SHOCKING NEWS : ಪ್ರೇಯಸಿಯನ್ನು 35 ತುಂಡು ಮಾಡಿ, ಮಾಂಸವಿಡಲು ಹೊಸ ಫ್ರಿಡ್ಜ್ ಖರೀದಿಸಿದ ಕಿರಾತಕ ಪ್ರೇಮಿ | ನಂತರ ಆದದ್ದು ಮಾತ್ರ ಊಹಿಸಲಸಾಧ್ಯ!

Share the Article

ಪ್ರೀತಿ ಕುರುಡು ಎಂಬ ಮಾತಿನಂತೆ ಅನೇಕ ಪ್ರೇಮ ಜೋಡಿಗಳು ನೂರಾರು ಕನಸು ಹೊತ್ತು ಕೆಲವರು ಮದುವೆಯಾದರೆ,ಮತ್ತೆ ಕೆಲವು ಪ್ರಕರಣಗಳಲ್ಲಿ ಮನೆಯವರ ಒತ್ತಡಕ್ಕೊ ಇಲ್ಲವೆ ಬೇರೆ ಕಾರಣಗಳಿಂದ ಬೇರೆಯವರೊಂದಿಗೆ ಮದುವೆಯಾಗುವ ಪ್ರಸಂಗಗಳು ಸಹಜವಾಗಿ ನಡೆಯುವಂತದ್ದು. ಆದರೆ, ಕೆಲ ಘಟನೆಗಳ ಕೇಳಿದಾಗ ಹೀಗೂ ಉಂಟೇ ಎಂಬ ಪ್ರಶ್ನೆ ಉದ್ಭಿವಿಸುತ್ತದೆ. ಈ ರೀತಿಯ ಮನಸ್ಥಿತಿಯವರು ಇದ್ದಾರಾ?? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಹೌದು !! ಇದೇ ರೀತಿ ಪ್ರಶ್ನೆ ಮೂಡುವಂತಹ ಪ್ರಕರಣವೊಂದು ಮುನ್ನಲೆಗೆ ಬಂದಿದೆ. ದೆಹಲಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ತನ್ನನ್ನು ಮದುವೆಯಾಗೆಂದು ಹೇಳಿದ ಕಾರಣಕ್ಕಾಗಿ, ಲಿವಿಂಗ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಪ್ರಿಯಕರ ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಷ್ಟೆ ಅಲ್ಲದೇ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಇಡಲು ಫ್ರಿಡ್ಜ್ ಖರೀದಿಸಿದ ವಿಚಿತ್ರ ಘಟನೆ ನಡೆದಿದೆ.

26 ವರ್ಷದ ಶ್ರದ್ಧಾ ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದ್ದು, ಅಲ್ಲಿ ಆಕೆ ಪೂನಾವಾಲಾ ಅವರನ್ನು ಭೇಟಿಯಾಗಿದ್ದಾಳೆ. ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದು ಜೊತೆಗೆ ಒಟ್ಟಿಗೆ ಇರಲು ಪ್ರಾರಂಭಿಸಿದ್ದಾರೆ. ಈ ವಿಚಾರ ಶ್ರದ್ಧಾಳ ಕುಟುಂಬಕ್ಕೆ ತಿಳಿಯುತ್ತಿದ್ದಂತೆ ಈ ಸಂಬಂದಕ್ಕೆ ನಿರಾಕಾರ ಸೂಚಿಸಿದ್ದಾರೆ. ಹಾಗಾಗಿ, ಇಬ್ಬರೂ ದೆಹಲಿಯ ಮೆಹ್ರೌಲಿಯ ಫ್ಲಾಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ.

ಇದಾದ ಕೆಲವು ದಿನಗಳ ನಂತರ, ಶ್ರದ್ಧಾ ತನ್ನ ಕುಟುಂಬದ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದಾಳೆ ಎನ್ನಲಾಗಿದ್ದು ಹೀಗಾಗಿ, ನವೆಂಬರ್ 8 ರಂದು ಆಕೆಯ ತಂದೆ ವಿಕಾಸ್ ಮದನ್ ಮಗಳನ್ನು ಹುಡುಕಿಕೊಂಡು ದೆಹಲಿಗೆ ಬಂದಿದ್ದಾರೆ. ಫ್ಲಾಟ್‌ನಲ್ಲಿ ಮನೆಯ ಡೋರ್ ಲಾಕ್ ಆಗಿದ್ದನ್ನು ಗಮನಿಸಿ ಅನುಮಾನಗೊಂಡ ಮದನ್ ಮೆಹ್ರೌಲಿ ಪೊಲೀಸರನ್ನು ಸಂಪರ್ಕಿಸಿ ಅಪಹರಣದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

ವಿಕಾಸ್ ರವರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಸತ್ಯ ಬಯಲಾಗಿದ್ದು, ತನ್ನ ಜೀವನ ಸಂಗಾತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಎಸೆದಿದ್ದ ಎನ್ನಲಾಗಿದೆ. ಲಿವಿಂಗ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಅಫ್ತಾಬ್ ಅಮೀನ್ ಪೂನಾವಾಲಾ ಮತ್ತು ಶ್ರದ್ಧಾಳ ನಡುವೆ ಮೇ 18 ರಂದು ಜಗಳವಾಗಿದ್ದು, ಆಗ ಪೂನಾವಾಲಾ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದಾನೆ.

ಈ ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಮೃತ ದೇಹ ವಾಸನೆ ಬರದಂತೆ ತಡೆಯಲು ಮತ್ತು ತುಂಡುಗಳನ್ನು ಇರಿಸಿಕೊಳ್ಳಲು 300 ಲೀಟರ್ ಫ್ರಿಜ್ ಅನ್ನು ಖರೀದಿಸಿದ್ದಾನೆ. ಶ್ರದ್ಧಾರನ್ನು ಕೊಲೆ ಮಾಡಿ ಆಕೆಯ ದೇಹದ ತುಂಡುಗಳನ್ನು ಎಸೆಯಲು ಆರೋಪಿಯು 18 ದಿನಗಳ ಕಾಲ ಅಮೀನ್ ಪೂನಾವಲ್ಲಾ ಪ್ರತಿದಿನ ಮುಂಜಾನೆ 2 ಗಂಟೆಗೆ ಮೆಹ್ರೌಲಿ ಅರಣ್ಯಕ್ಕೆ ತೆರಳುತ್ತಿದ್ದ ಎನ್ನಲಾಗಿದೆ.

ಈ ಪ್ರಕರಣದ ಕುರಿತಾಗಿ ಪೊಲೀಸರು ಪೂನಾವಾಲಾ ಅವರನ್ನು ಶನಿವಾರ ಬಂಧಿಸಿದ್ದಾರೆ. ಶ್ರದ್ಧಾ ತನ್ನನ್ನು ಮದುವೆಯಾಗಲು ಬಯಸಿದ್ದರಿಂದ ಇಬ್ಬರೂ ಜಗಳವಾಡುತ್ತಿದ್ದ ಕುರಿತಾಗಿ ಹಾಗಾಗಿ ಕೊಲೆ ಮಾಡಿರುವ ಕುರಿತು ತನಿಖೆಯ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರದ್ಧಾ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave A Reply