WhatsApp : ನೀವು WhatsApp ಬಳಸೋದು ಯಾರಿಗೂ ತಿಳಿಯದ ಹಾಗೇ ಮಾಡುವ ಬಗೆ ಹೇಗೆ?
ಮೆಟಾ-ಮಾಲೀಕತ್ವದ ಜನಪ್ರಿಯ ವಾಟ್ಸಪ್ ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ವಾಟ್ಸಾಪ್ ಚಾಟ್, ವಾಟ್ಸಾಪ್ ಕಾಲ್, ಅಥವಾ ವಾಟ್ಸಾಪ್ ವೀಡಿಯೊ ಕಾಲ್ ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದ್ದು, ಹೆಚ್ಚಿನ ಜನರು ಬಳಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯದ ಮೂಲಕ ಜನರನ್ನು ಸೆಳೆಯುವ ವಾಟ್ಸಪ್ ಬಗ್ಗೆ ಕೆಲ ಕುತೂಹಲಕಾರಿ ವಿಚಾರಗಳಿವೆ.
ಇತ್ತೀಚಿಗಷ್ಟೇ ವಾಟ್ಸಾಪ್ ಕಮ್ಯೂನಿಟಿ, ಇನ್ಚಾಟ್ ಪೋಲ್, ಗ್ರೂಪ್ ಮಿತಿ ಹೆಚ್ಚಳದಂತಹ ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿರುವ ವಾಟ್ಸಾಪ್ ಇವುಗಳ ಜೊತೆಗೆ ಆನ್ಲೈನ್ ಪ್ರೆಸೆನ್ಸ್ ಎಂಬ ಹೊಸ ಫೀಚರ್ ಅನ್ನು ಸೇರ್ಪಡೆಗೊಳಿಸಿದೆ.
ಈ ಹೊಸ ಫೀಚರ್ಸ್ ವಾಟ್ಸಾಪ್ ಬಳಕೆದಾರರಿಗೆ ತಮ್ಮ ಆನ್ಲೈನ್ ಸ್ಟೇಟಸ್ ಅನ್ನು ಹೈಡ್ ಅಥವಾ ಮರೆ ಮಾಡಲು ಸಹಾಯ ಮಾಡಲಿದ್ದು, ಇದರ ಸಹಾಯದಿಂದ ಬಳಕೆದಾರರು ಆನ್ಲೈನ್ ಸ್ಟೇಟಸ್ ಅನ್ನು ಯಾರು ನೋಡಬಹುದು ಎಂಬುದನ್ನು ಕಂಟ್ರೋಲ್ ಮಾಡಬಹುದಾಗಿದೆ.
ಸಾಮಾನ್ಯವಾಗಿ, ವಾಟ್ಸಾಪ್ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವವರು ಆನ್ಲೈನಿನಲ್ಲಿದ್ದರೆ ‘online’ ಎಂದು ಗೋಚರಿಸುತ್ತದೆ. ಇದರಿಂದ ವಾಟ್ಸಾಪ್ ಬಳಸುತ್ತಿರುವ ವೇಳೆ ಗೌಪ್ಯತೆಯಿರುವುದಿಲ್ಲ.
ಆದರೆ, ಇದೀಗ, ವಾಟ್ಸಾಪ್ ತಂದಿರುವ ಆನ್ಲೈನ್ ಸ್ಟೆಟಸ್ ಪ್ರೆಸೆನ್ಸ್ ಫೀಚರ್ಸ್ ಸಾಕಷ್ಟು ಉಪಯೋಗಕಾರಿಯಾಗಿದ್ದು, ವಾಟ್ಸಾಪ್ ಬಳಕೆದಾರರು ತಮ್ಮ ಆನ್ಲೈನ್ ಸ್ಟೇಟಸ್ ಅನ್ನು ತಮ್ಮ. ಆಯ್ದ ಸಂಪರ್ಕಗಳಿಂದ ಮರೆಮಾಡಲು ಸಹಾಯ ಮಾಡಲಿದೆ. ಇದರಿಂದ ಬಳಕೆದಾರರು ಆನ್ಲೈನ್ ಸ್ಟೇಟಸ್ ಅನ್ನು ಯಾರು ನೋಡುತ್ತಾರೆ ಎಂಬುದನ್ನು ಕೂಡ ನಿರ್ಧರಿಸಬಹುದಾಗಿದೆ.
