Irregular Periods: ಸರಿಯಾದ ಸಮಯಕ್ಕೆ ‘ಮುಟ್ಟು’ ಆಗ್ತಿಲ್ಲ ಎಂಬ ಚಿಂತೆ ಬಿಡಿ | ಈ ಮನೆಮದ್ದು ಅನುಸರಿಸಿ!

ಭೂಮಿ ಮೇಲೆ ಹೆಣ್ಣು ಜೀವವು ತುಂಬಾ ವಿಶೇಷ. ಹುಟ್ಟಿನಿಂದ ಸಾವಿನ ತನಕ ಹಲವಾರು ಬದಲಾವಣೆಗಳು ಹೆಣ್ಣಿನ ಜೀವದಲ್ಲಿ ಆಗುವುದು. ಇದರಲ್ಲಿ ಋತುಚಕ್ರವೂ ಒಂದು. ಋತುಚಕ್ರವೆನ್ನುವುದು ಮಹಿಳೆಯರಿಗೆ ಪ್ರಕೃತಿ ಸಹಜವಾಗಿ ಆಗುವ ಕ್ರಿಯೆ. ಸಾಮಾನ್ಯ ಮುಟ್ಟಿನ ಚಕ್ರವು 28 ರಿಂದ 32 ದಿನಗಳವರೆಗೆ ಇರುತ್ತದೆ. ಪ್ರತಿ ತಿಂಗಳು ಈ ಪಿರಿಯಡ್ಸ್ ನಿಯಮಿತ ದರದಲ್ಲಿ ಬರುತ್ತದೆ.

 

ಆದರೆ ಕೆಲವೊಮ್ಮೆ ಮಹಿಳೆಯರಿಗೆ ಸರಿಯಾಗಿ ಋತುಚಕ್ರವು ಆಗದೆ ಇರಬಹುದು ಅಥವಾ ವಿಳಂಬವಾಗಬಹುದು. ಸಾಮಾನ್ಯವಾಗಿ ಈ ಸಮಸ್ಯೆ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗುತ್ತದೆ. ಅದೇ ರೀತಿ, ಒತ್ತಡ, ಬೊಜ್ಜು, ಥೈರಾಯ್ಡ್, ಪಿಸಿಓಡಿ, ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ವಿವಿಧ ಕಾರಣಗಳಿಂದ ಅನಿಯಮಿತ ಪಿರಿಯಡ್ಸ್ ಉಂಟಾಗಬಹುದು.

ಮಹಿಳೆಯರು ಈ ಸಮಸ್ಯೆಯನ್ನು ಎದುರಿಸುವುದರಿಂದ ಗರ್ಭಾಶಯದಲ್ಲಿ ನೋವು, ಹಸಿವಿನ ಕೊರತೆ, ಎದೆ ನೋವು, ಹೊಟ್ಟೆ, ಭುಜ, ಕಾಲು, ಬೆನ್ನು ನೋವು, ಅತಿಯಾದ ಆಯಾಸ, ವಾಕರಿಕೆ, ವಾಂತಿ, ಮಲಬದ್ಧತೆ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತದೆ. ಈ ಸಮಸ್ಯೆಗಳನ್ನು ಸರಳವಾದ ಮನೆಮದ್ದುಗಳನ್ನು ಅನುಸರಿಸುವುದರಿಂದ ತಪ್ಪಿಸಬಹುದು.

ಮೆಂತ್ಯ:- ಮೆಂತ್ಯ ನೀರನ್ನು ಕುಡಿಯುವುದರಿಂದ ನಿಯಮಿತವಾಗಿ ಪಿರಿಯಡ್ಸ್ ಪಡೆಯಬಹುದು. ಒಂದು ಸಣ್ಣ ಪಾತ್ರೆಯಲ್ಲಿ ನೀರು ಮತ್ತು ಸ್ವಲ್ಪ ಮೆಂತ್ಯ ಬೀಜಗಳನ್ನು ಐದರಿಂದ ಹತ್ತು ನಿಮಿಷಗಳ ಕಾಲ ಕುದಿಸಿ ತಣ್ಣಗಾಗಲು ಬಿಡಿ, ನಂತರ ಕುಡಿಯಿರಿ. ಇಲ್ಲವಾದರೆ ಮೆಂತ್ಯವನ್ನು ರಾತ್ರಿ ನೆನೆಸಿ ಬೆಳಗ್ಗೆ ಆ ನೀರನ್ನು ಮಾತ್ರ ಕುಡಿಯಿರಿ. ಈ ನೀರು ಮಧುಮೇಹ ಹೊಂದಿರುವ ಮಹಿಳೆಯರ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಮೆಂತ್ಯ ನೀರನ್ನು ಪ್ರತಿ ದಿನ ಕುಡಿಯಿರಿ.

ಪಪ್ಪಾಯ:- ಮೊಸರಿನೊಂದಿಗೆ ಪಪ್ಪಾಯಿಯನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿನ ಈಸ್ಟ್ರೊಜೆನ್ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ ಹಾಗೂ ಪಿರಿಯಡ್ಸ್ ಆಗಲು ಕಾರಣವಾಗುತ್ತದೆ. ನೀವು ಇದನ್ನು ಪ್ರತಿದಿನ ಅಥವಾ ನಿಮ್ಮ ಪಿರಿಯಡ್ಸ್ಗೆ ಕೆಲವು ದಿನಗಳ ಮೊದಲು ತಿನ್ನುವುದರಿಂದ ಋತುಚಕ್ರದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಜೀರಿಗೆ:- ಜೀರಿಗೆಯು ಜೀರ್ಣಾಂಗವ್ಯೂಹದ ತೊಂದರೆ, ಹೊಟ್ಟೆನೋವು ಮುಂತಾದ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬುದು ನಮಗೆ ತಿಳಿದಿರುವ ವಿಚಾರವೇ. ಆದರೆ ಇದು ನಿಮ್ಮ ಮುಟ್ಟಿನ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ. ಒಂದು ಕಪ್ ಕುದಿಯುವ ನೀರಿಗೆ ಸ್ವಲ್ಪ ಜೀರಿಗೆ ಸೇರಿಸಿ, ತಣ್ಣಗಾಗಿಸಿ ಕುಡಿಯಿರಿ. ದಿನಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರ ಕುಡಿಯಿರಿ.

ಅನನಾಸು:- ಈ ಹಣ್ಣು ತುಂಬಾ ಸಿಹಿ ರುಚಿಯನ್ನು ಹೊಂದಿರುತ್ತದೆ. ಇತರ ಪರಿಹಾರಗಳಿಗಿಂತ ಇದು ನಿಮಗೆ ಸರಳವಾಗಿರುತ್ತದೆ. ಇದನ್ನು ತಿಂದರೆ ಸಮಯಕ್ಕೆ ಸರಿಯಾಗಿ ಪಿರಿಯಡ್ಸ್ ಆಗುವುದು ಮಾತ್ರವಲ್ಲದೆ ಮುಟ್ಟಿನ ಸಮಯದಲ್ಲಿ ದೇಹದಲ್ಲಿ ಉಂಟಾಗುವ ನೋವು ಮುಂತಾದ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

Leave A Reply

Your email address will not be published.