Black Wheat Benefits : ‘ರೈತರ ಕಪ್ಪು ಚಿನ್ನ’ ಗೋಧಿಯ ಆರೋಗ್ಯ ಪ್ರಯೋಜನ!

ಮನುಷ್ಯ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಅಗತ್ಯವಾಗಿ ಬೇಕೇ ಬೇಕು. ನಾನಾ ರೀತಿಯ ಆಹಾರಗಳಲ್ಲಿ ನಾನಾ ರೀತಿಯ ಪ್ರೊಟೀನ್ ಗಳು ದೊರೆಯುತ್ತವೆ. ಆದರೆ ಕೆಲವೊಂದು ಆಹಾರದಲ್ಲಿನ ಗುಣಗಳು ನಮಗೆ ತಿಳಿದಿರುವುದಿಲ್ಲ.ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ತರಕಾರಿಗಳು ಮಾರುಕಟ್ಟೆಗೆ ಬಂದಿವೆ. ನೇರಳೆ ಎಲೆಕೋಸು, ಕಪ್ಪು ಅಕ್ಕಿ ಮತ್ತು ಇತರ ಹಲವು ವಿಧದ ಹೈಬ್ರಿಡ್ ತರಕಾರಿಗಳು ದೇಹಕ್ಕೆ ಯಾವುದೇ ಸಾಮಾನ್ಯ ತರಕಾರಿಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎನ್ನಲಾಗುತ್ತಿದೆ. ನೀವು ಗೋಧಿಯ ಹಲವು ಪ್ರಕಾರಗಳನ್ನು ನೋಡಿರಬಹುದು, ನಾವು ಹೆಚ್ಚಾಗಿ ಗೋದಿ ರೊಟ್ಟಿಯಿಂದ ತಯಾರಿಸುತ್ತೇವೆ. ಆದರೆ ಕಪ್ಪು ಗೊದಿಯಿಂದ ತಯಾರಿಸಲಾಗುವ ಚಪಾತಿ ಬಗ್ಗೆ ನಿಮಗೆ ತಿಳಿದಿದೆಯಾ. ಹೌದು ರೈತರು ಕಪ್ಪು ಚಿನ್ನ ಎಂದೇ ಕರೆಯಲಾಗುವ ಈ ಕಪ್ಪು ಗೋದಿ ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿದೆ.

ಚಳಿಗಾಲದಲ್ಲಿ ಸ್ನಾಯುಗಳ ನೋವು ಹೆಚ್ಚಾಗಿ ಕಾಣುತ್ತವೆ. ಇಂತಹ ಹವಾಮಾನದಲ್ಲಿ ಹಳೆಯ ಕೀಲುಗಳ ನೋವು ವೇಗವಾಗಿ ಹೆಚ್ಚಾಗಲು ಆರಂಭಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇದರಲ್ಲಿರುವ ಔಷಧೀಯ ಗುಣಗಳು ಮೊಣಕಾಲು ಮತ್ತು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಇದರೊಂದಿಗೆ ಅನೀಮಿಯಾ ಅಥವಾ ರಕ್ತಹೀನತೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ.

ಮಾಹಿತಿ ಪ್ರಕಾರ ಸಾಮಾನ್ಯ ಗೋಧಿಗಿಂತ ಕಪ್ಪು ಗೋಧಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಕಪ್ಪು ಗೋಧಿಯಲ್ಲಿರುವ ಆಂಥೋಸಯಾನಿನ್ ವರ್ಣದ್ರವ್ಯದ ಕಾರಣ, ಅದರ ಬಣ್ಣ ಕಪ್ಪಾಗಿರುತ್ತದೆ. ಸಾಮಾನ್ಯ ಗೋಧಿಯಲ್ಲಿ ಆಂಥೋಸಯಾನಿನ್ ಪ್ರಮಾಣ 5 ppm ಆಗಿದ್ದರೆ ಕಪ್ಪು ಗೋಧಿಯಲ್ಲಿ 100 ರಿಂದ 200 ppm ಇರುತ್ತದೆ.

  • ಇದು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಗೋಧಿಯ ಹೋಲಿಕೆಯಲ್ಲಿ ಕಪ್ಪು ಗೋಧಿಯಲ್ಲಿ ಕಬ್ಬಿಣವು ಶೇಕಡಾ 60 ರಷ್ಟು ಹೆಚ್ಚು ಕಂಡುಬರುತ್ತದೆ ಎಂದು ಸಾಬೀತು ಆಗಿದೆ.
  • ಮುಖ್ಯವಾಗಿ ಕಪ್ಪು ಗೊದಿಯಿಂದಾಗುವ ಲಾಭದ ದೃಷ್ಟಿಯಿಂದ, ಇದನ್ನು ‘ರೈತರ ಕಪ್ಪು ಚಿನ್ನ’ ಎಂದು ಕರೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸಾಮಾನ್ಯ ಗೋಧಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು. ಕಪ್ಪು ಗೋಧಿಯನ್ನು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬೆಳೆಯಲಾಗುತ್ತದೆ. ಇದರ ಬೇಸಾಯದ ವೆಚ್ಚ ಬಹಳ ಕಡಿಮೆ. ಈ ಗೋಧಿಯನ್ನು ಬೆಳೆಯುವ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸಬಹುದು.
  • ಚಳಿಗಾಲದ ಆರಂಭವಾದ ಈ ಹವಾಮಾನದಲ್ಲಿ ಹಳೆಯ ಕೀಲುಗಳ ನೋವು ವೇಗವಾಗಿ ಹೆಚ್ಚಾಗಲು ಆರಂಭಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇದರಲ್ಲಿರುವ ಔಷಧೀಯ ಗುಣಗಳು ಮೊಣಕಾಲು ಮತ್ತು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದರೊಂದಿಗೆ ಅನೀಮಿಯಾ ಅಥವಾ ರಕ್ತಹೀನತೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಮಾರುಕಟ್ಟೆಯಲ್ಲಿ ಈ ಗೋಧಿಗೆ ಬೇಡಿಕೆ ಹೆಚ್ಚಿದೆ.

•ಕಪ್ಪು ಗೋಧಿಯು ಹೃದಯ, ಕ್ಯಾನ್ಸರ್, ಮಧುಮೇಹ, ಬೊಜ್ಜು ಸೇರಿದಂತೆ ಅನೇಕ ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ,ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಯಾವುದೇ ಸಾಮಾನ್ಯ ಗೋಧಿಗೆ ಹೋಲಿಸಿದರೆ, ಸತುವಿನ ಪ್ರಮಾಣವು ಅದರಲ್ಲಿ ಹೆಚ್ಚು ಕಂಡುಬರುತ್ತದೆ. ಇದರ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಅಗಾಧವಾಗಿ ಹೆಚ್ಚುತ್ತದೆ.

ಈ ಮೇಲಿನ ಔಷದಿ ಗುಣ ಹೊಂದಿರುವ ಕಪ್ಪು ಗೋಧಿ ಸೇವನೆಯಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

    Leave A Reply

    Your email address will not be published.