ಹಿಜಾಬ್, ಪಠ್ಯ ಪರಿಷ್ಕರಣೆ ನಂತರ ಇದೀಗ 7 ಸಾವಿರ ವಿವೇಕ ಶಾಲೆಗಳಿಗೆ ಕೇಸರಿ ಬಣ್ಣ!!

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಹಿಜಾಬ್, ಪಠ್ಯ ಪರಿಷ್ಕರಣೆ ವಿವಾದದ ಬಳಿಕ ಇದೀಗ ಮತ್ತೊಂದು ವಿವಾದ ಭುಗಿಲೆದ್ದಿದೆ. ರಾಜ್ಯದಾದ್ಯಂತ ಸುಮಾರು 7 ಸಾವಿರಕ್ಕೂ ಹೆಚ್ಚು ವಿವೇಕ ಶಾಲೆಗಳಿಗೆ ಕೇಸರಿ ಬಣ್ಣವನ್ನು ಬಳಿಸಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಿದೆ.

ಶಿಕ್ಷಣ ಇಲಾಖೆ ಹೊಸದಾಗಿ ರಾಜ್ಯದಾದ್ಯಂತ ಬರೋಬ್ಬರಿ 7000ಕ್ಕೂ ಹೆಚ್ಚು ಶಾಲಾ ಕೊಠಡಿಗಳಿಗೆ ಸ್ವಾಮಿ ವಿವೇಕಾನಂದರ ನೆನಪಿನಲ್ಲಿ ವಿವೇಕ ಶಾಲೆ ಎಂದು ಹೆಸರಿಡಲು ಮುಂದಾಗಿದೆ. ಅಷ್ಟೇ ಅಲ್ಲದೆ, ಈ ಕೊಠಡಿಗಳಿಗೆ ಕೇಸರಿ ಬಣ್ಣವನ್ನು ಬಳಿಸಲು ಚಿಂತನೆ ನಡೆಸಿದೆ. ಶಿಕ್ಷಣ ಇಲಾಖೆಯ ಈ ನಡೆಯಿಂದ ಮುಸ್ಲಿಂ ಮುಖಂಡರು ಇದೀಗ ಖಂಡನೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆಯು ವಿವೇಕಾನಂದರ ಹೆಸರನ್ನು ಬಳಸಿಕೊಂಡು ಶಾಲೆಗಳನ್ನು ಕೇಸರಿಮಯ ಮಾಡಲು ಹೊರಟಿದೆ. ಈ ಪಠ್ಯಪುಸ್ತಕ ಪರಿಷ್ಕರಣೆಯ ಬಳಿಕ ಎರಡನೇ ಸುತ್ತಿನ ಕೇಸರೀಕರಣ ಆರಂಭ ಮಾಡಿದೆ ಎಂದು ಆರೋಪಿಸಿದ್ದಾರೆ.

Leave A Reply

Your email address will not be published.