ಇದರ ಮೂಲಕ ತಮ್ಮ ಎಲ್ಲಾ ಸಂಪರ್ಕಗಳಿಗೆ ಆನ್ಲೈನ್ ಸ್ಟೇಟಸ್ನಲ್ಲಿರುವುದನ್ನು ತಿಳಿಯದಂತೆ ಮಾಡಿ ವಾಟ್ಸಾಪ್ ಅಪ್ಲಿಕೇಷನ್ ನಲ್ಲಿ ಸಕ್ರಿಯ ವಾಗಿಸಬಹುದು.
ಇದಕ್ಕಾಗಿ, ಆಂಡ್ರಾಯ್ಡ್ ಫೋನಿನಲ್ಲಿ ಆನ್ಲೈನ್ ಪ್ರೆಸೆನ್ಸ್ ಫೀಚರ್ ಬಳಸಲು ಹೀಗೆ ಮಾಡಬೇಕು.
ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಬೇಕು. ಬಳಿಕ ಮೇಲೆ ಇರುವ ಮೂರು ಚುಕ್ಕೆಗಳುಳ್ಳ ‘ಮೋರ್’ ಆಯ್ಕೆಯನ್ನು ಟ್ಯಾಪ್ ಮಾಡಿಕೊಂಡು ಈಗ ಸೆಟ್ಟಿಂಗ್ಗಳ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ ಗೌಪ್ಯತೆ ಟ್ಯಾಪ್ ಮಾಡಬೇಕು.
ನಂತರ ಲಾಸ್ಟ್ ಸೀನ್ ಮತ್ತು ಆನ್ಲೈನ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಈ ಬಳಿಕ ನನ್ನ ಸಂಪರ್ಕಗಳನ್ನು ಹೊರತುಪಡಿಸಿ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಈಗ, ನಿಮ್ಮ ಆನ್ಲೈನ್ ಸ್ಟೇಟಸ್ ಅನ್ನು ಮರೆಮಾಡಲು ಬಯಸುವ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿಕೊಂಡು ನಂತರ ಮುಗಿದಿದೆ (ಡನ್) ಎಂಬುದನ್ನು ಟ್ಯಾಪ್ ಮಾಡಬೇಕು.
ಇದೇ ರೀತಿ,ಐಫೋನಿನಲ್ಲಿ ಆನ್ಲೈನ್ ಪ್ರೆಸೆನ್ಸ್ ಫೀಚರ್ ಬಳಸಲು ಹೀಗೆ ಮಾಡಬೇಕು.
ನಿಮ್ಮ ಐಫೋನಿನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಬೇಕು. ಬಳಿಕ, ಸೆಟ್ಟಿಂಗ್ಗಳ ಟ್ಯಾಬ್ ಮೇಲೆ ಟ್ಯಾಪ್ ಮಾಡಬೇಕು. ಗೌಪ್ಯತೆ ಆಯ್ಕೆಯ= ಮೇಲೆ ಟ್ಯಾಪ್ ಮಾಡಿಕೊಂಡು ಈಗ, ನನ್ನ ಸಂಪರ್ಕಗಳನ್ನು ಟ್ಯಾಪ್ ಮಾಡಬೇಕು. ನಿಮ್ಮ ಆನ್ಲೈನ್ ಸ್ಥಿತಿಯನ್ನು ಮರೆಮಾಡಲು ಬಯಸುವ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಬೇಕು. ನಂತರ ಮುಗಿದಿದೆ (ಡನ್) ಎಂಬುದನ್ನು ಟ್ಯಾಪ್ ಮಾಡಬೇಕು.
ಈ ಹೊಸ ಫೀಚರ್ಸ್ ವಾಟ್ಸಾಪ್ ಬಳಕೆದಾರರಿಗೆ ತಮ್ಮ ಆನ್ಲೈನ್ ಸ್ಟೇಟಸ್ ಅನ್ನು ಹೈಡ್ ಅಥವಾ ಮರೆ ಮಾಡಲು ಸಹಾಯ ಮಾಡಲಿದ್ದು, ಇದರ ಸಹಾಯದಿಂದ ಬಳಕೆದಾರರು ತಮ್ಮ ಆನ್ಲೈನ್ ಸ್ಟೇಟಸ್ ಅನ್ನು ಯಾರು ನೋಡಬಹುದು ಎಂಬುದನ್ನು ಕಂಟ್ರೋಲ್ ಮಾಡಬಹುದಾಗಿದೆ.