Home latest ದೆವ್ವ ಇಲ್ಲ ಎಂದು ಸಾರಲು ಸ್ಮಶಾನದಲ್ಲೇ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ | ಅನಂತರ ನಡೆದದ್ದೇನು?

ದೆವ್ವ ಇಲ್ಲ ಎಂದು ಸಾರಲು ಸ್ಮಶಾನದಲ್ಲೇ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ | ಅನಂತರ ನಡೆದದ್ದೇನು?

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಹೆಚ್ಚಿನವರು ಹುಟ್ಟುಹಬ್ಬ ವನ್ನೂ ದೊಡ್ಡ ಹಾಲ್ನಲ್ಲಿ, ಹೊಟೇಲ್, ಮಾಲ್ ಗಳಲ್ಲಿ ಇಲ್ಲವೇ ಮನೆಯಲ್ಲೇ ಅದ್ದೂರಿಯಾಗಿ ಆಚರಣೆ ಮಾಡುವುದು ಸಹಜ!! ಆದರೆ, ಇಲ್ಲೊಬ್ಬರು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಸ್ಥಳ ಕೇಳಿದರೆ ನೀವು ಬೆರಗಾಗುವುದು ನಿಶ್ಚಿತ.

ಅರೇ!!! ಗ್ರಾಂಡ್ ಆಗಿ ಬರ್ತಡೇ ಮಾಡಿಕೊಂಡಿದ್ದು ಬೇರೆಲ್ಲೂ ಅಲ್ಲ ಕಂಡ್ರೀ.. ಮಸಣದಲ್ಲಿ!!!.. ಏನಾದ್ರೂ ಅರುಳೋ ಮರುಳೋ ಇರಬೇಕು ಅಂತಾ ನೀವು ಅಂದುಕೊಂಡಿರಬಹುದು.

ಆದ್ರೆ, ಇಲ್ಲೊಬ್ಬ ಮಹಾಶಯ ಮೂಢನಂಬಿಕೆಗಳ ವಿರುದ್ಧ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ನಿವಾಸಿಯೊಬ್ಬರು ಸ್ಮಶಾನದಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

54ನೇ ವರ್ಷಕ್ಕೆ ಕಾಲಿಟ್ಟ ಗೌತಮ್ ರತನ್ ಮೋರೆ ಅವರು ಮೊಹಾನೆ ಸ್ಮಶಾನದಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಥ್ ನೀಡಿದ ಅತಿಥಿಗಳಿಗೆ ಕೇಕ್ ಹಾಗೂ ಬಿರಿಯಾನಿಗಳನ್ನು ನೀಡಿ ಸತ್ಕರಿಸಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ಮಶಾನದಲ್ಲಿ ದೊಡ್ಡ ಬ್ಯಾನರ್ ಒಂದನ್ನು ಹಾಕಲಾಗಿದ್ದು, ಕೇಕ್‍ನ್ನು ಕತ್ತರಿಸುತ್ತಿರುವ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿ ಸಂಚಲನ ಮೂಡಿಸಿದೆ.

ಸ್ಮಶಾನದಲ್ಲಿ ನಡೆದ ಗೌತಮ್ ರತನ್ ಮೋರೆಯ ಹುಟ್ಟುಹಬ್ಬದ ಅದ್ದೂರಿ ಸಂಭ್ರಮಕ್ಕೆ 40 ಮಹಿಳೆಯರು ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಅತಿಥಿಗಳು ಸಾಕ್ಷಿಯಾಗಿದ್ದರು . ಗೌತಮ್ ಈ ಬಗ್ಗೆ ಕುತೂಹಲ ಕಾರಿ ಉತ್ತರ ನೀಡಿದ್ದು, ಸಾಮಾನ್ಯವಾಗಿ ಸ್ಮಶಾನಗಳು ಎಂದಾಗ ಹೆಚ್ಚಿನವರು ಭಯಪಡುತ್ತಾರೆ. ಆದರೆ ಭಯ ಪಡುವಂತಹ ದ್ದೇನು ಇಲ್ಲ. ಇತರ ಸ್ಥಳಗಳಿಗೆ ಸಂಬಂಧಿಸಿದ ದೆವ್ವಗಳು ಅಸ್ತಿತ್ವದಲ್ಲಿಯೆ ಇಲ್ಲ ಎಂಬ ಸಂದೇಶವನ್ನು ಜನರಿಗೆ ಸಾರುವ ನಿಟ್ಟಿನಲ್ಲಿ ಇಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.