Home News ಹೆಂಡತಿಯನ್ನು ಬೇರೊಬ್ಬನ ಜೊತೆ ಮದುವೆ ಮಾಡಿಸಿದ ಗಂಡ | ಹೆಂಡತಿ ಮಾಡಿದ್ದೇನು ಗೊತ್ತೇ?

ಹೆಂಡತಿಯನ್ನು ಬೇರೊಬ್ಬನ ಜೊತೆ ಮದುವೆ ಮಾಡಿಸಿದ ಗಂಡ | ಹೆಂಡತಿ ಮಾಡಿದ್ದೇನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಮನುಷ್ಯ ಕೆಲವೊಮ್ಮೆ ತುಂಬಾ ಅಂದರೆ ತುಂಬಾ ಸ್ವಾರ್ಥಿ ಆಗುತ್ತಾನೆ. ಸಣ್ಣ ಸಣ್ಣ ವಿಷಯಗಳಿಗೂ ಕೋಪ, ಮತ್ಸರ, ಕಿತ್ತಾಟ ಇವುಗಳನ್ನು ನೋಡಿ ನೋಡಿ ಸುಸ್ತಾಗಿದೆ. ಆದರೆ ಇಲ್ಲೊಬ್ಬನ ಸ್ವಾರ್ಥ ನೋಡಿದರೆ ಆಶ್ಚರ್ಯ ಆಗುತ್ತಿದೆ. ಗಂಡ ಹೆಂಡತಿ ಎಂಬ ಸಂಬಂಧ ಕ್ಕೆ ಅಘಾದ ಗೌರವ ಇದೆ ಆದರೆ ಇಲ್ಲಿ ಒಬ್ಬ ತನ್ನ ಹೆಂಡತಿಯನ್ನೇ ಮಾರಿದ್ದಾನೆ .

ವ್ಯಕ್ತಿಯೊಬ್ಬ ತನ್ನ ಪತ್ನಿ ಯನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿರುವ ಆತಂಕಕಾರಿ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದೆ.

ವರದಿ ಪ್ರಕಾರ ಖೀರಾ ಬೆರುಕ್ ಎಂಬಾತ ತನ್ನ ಪತ್ನಿ ಪೂರ್ಣಿಮಾ ಭೋಯ್ ಜೊತೆ ಕೆಲಸಕ್ಕೆಂದು ಅಕ್ಟೋಬರ್ 30 ರಂದು ದೆಹಲಿಗೆ ಹೋಗಿದ್ದನು . ನಂತರ ದೆಹಲಿಗೆ ಹೋದ ಎರಡೇ ದಿನದಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನು ಆರೋಪಿ ಬೆರುಕ್ ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ.

ಅಪಾರ ಮೊತ್ತದ ಹಣ ಪಡೆದ ಬಳಿಕ ಪತ್ನಿಯನ್ನು ಆತನೊಂದಿಗೆ ಮದುವೆ ಸಹ ಮಾಡಿಸಿದ್ದಾನೆ.

ಈ ಕುರಿತು ಪೂರ್ಣಿಮಾ ಭೋಯ್ ನವೆಂಬರ್ 5ರಂದು ತನ್ನ ತಂದೆ ಕುಲಮಣಿ ಭೋಯ್‌ಗೆ ಕರೆ ಮಾಡಿ ತನ್ನ ಗಂಡನ ಕೃತ್ಯ ದ ಬಗ್ಗೆ ತಿಳಿಸಿದ್ದಾಳೆ .

ಮಗಳ ಕಷ್ಟ ಕೇಳಿದ ತಂದೆ ತಕ್ಷಣ ಬೆರುಕ್ ವಿರುದ್ಧ ನಾರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಾರ್ಲಾ ಪೊಲೀಸರು ಬೆರುಕ್‌ನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಆರೋಪಿ ಖೀರಾ ಬೆರುಕ್ ಪೊಲೀಸ್ ಕೈ ವಶದಲ್ಲಿದ್ದು ಹೆಚ್ಚಿನ ವಿಚಾರಣೆ ನಂತರ ಪೂರ್ಣ ವಿವರ ತಿಳಿದು ಬರಬೇಕಿದೆ.