ಧರ್ಮಸ್ಥಳ ಗ್ರಾಮದ ನಾರ್ಯ ಬಡ ಕುಟುಂಬಕ್ಕೆ ಒಂದೇ ದಿನದಲ್ಲಿ ಬಂತು ವಿದ್ಯುತ್ ಬೆಳಕು
ಸುಮಾರು 8 ವರ್ಷಗಳಿಂದ ವಿದ್ಯುತ್ ಕಾಣದ ಬೆಳ್ತಂಗಡಿ ತಾಲೂಕಿನ ನಾರ್ಯ ಬಡ ಕುಟುಂಬವೊಂದಕ್ಕೆ ಕೇವಲ ಒಂದು ದಿನದಲ್ಲಿ ವಿದ್ಯುತ್ ಸಂಪರ್ಕ ಲಭಿಸಿದೆ.
ಇದಕ್ಕೆ ಕಾರಣವಾದ್ದು ಅಲ್ಲಿನ ಸ್ಥಳೀಯರು. ಈ ವಿಷಯವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಅರಿವಿಗೆ ಬಂದ ತಕ್ಷಣ ಅದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯತ್ ಸದಸ್ಯ ಮತ್ತು ಅಧ್ಯಕ್ಷರು, ಒಂದೇ ದಿನದಲ್ಲಿ ವಿದ್ಯುತ್ ಸಂಪರ್ಕ ಕೊಡಿಸಿ ತಾಲೂಕಿನಲ್ಲಿಯೇ ಹೊಸ ದಾಖಲೆ ಬರೆಸಿದ್ದಾರೆ.
ನಾರ್ಯ ಊರಿನ ಧರ್ಮಸ್ಥಳ ಗ್ರಾಮದ ಕಮಲ ಮೊಗೇರ ಮತ್ತು ಮಕ್ಕಳು ಒಂದೇ ಮನೆಯಲ್ಲಿ ವಾಸವಾಗಿದ್ದರು. ಮನೆಗೆ ಕಳೆದ 8 ವರ್ಷಗಳಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಈ ಬಗ್ಗೆ ಧರ್ಮಸ್ಥಳ ಪಂಚಾಯ್ತಿ ಹಾಗೂ ಮೆಸ್ಕಾಂಗೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ.
ಈ ಬಗ್ಗೆ ಮಾಹಿತಿ ಪಡೆದ ಈಗಿನ ಗ್ರಾಮ ಪಂಚಾಯತ್ ಸದಸ್ಯ ಈ ಒಂದು ಕೆಲಸ ಕಾರ್ಯದಲ್ಲಿ ಮುತುವರ್ಜಿ ವಹಿಸಿ ವಿದ್ಯುತ್ ಸಂಪರ್ಕ ಮತ್ತು ಎರಡೂ ಮನೆಗಳಿಗೆ ದಿನ ಬಳಕೆಗೆ ನೀರು ಸಂಗ್ರಹಕ್ಕೆ 1000 ಲೀ ನೀರಿನ ಡ್ರಮ್ ಕೂಡ ನೀಡಿ ಪೈಪ್ ಲೈನ್ ವ್ಯವಸ್ಥೆಯನ್ನು ಒಂದೇ ದಿನಗಳಲ್ಲಿ ಮಾಡಿಕೊಡಲಾಯಿತು. ಮೋದಿಯವರ ಕನಸಿನಂತೆ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಇರಬೇಕು ಇಲ್ಲದಿದ್ದರೆ ಅಧಿಕಾರಿಗಳೇ ಮುಂದೆ ನಿಂತು ಮಾಡಿಸಬೇಕು ಎಂಬ ಈ ಒಂದು ಕರೆಗೆ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಸುಧಾಕರ್ ಗೌಡ ಸಾಕ್ಷಿಯಾಗಿದ್ದಾರೆ.
ಕಮಲ ಮತ್ತು 4 ಮಕ್ಕಳು ಕಳೆದ 8 ವರ್ಷಗಳ ಹಿಂದೆ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ದುಃಖಕಾರ ಸಂಗತಿ ಎಂದರೆ ಈ ಕುಟುಂಬದ ಯಾವುದೇ ಒಬ್ಬ ಸದಸ್ಯನಿಗೂ ಕಣ್ಣು ಕಾಣದೆ ಇರುವುದು. ತುಂಬಾ ಬಡತನದಿಂದ ಬದುಕು ಸಾಗಿಸುತ್ತಿರುವ ಇವರಿಗೆ ರಾತ್ರಿ ಚಿಮಿಣಿ ದೀಪ ಹಾಗೂ ಚಿಕ್ಕದೊಂದು ಸೋಲಾರ್ ದೀಪವೇ ಬೆಳಕು ನೀಡುತ್ತಿತ್ತು. ಅವರಲ್ಲಿ ಒಂದು ಕುಟುಂಬ ಇತ್ತೀಚೆಗೆ ಬೇರೆ ಮನೆ ಮಾಡಿತ್ತು.
ಮನೆಯ ಪಕ್ಕದಲ್ಲಿ ವಿದ್ಯುತ್ ಕಂಬವಿದ್ದರೂ ಈ ಮನೆಗೆ ಮಾತ್ರ ಬೆಳಕು ನೀಡುವುದಕ್ಕೆ ಮೆಸ್ಕಾಂನಿಂದ ಸಾಧ್ಯವಾಗಿರಲಿಲ್ಲ.
ಗ್ರಾಮ ಪಂಚಾಯತ್ ಸದಸ್ಯ ಮತ್ತು ಅಲ್ಲಿನ ಸ್ಥಳೀಯರು ಅಧಿಕಾರಿಗಳ ಕಣ್ಣು ತೆರೆಸಿ ಈ ಬಡ ಕುಟುಂಬಕ್ಕೆ ಬೆಳಕು ನೀಡಿದ್ದಾರೆ.