬಹುತೇಕರು ರಾತ್ರಿ ಹಾಸಿಗೆಗೆ ಹೋಗುವ ಮುನ್ನ ಇಡೀ ಮನೆಯ ದೀಪ ಆರಿಸ್ತಾರೆ. ಇದ್ರಿಂದ ಮನೆ ಸಂಪೂರ್ಣ ಕತ್ತಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಮನೆಯ ಎಲ್ಲ ದೀಪವನ್ನು ಆರಿಸುವುದು ತಪ್ಪು. ಮನೆಯಲ್ಲಿ ಒಂದು ಸಣ್ಣ ಬೆಳಕು ಉರಿಯುತ್ತಿರಬೇಕು. ಇಡೀ ಮನೆ ಕತ್ತಲಾದ್ರೆ ಮುನಿಸಿಕೊಂಡು ಲಕ್ಷ್ಮಿ ಮನೆಯಿಂದ ಹೊರಗೆ ಹೋಗ್ತಾಳೆ.
ರಾತ್ರಿ ಹಣ ಎಣಿಸಬೇಡಿ :
ರಾತ್ರಿ ಮಲಗುವ ಮುನ್ನ ಇಂದು ಬಂದ ಆದಾಯವನ್ನು ಕೆಲವರು ಲೆಕ್ಕ ಹಾಕ್ತಾರೆ. ಹಾಸಿಗೆ ಮೇಲೆ ನೋಟುಗಳನ್ನು ಹರಡಿಕೊಂಡು ಲೆಕ್ಕ ಮಾಡುವವರಿದ್ದಾರೆ. ಶಾಸ್ತ್ರಗಳ ಪ್ರಕಾರ, ಮಲಗುವ ಮೊದಲು ಹಣವನ್ನು ಎಣಿಸಬಾರದು. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ. ನಿಮ್ಮ ಮನೆಯಲ್ಲಿ ಆಕೆ ನೆಲೆ ನಿಲ್ಲುವುದಿಲ್ಲ. ಒಂದ್ವೇಳೆ ಹಣ ಎಣಿಸುವುದು ಅನಿವಾರ್ಯವಿದೆ ಎಂದಾಗ ಅಥವಾ ಯಾರಿಗಾದ್ರೂ ಹಣ ನೀಡಲೇಬೇಕಾದ ಸಂದರ್ಭ ಬಂದ್ರೆ ಮೊದಲು ತಾಯಿ ಲಕ್ಷ್ಮಿಯನ್ನು ನೆನೆಪಿಸಿಕೊಳ್ಳಬೇಕು. ಆಕೆಗೆ ನಮಸ್ಕರಿಸಿ ನಂತ್ರ ಹಣ ಎಣಿಸಬೇಕು.
ಮಲಗುವ ಮುನ್ನ ಬಟ್ಟೆ ಬದಲಿಸಿ :
ಹಗಲಿನಲ್ಲಿ ಧರಿಸಿದ ಬಟ್ಟೆಯನ್ನೇ ಬಹುತೇಕರು ರಾತ್ರಿ ಧರಿಸುತ್ತಾರೆ. ಇದು ತಪ್ಪು ಎನ್ನುತ್ತದೆ ಶಾಸ್ತ್ರ. ರಾತ್ರಿ ಮಲಗುವ ಮುನ್ನ ನೀವು ಬಟ್ಟೆ ಬದಲಿಸಬೇಕು. ಅಪ್ಪಿತಪ್ಪಿಯೂ ರಾತ್ರಿ ಬೆತ್ತಲೆಯಾಗಿ ಮಲಗಬಾರದು. ಇದನ್ನು ಮಾಡುವುದು ಧರ್ಮಗ್ರಂಥಗಳಲ್ಲಿ ತಪ್ಪು ಎಂದು ನಂಬಲಾಗಿದೆ. ರಾತ್ರಿ ಬೆತ್ತಲೆಯಾಗಿ ಮಲಗುವವರ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.
