ಹಣೆಗೆ ಬಿಂದಿ ಇಡದ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಮಹಾ ಕಾರ್ಯಕರ್ತ!!!
ಹಿಂದೂ ಸಂಸ್ಕೃತಿಯ ಪ್ರಕಾರ ಹೆಣ್ಣು ಮಕ್ಕಳು ಹಣೆಗೆ ಕುಂಕುಮ, ಕೈಗೆ ಬಳೆ ಹಾಕುವುದು ಪದ್ಧತಿ. ಆದರೆ, ಹಣೆಗೆ ಬಿಂದಿ, ಕೈಗೆ ಬಳೆ ಹಾಕದಿದ್ದರೆ ಅದು ತಪ್ಪು ಎಂದು ಹೇಳಲಾಗದು.
ಪ್ರತಿಯೊಬ್ಬರಿಗೂ ಅವರದ್ದೇ ಆದ ವಾಕ್ ಸ್ವಾತಂತ್ಯವಿದೆ. ಆದರೆ, ಹಣೆಗೆ ಬಿಂದಿ ಇಟ್ಟಿಲ್ಲವೆಂಬ ಕಾರಣಕ್ಕೆ ಮಾತನಾಡಲು ನಿರಾಕರಿಸಿದರೆ??? ಹೀಗೂ ಉಂಟೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಹೌದು!!.. ಹಣೆಗೆ ‘ಬಿಂದಿ’ ಇಡದ ದೂರದರ್ಶನದ ಮಹಿಳಾ ವರದಿಗಾರ್ತಿಯೊಂದಿಗೆ ಮಾತನಾಡಲು ಬಲಪಂಥೀಯ ನಾಯಕ ಸಂಭಾಜಿ ಭಿಡೆ ಅವರು ನಿರಾಕರಿಸಿರುವ ಘಟನೆ ನಡೆದಿದೆ.
ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭಿಡೆ ಭೇಟಿ ಮಾಡಿದ್ದಾರೆ. ಈ ಬಳಿಕ ಭಿಡೆ ಅವರು ಮಹಿಳಾ ವರದಿಗಾರ್ತಿಯೊಂದಿಗೆ ಮಾತನಾಡಲು ನಿರಾಕರಿಸಿರುವ ಭಿಡೆ ಅವರು ಮಹಿಳಾ ವರದಿಗಾರ್ತಿಯೊಂದಿಗೆ ಮಾತನಾಡಲು ನಿರಾಕರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ.
ಭಿಡೆಯವರು ಮರಾಠಿಯಲ್ಲಿ ಮಹಿಳಾ ವರದಿಗಾರರಿಗೆ ತನ್ನ ಬೈಟ್ ತೆಗೆದುಕೊಳ್ಳಲು ಬರುವ ಮೊದಲು ಬಿಂದಿಯನ್ನು ಹಾಕಬೇಕೆಂದು ಹೇಳುವುದು ಕೇಳುತ್ತದೆ. ಅಷ್ಟೇ ಅಲ್ಲದೇ, ಮಹಿಳೆ ಭಾರತ ಮಾತೆಯನ್ನು ಹೋಲುತ್ತಿದ್ದು, ಅವಳು ಬಿಂದಿಗೆ ಹಾಕದೆ ‘ವಿಧವೆ’ಯಂತೆ ಕಾಣಿಸಿಕೊಳ್ಳಬಾರದು ಎಂದು ವರದಿಗಾರ್ತಿಗೆ ಹೇಳುವುದು ಕೂಡ ಕೇಳಬಹುದು.
ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಭಿಡೆ ಅವರ ಹೇಳಿಕೆಗಳಿಗೆ ವಿವರಣೆಯನ್ನು ಕೋರಿ ನೋಟಿಸ್ ಜಾರಿಗೊಳಿಸಿದ್ದಾರೆ. ವಿವರಣೆ ಕೇಳಲು ಬಂದ ಮಹಿಳಾ ವರದಿಗಾರರು ಬಿಂದಿ ಹಾಕಬೇಕು ಎಂಬ ನಾಯಕನ ಮಾತನ್ನು ಹೇಳಿ ಬೆರಗಾಗಿದ್ದಾರೆ.