Home Technology Smartphones: ಐಫೋನ್ 13ಗೆ ಹೋಲುವ ಸ್ಯಾಮ್​ಸಂಗ್ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಮಾರುಕಟ್ಟೆಯಲ್ಲಿ ! ಇದರ ಸಾಮ್ಯತೆ...

Smartphones: ಐಫೋನ್ 13ಗೆ ಹೋಲುವ ಸ್ಯಾಮ್​ಸಂಗ್ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಮಾರುಕಟ್ಟೆಯಲ್ಲಿ ! ಇದರ ಸಾಮ್ಯತೆ ಏನು? ಇಲ್ಲಿದೆ ಉತ್ತರ!

Hindu neighbor gifts plot of land

Hindu neighbour gifts land to Muslim journalist

ಈಗಿನ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್​ಫೋನ್​ಗಳು ರಿಲೀಸ್​ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್​ಫೋನ್​ ಯಾವುದು ಬೆಸ್ಟ್ ಅನ್ನೋದು ಕೂಡ ನಮಗೆ ಗೊತ್ತಿದ್ದರೆ ಉತ್ತಮ.

ಹೌದು ಸ್ಮಾರ್ಟ್​ಫೋನ್​ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ.ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಅದರಲ್ಲೂ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಸೀರಿಸ್‌ ನಲ್ಲಿ ಕಂಪನಿಗಳು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈಗಾಗಲೇ ಐಫೋನ್ 13ಗೆ ಹೋಲುವ ಸ್ಯಾಮ್​ಸಂಗ್ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಬಿಡುಗಡೆ ಮಾಡಲಾಗಿದೆ.

ಆ್ಯಪಲ್ ಮತ್ತು ಸ್ಯಾಮ್​ಸಂಗ್ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಹೆಸರು ಹೊಂದಿದ ಸ್ಮಾರ್ಟ್​ಫೋನ್ ಕಂಪನಿಗಳಾಗಿವೆ. ಇದೀಗ ಸ್ಯಾಮ್​ಸಂಗ್ ತನ್ನ ಬ್ರಾಂಡ್​​ನಲ್ಲಿ ಸ್ಯಾಮ್​ಸಂಗ್ ಎಸ್22 (Samsung S22) ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದರ ಫೀಚರ್ಸ್ ಸೇಮ್ ಐಫೋನ್ 13​ಗೆ (IPhone 13) ಸರಿಸಮಾನವಾಗಿ ತಯಾರಿಸಿದ್ದಾರೆ.

ಆದರೆ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ.
• ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ ಬೆಲೆ 96,750 ರೂಪಾಯಿ ಮತ್ತು
• ಆ್ಯಪಲ್ ಐಫೋನ್​ 13 ಆರಂಭಿಕ ಬೆಲೆ 62,999 ರೂಪಾಯಿಯಾಗಿದೆ.

ಐಫೋನ್​ 13 ಸ್ಮಾರ್ಟ್​ಫೋನ್​ ಮತ್ತು ಸ್ಯಾಮ್​ಸಂಗ್ ಎಸ್​22 ಸ್ಮಾರ್ಟ್​​ಫೋನ್​ ಇವೆರಡೂ ಸ್ಮಾರ್ಟ್​ಫೋನ್​ನ ಫೀಚರ್ಸ್​ಗಳು ಎರಡೂ ಬಹಳಷ್ಟು ಒಂದೇ ರೀತಿಯಲ್ಲಿದೆ. ಇವೆರಡರ ಮೊಬೈಲ್​​ ಫೀಚರ್ಸ್ ಅನ್ನು ಈ ಕೆಳಗೆ ಒಂದಕ್ಕೊಂದು ಹೋಲಿಕೆ ಮಾಡಲಾಗಿದೆ

•ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಬಳಕೆದಾರ ಇಂಟರ್ಫೇಸ್ ಆಗಿ One UI 5 ಅನ್ನು ಹೊಂದಿದೆ.
•ಆ್ಯಪಲ್ ಐಫೋನ್​ 13 IOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಅದನ್ನು IOS 16.1 ಗೆ ಅಪ್‌ಗ್ರೇಡ್ ಮಾಡಬಹುದು.
ಆ್ಯಪಲ್ ಐಫೋನ್​ 13 ಕಂಪನಿಯ ಸ್ವಂತ ಆ್ಯಪಲ್ ಎ15 ಬಯೋನಿಕ್ (5 nm) ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ.

• ಆ್ಯಪಲ್ ಐಫೋನ್ 13 ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 12 MP ಸಿಂಗಲ್ ಕ್ಯಾಮೆರಾವನ್ನು ಹೊಂದಿದೆ.
• ಮತ್ತೊಂದೆಡೆ ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ 108MP + 10MP + 10MP + 12MP ಹಿಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇನ್ನು 40MP ಮುಂಭಾಗದ ಕ್ಯಾಮೆರಾ ಹೊಂದಿದೆ.

•ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ 6.8 ಇಂಚುಗಳ ಸ್ಕ್ರೀನ್ ಗಾತ್ರದೊಂದಿಗೆ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ. ಆ್ಯಪಲ್ ಐಫೋನ್​ 13 ಸೂಪರ್ ರೆಟಿನಾ XDR OLED ಅನ್ನು 6.1 ಇಂಚುಗಳಷ್ಟು ಸ್ಕ್ರೀನ್ ಗಾತ್ರವನ್ನು ಹೊಂದಿದೆ.
•ಆ್ಯಪಲ್ ಐಫೋನ್​ 13, 1170 x 2532 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ ಮತ್ತು ಸ್ಯಾಮ್‌ಸಂಗ್ ಎಸ್ 22, 1440 x 3088 ಪಿಕ್ಸೆಲ್‌ಗಳ ಉತ್ತಮ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ.

• ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾವನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಚಿಸಲಾಗಿದೆ. ಮತ್ತು ಯಾವಾಗಲೂ ಆನ್ ಡಿಸ್‌ಪ್ಲೇ ಹೊಂದಿದೆ.
• ಐಫೋನ್ 13 ಅನ್ನು ಸೆರಾಮಿಕ್ ಶೀಲ್ಡ್ ಗ್ಲಾಸ್‌ನಿಂದ ರಚಿಸಲಾಗಿದೆ.

• ಐಫೋನ್​ 13, 3240 mAh ಬ್ಯಾಟರಿಯನ್ನು ಹೊಂದಿದ್ದು, ಇದು 23W ವೈರ್ಡ್ ಫಾಸ್ಟ್ ಚಾರ್ಜಿಂಗ್, 15W MagSafe ವೈರ್‌ಲೆಸ್ ಚಾರ್ಜಿಂಗ್ ಮತ್ತು 7.5W Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಹೊಂದಿದೆ.
• ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ 45W ವೇಗದ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000 mAh ನ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 15W Qi ಅಥವಾ PMA ವೈರ್‌ಲೆಸ್ ಚಾರ್ಜಿಂಗ್ ಮತ್ತು 4.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಬರುತ್ತದೆ.

ನೀವೀಗ ಈ ಮೇಲಿನ ಮಾಹಿತಿ ಪ್ರಕಾರ ಸ್ಮಾರ್ಟ್ ಫೋನಿನ ಆಯ್ಕೆ ಮಾಡಬಹುದಾಗಿದೆ.