ಪಾದಗಳ ಸ್ವಚ್ಛತೆ :
ರಾತ್ರಿ ಮಲಗುವ ಮುನ್ನ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಪಾದಗಳಿಗೆ ನೀರು ಹಾಕಿ, ಚೆನ್ನಾಗಿ ತೊಳೆದು ನಂತ್ರ ಬಟ್ಟೆಯಲ್ಲಿ ಒರೆಸಿಕೊಂಡು ಹಾಸಿಗೆಗೆ ಹೋಗಬೇಕು. ಒದ್ದೆಯಾದ ಪಾದಗಳಲ್ಲಿಯೇ ಮಲಗುವುದು ಶುಭವಲ್ಲ. ಇದು ಆರ್ಥಿಕ ಬಿಕ್ಕಟ್ಟನ್ನು ಆಹ್ವಾನಿಸುತ್ತದೆ.
ತಲೆ ಮೇಲೆ ಈ ವಸ್ತುಗಳನ್ನು ಇಡಬೇಡಿ :
ಹಾಸಿಗೆಗೆ ಹೋದ್ಮೇಲೆ ಅನೇಕರು ಮೊಬೈಲ್, ಲ್ಯಾಪ್ ಟಾಪ್ ಬಳಸ್ತಾರೆ. ನಿದ್ರೆ ಬರ್ತಿದ್ದಂತೆ ಅದನ್ನು ದಿಂಬಿನ ಬದಿಗಿಟ್ಟು ಮಲಗ್ತಾರೆ. ಆದ್ರೆ ರಾತ್ರಿ ದಿಂಬಿನ ಅಕ್ಕಪಕ್ಕ ಯಾವುದೇ ಗ್ಯಾಜೆಟ್ ಇಡಬಾರದು. ಹಾಗೆಯೇ ಚೂಪಾದ ವಸ್ತುಗಳನ್ನು ಕೂಡ ಇಟ್ಟುಕೊಳ್ಳಬಾರದು. ಇದ್ರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಒತ್ತಡ ಹೆಚ್ಚಾಗುವ ಜೊತೆಗೆ ಆರೋಗ್ಯ ಹದಗೆಡುತ್ತದೆ. ಆರ್ಥಿಕ ಸಮಸ್ಯೆ ಕಾಡುತ್ತದೆ.
ಹಾಲಿನ ಪಾತ್ರೆ ಮುಚ್ಚಿಡಿ :
ಹಾಲನ್ನು ಬಿಸಿ ಮಾಡಿದ ನಂತ್ರ ತೆರೆದಿಡಬಾರದು. ಅದನ್ನು ಮುಚ್ಚಿಡಬೇಕು. ರಾತ್ರಿ ಮಾತ್ರವಲ್ಲ ಹಗಲಿನಲ್ಲಿ ಕೂಡ ಹಾಲಿನ ಪಾತ್ರೆಯನ್ನು ಮುಚ್ಚಿಡಬೇಕು. ಹಾಲಿನ ಪಾತ್ರೆಯನ್ನು ಹಾಗೆಯೇ ಇಟ್ಟರೆ ಆರ್ಥಿಕ ಸಮಸ್ಯೆ ಶುರುವಾಗುತ್ತದೆ. ಆರೋಗ್ಯ ನಷ್ಟಕ್ಕೂ ಇದು ಕಾರಣವಾಗುತ್ತದೆ ಎಂದು ಧರ್ಮ ಗ್ರಂಥದಲ್ಲಿ ಹೇಳಲಾಗಿದೆ.
ಅಡುಗೆ ಮನೆ ಸ್ವಚ್ಛತೆ :
ರಾತ್ರಿ ಮಲಗುವ ಮುನ್ನ ಅಡುಗೆ ಮನೆ ಸ್ವಚ್ಛತೆ ಬಗ್ಗೆ ನೀವು ಗಮನ ನೀಡಬೇಕು. ಗ್ಯಾಸ್ ಒಲೆ ಕ್ಲೀನ್ ಆಗಿರಬೇಕು. ಹಾಗೆಯೇ ಸಿಂಕ್ ನಲ್ಲಿ ಯಾವುದೇ ಪಾತ್ರೆಗಳು ಇರಬಾರದು. ಒಲೆಗೆ ರಾತ್ರಿ ಬಟ್ಟೆಯನ್ನು ಮುಚ್ಚಿಡಬೇಕು. ಒಲೆ ಮೇಲೆ ಯಾವುದೇ ಪಾತ್ರೆಯನ್ನು ಇಡಬಾರದು.